ರಾಮನಗರದ ಕುಂಬಳಗೋಡು ನೂತನ ಪೊಲೀಸ್ ಠಾಣೆಯ ವಿಶೇಷತೆ ಕೊಂಡಾಡಿದ ಗೃಹ ಸಚಿವ

ಕುಂಬಳಗೋಡಿನ ಏರಿಯಾವು ದೊಡ್ಡದಾಗಿದೆ. ನ್ಯಾಯ ಓದಗಿಸಿ, ಜನಸ್ನೇಹಿಯಾಗಿ ಕೆಲಸ ಮಾಡಿ ಎಂದು ಪೊಲೀಸರಿಗೆ ಸಲಹೆ ನೀಡಿದ್ದೆ‌ನೆ. ಪಕ್ಕದಲ್ಲಿನ ಹಂಪಾಪುರವು ಕಗ್ಗಲಿಪುರ ಪೊಲೀಸ್ ಠಾಣೆಗೆ ಸೇರಿದೆ. ಹಂಪಾಪುರವು ಗ್ರಾಮವು ಕುಂಬಳಗೋಡಿನಿಂದ 1 ಕಿ.ಮಿ ದೂರ ಇದ್ದರೇ, ಕಗ್ಗಲಿಪುರದಿಂದ 35 ಕಿ.ಮಿ ದೂರ ಇದೆ‌. ಹೀಗಾಗಿ ಹಂಪಾಪುರವನ್ನು ಕುಂಬಳಗೋಡು ಠಾಣಾ ವ್ಯಾಪ್ತಿಗೆ ಸೇರಿಸಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದರು.

ರಾಮನಗರದ ಕುಂಬಳಗೋಡು ನೂತನ ಪೊಲೀಸ್ ಠಾಣೆಯ ವಿಶೇಷತೆ ಕೊಂಡಾಡಿದ ಗೃಹ ಸಚಿವ
ಕುಂಬಳಗೋಡು ಪೊಲೀಸ್ ಠಾಣೆ
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ವಿವೇಕ ಬಿರಾದಾರ

Updated on: Nov 15, 2023 | 1:23 PM

ರಾಮನಗರ ನ.15: ರಾಮನಗರ (Ramnagar) ಜಿಲ್ಲೆಯ ಕುಂಬಳಗೋಡು ಪೊಲೀಸ್ ಠಾಣೆ (Police Station) ಹಳೆಯದಾಗಿತ್ತು. 3.56 ಕೋಟಿ ರೂ.ಗಳಲ್ಲಿ ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ ವತಿಯಿಂದ ನೂತ‌ನ ಠಾಣೆ ನಿರ್ಮಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwara) ಹೇಳಿದರು. ಕುಂಬಳಗೋಡು ನೂತನ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಎಸ್.ಟಿ.ಸೋಮಶೇಖರ್ (ST Somashekar) ಅವರು ಪೊಲೀಸ್ ಠಾಣೆ ಮಂಜೂರು ಮಾಡಿಸಿದ್ದರು. ಈ ಪೊಲೀಸ್ ಠಾಣೆಯಲ್ಲಿ ಎನ್ನೆಲ್ಲ ಇರಬೇಕು ಎಲ್ಲವೂ ಇದೆ. ರಾಜ್ಯದ ಕೆಲ ಪೊಲೀಸ್ ಠಾಣೆಗಳು ಮಾತ್ರವೇ ಈ ಮಾದರಿಯಲ್ಲಿ ಅತ್ಯುತ್ತವಾಗಿವೆ ಎಂದು ಹೇಳಿದರು.

