ರಾಮನಗರ: ದರ್ಗಾದಲ್ಲಿ‌ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನರು ಅಸ್ವಸ್ಥ

ದರ್ಗಾದಲ್ಲಿ ಪ್ರಸಾದ ಸೇವಿಸಿದ್ದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ರಾಮನಗರದ ಯಾರಬ್ ನಗರದಲ್ಲಿ ನಡೆದಿದೆ. ಪೀರನ್ ಷಾ ವಲಿ ದರ್ಗಾ ಉರುಸ್ ಪ್ರಯುಕ್ತ ಪ್ರಸಾದ ನೀಡಲಾಗಿತ್ತು. ಬಳಿಕ ವಾಂತಿ ಭೇದಿ ಶುರುವಾಗಿ ಅಸ್ವಸ್ಥರಾಗಿದ್ದಾರೆ.

ರಾಮನಗರ: ದರ್ಗಾದಲ್ಲಿ‌ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನರು ಅಸ್ವಸ್ಥ
ರಾಮನಗರದ ಯಾರಬ್ ನಗರದಲ್ಲಿರುವ ದರ್ಗಾದಲ್ಲಿ‌ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನರು ಅಸ್ವಸ್ಥ
Edited By:

Updated on: Nov 19, 2023 | 7:09 PM

ರಾಮನಗರ, ನ.19: ದರ್ಗಾದಲ್ಲಿ ಪ್ರಸಾದ ಸೇವಿಸಿದ್ದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ರಾಮನಗರದ (Ramanagara) ಯಾರಬ್ ನಗರದಲ್ಲಿ ನಡೆದಿದೆ. ಪೀರನ್ ಷಾ ವಲಿ ದರ್ಗಾ ಉರುಸ್ ಪ್ರಯುಕ್ತ ಪ್ರಸಾದ ನೀಡಲಾಗಿತ್ತು. ಬಳಿಕ 50ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಶುರುವಾಗಿ ಅಸ್ವಸ್ಥರಾಗಿದ್ದಾರೆ.

ದರ್ಗಾದಲ್ಲಿ ಮಧ್ಯಾಹ್ನ ಮಲಿದಾ ಎಂಬ ಸಿಹಿ ಪದಾರ್ಥವನ್ನು ನೀಡಲಾಗಿತ್ತು. ಇದನ್ನು ಸೇವಿಸಿದ ಬಳಿಕ ಭಕ್ತರಿಗೆ ವಾಂತಿ, ಭೇದಿಯಾಗಲು ಶುರುವಾಗಿದೆ. ಸಿಹಿ ತಿಂಡಿಯಲ್ಲಿ ವಿಷಕಾರಿ ಅಂಶ ಇರುವ ಬಗ್ಗೆ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಥುರಾದ ಜಿಲ್ಲಾಸ್ಪತ್ರೆಯಲ್ಲಿರುವ ಸಿಎಂಒ ಕಚೇರಿಯಲ್ಲಿ ಕ್ಲೋರಿನ್ ಗ್ಯಾಸ್ ಸೋರಿಕೆ, 10ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಅಸ್ವಸ್ಥ

ಸದ್ಯ, ಅಸ್ವಸ್ಥಗೊಂಡ ಜನರಿಗೆ ವೈದ್ಯರು ಗ್ಲೂಕೋಸ್ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಸಾದ ತಿಂದವರಲ್ಲಿ ಕೆಲವರು ನಿತ್ರಾಣಗೊಂಡಿದ್ದಾರೆ. ಅಲ್ಲದೆ, ವೈದ್ಯರ ಅನುಮಾನ ಹಿನ್ನೆಲೆ ರಾಮನಗರ ಪೊಲೀಸರು ಮಲಿದಾ ಸಿಹಿ ತಿಂಡಿಯ ಮಾದರಿಯನ್ನು ಪರೀಕ್ಷೆಗಾಗಿ ಪಡೆದಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಇಕ್ಬಾಲ್

ಜನರು ಅಸ್ವಸ್ಥಗೊಂಡ ಹಿನ್ನೆಲೆ ಶಾಸಕ‌ ಇಕ್ಬಾಲ್ ಹುಸೇನ್ ಅವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಸದ್ಯ ಅಸ್ವಸ್ಥರ ಆರೋಗ್ಯ ವಿಚಾರಣೆ ಮಾಡಿದ ಶಾಸಕರು ವೈದರ ಬಳಿ‌ ಮಾಹಿತಿ ಪಡೆದು, ಕೂಡಲೇ ಇನ್ನಷ್ಟು ಬೆಡ್ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 7:05 pm, Sun, 19 November 23