ಮಹಿಳಾ ಪೊಲೀಸರಿಗೆ ವಿಶ್ರಾಂತಿ ಗೃಹ, ಸ್ನಾನದ ಗೃಹವನ್ನು ನಿರ್ಮಿಸಲಾಗಿದೆ. ರೆಕಾರ್ಡ್​ಗಳನ್ನು ಇಡಲು ಪ್ರತ್ಯೇಕ ಕೊಠಡಿಯೂ ಇಲ್ಲಿದೆ. ನ್ಯಾಯಾಲಯದ ಅನುಮತಿ ಪಡೆದು ಹಳೆ ದಾಖಲೆಗಳನ್ನು ಸುಡಲು ಅವಕಾಶ ಪಡೆದಿದ್ದೇವೆ. ಆದರೆ, ಇಲ್ಲಿ ಹಳೆಯ ದಾಖಲೆಗಳನ್ನು ಇಡಬಹುದು. ಇಲ್ಲಿ ನಾಲ್ಕು ಜನ ಸಬ್ಇನ್ಸೆಪೆಕ್ಟರ್ ಇರಲಿದ್ದಾರೆ ಎಂದು ತಿಳಿಸಿದರು.

ಕುಂಬಳಗೋಡಿನ ಏರಿಯಾವು ದೊಡ್ಡದಾಗಿದೆ. ನ್ಯಾಯ ಓದಗಿಸಿ, ಜನಸ್ನೇಹಿಯಾಗಿ ಕೆಲಸ ಮಾಡಿ ಎಂದು ಪೊಲೀಸರಿಗೆ ಸಲಹೆ ನೀಡಿದ್ದೆ‌ನೆ. ಪಕ್ಕದಲ್ಲಿನ ಹಂಪಾಪುರವು ಕಗ್ಗಲಿಪುರ ಪೊಲೀಸ್ ಠಾಣೆಗೆ ಸೇರಿದೆ. ಹಂಪಾಪುರವು ಗ್ರಾಮವು ಕುಂಬಳಗೋಡಿನಿಂದ 1 ಕಿ.ಮಿ ದೂರ ಇದ್ದರೇ, ಕಗ್ಗಲಿಪುರದಿಂದ 35 ಕಿ.ಮಿ ದೂರ ಇದೆ‌. ಹೀಗಾಗಿ ಹಂಪಾಪುರವನ್ನು ಕುಂಬಳಗೋಡು ಠಾಣಾ ವ್ಯಾಪ್ತಿಗೆ ಸೇರಿಸಲಾಗುವುದು ಎಂದರು.

ಇದನ್ನೂ ಓದಿ: ವರ್ಗಾವಣೆಗೆ ಮೊರೆ ಹೋದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ 35ಕ್ಕೂ ಹೆಚ್ಚು ಸಿಬ್ಬಂದಿ!

ನಮ್ಮ ಪೊಲೀಸರು ಅತ್ಯಂತ ಸಶಕ್ತರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಕರಣಗಳನ್ನು ಬೇಧಿಸುವ ಕೆಲಸವೂ ಕೆಲ ಗಂಟೆಗಳಲೇ ಆಗುತ್ತಿದೆ. ನಮ್ಮ ಸರಕಾರವು ಟೆಕ್ನಾಲಜಿ ಬಳಸಿ ಅಪರಾಧಿಗಳನ್ನು ಬಂಧಿಸುತ್ತಿದೆ. ಕರ್ನಾಟಕ ಪೊಲೀಸ್ ಒಂದು ಹಂತಕ್ಕೆ ಮೇಲೇರಿದೆ. ವ್ಯವಸ್ಥಿತ, ಶಿಸ್ತುಬದ್ಧವಾದ ಇಲಾಖೆಯೇ ನಮ್ಮ ಕರ್ನಾಟಕ ಪೊಲೀಸ್ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಪೊಲೀಸ್ ಕಾನ್ಸೆಟೆವಲ್ ವರ್ಗಾವಣೆ ವಿಚಾರವಾಗಿ ಮಾತನಾಡಿದ ಅವರು ಜಿಲ್ಲಾ ಮಟ್ಟದಲ್ಲಿ ವರ್ಗಾವಣೆಗೆ ಎಸ್ಪಿಗೆ ಅವಕಾಶ ನೀಡಲಾಗಿತ್ತು. ಇತರೆ ಜಿಲ್ಲೆಯ ಕೇಂದ್ರ ಕಚೇರಿಗೆ ಮಾಹಿತಿ ನೀಡಬೇಕಿತ್ತು. ಆದರೆ ಈಗ ಸೆಂಟ್ರಲೈಸ್ ಮಾಡಿದ್ದೆವೆ. ಎಲ್ಲವೂ ಆನ್ ಲೈನ್ ಮಾಡಿ, ಕೌನ್ಸಿಲಿಂಗ್ ಮಾಡುತ್ತೆವೆ. ಒಮ್ಮೆ ವರ್ಗಾವಣೆಯಾದರೆ ಇಂತಿಷ್ಟು ವರ್ಷ ಕೆಲಸ ಮಾಡಲೇಬೇಕು. ಹೀಗಾಗಿ ವರ್ಗಾವಣೆ ಬಗ್ಗೆ ಗೊಂದಲಗಳಿವೆ. ಎಲ್ಲರಿಗೂ ವರ್ಗಾವಣೆ ನೀಡಲು ಸಾಧ್ಯವಿಲ್ಲ. ಆದ್ಯತೆ ಮೇರೆಗೆ ವರ್ಗಾವಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಎಸ್.ಟಿ.ಸೋಮಶೇಖರ್ ಅವರ ಕ್ಷೇತ್ರವಾಗಿದ್ದರಿಂದ ಅವರು ನಮ್ಮೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅವರಿಗೆ ಅನುದಾನ ಸೇರಿದಂತೆ ಎಲ್ಲ ಸೌಲಭ್ಯ ನೀಡುವುದು ಸರಕಾರದ ಕೆಲಸ. ಯಾರಿಗೆ ಏನು ಬೇಕು ಅವರು ಆರೋಪ ಮಾಡಿಕೊಳ್ಳಲಿ. ಶಾಸಕ ಮುನಿರತ್ನ ಅವರು ಕೇಳಿದರೆ ಅವರಿಗೂ ಅನುದಾನ ನೀಡುತ್ತೆವೆ. ಎಸ್.ಟಿ.ಸೋಮಶೇಖರ್ ಅವರು ನಮಗೆ ವಿಶೇಷವೆ. ನಾವಿಬ್ಬರು ಸ್ನೇಹಿತರು. ಹಿಂದೆ ಒಂದೇ ಪಕ್ಷದಲ್ಲಿದ್ದೆವು. ಅವರು ಹಿಂದೆ ನಮ್ಮ ಪಕ್ಷದ ನಾಯಕರಾಗಿದ್ದರು, ಜಿಲ್ಲಾಧ್ಯಕ್ಷರಾಗಿದ್ದರು. ವೈಯಕ್ತಿಕ ಸಂಬಂಧವೇ ಬೇರೆ, ರಾಜಕೀಯ ಸಂಬಂಧವೇ ಬೇರೆ ಎಂದು ಸ್ಪಷ್ಟನೆ ನೀಡಿದರು.

ನಿಮ್ಮನ್ನು ಕೇಳಿಯೇ ಎಸ್.ಟಿ.ಸೋಮಶೇಖರ್ ಅವರಿಗೆ ಪಕ್ಷದ ಶಾಲು ಹಾಕುತ್ತವೆ. ನಮ್ಮದೇ ಪಕ್ಷ ಇದೆ ನಮ್ಮ ಸಿಎಂ ಇದ್ದಾರೆ. ನಾನು ಯಾರ ಬಗ್ಗೆಯು ಮಾತನಾಡುವುದಿಲ್ಲ ಉತ್ತರ ನೀಡುವುದಿಲ್ಲ. ಆನೆ, ಒಂಟೆ ಬಂದಿದೆಯೋ ನಮಗೆ ಗೊತ್ತಿಲ್ಲ. ನಮ್ಮ ಪಕ್ಷದ ಅಧ್ಯಕ್ಷರಿದ್ದಾರೆ ಎಂದು ಮಾಜಿ ಶಾಸಕರಾದ ಮಂಜುನಾಥ್​, ಗೌರಿ ಶಂಕರ್​ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಉತ್ತರ ನೀಡದೆ ಜಾರಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