ರಾಮನಗರ: ಮುಂದಿನ ಚುನಾವಣೆಗೆ ನಾನು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇನೆ. ನಮ್ಮ ಹಿಂದೂ ಕಾರ್ಯಕರ್ತರ ರಕ್ಷಣೆಗಾಗಿ ಸ್ಪರ್ಧೆ ಮಾಡ್ತೇನೆ ಎಂದು ರಾಮನಗರ ಪ್ರವಾಸಿ ಮಂದಿರದಲ್ಲಿ ಶ್ರೀ ರಾಮ ಸೇನೆ ಸಂಸ್ಥಾಪಕ, ಅಧ್ಯಕ್ಷ ಪ್ರಮೋದ್ ಮುತಾಲಿಕ್(Pramod Muthalik) ಸ್ಪಷ್ಟಪಡಿಸಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪ್ರಮೋದ್ ಮುತಾಲಿಕ್ ಮಾತನಾಡಿದ್ದು, ನಮ್ಮ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ, ರೌಡಿ ಶೀಟರ್ ಮಾಡಿದ್ದಾರೆ. ಹಸುಗಳನ್ನು ರಕ್ಷಿಸಿದವರ ಮೇಲೆ, ಹಿಂದೂ ಯುವತಿಯರನ್ನು ರಕ್ಷಣೆ ಮಾಡಿದವರ ಮೇಲೆ ರೌಡಿ ಶೀಟರ್ ಓಪನ್ ಮಾಡಿದ್ದಾರೆ. ಬಿಜೆಪಿ ಸರ್ಕಾರ ಆ ಕೇಸ್ಗಳನ್ನು ವಾಪಸ್ ಪಡೆದುಕೊಂಡಿಲ್ಲ. ಐದಾರು ಕ್ಷೇತ್ರದಲ್ಲಿ ಸರ್ವೆ ಮಾಡ್ತಾ ಇದ್ದೇನೆ. ಡಿಸೆಂಬರ್ ಎರಡನೇ ವಾರದಲ್ಲಿ ಯಾವ ಕ್ಷೇತ್ರ ಎಂದು ಫೈನಲ್ ಮಾಡ್ತೇನೆ. 25 ಹಿಂದೂ ಕಾರ್ಯಕರ್ತರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ ಎಂದು ತಿಳಿಸಿದರು.
ಇದೇ ವೇಳೆ ಮಂಗಳೂರು ಬಾಂಬ್ ಸ್ಫೋಟದ ಬಗ್ಗೆಯೂ ಮುತಾಲಿಕ್ ಪ್ರತಿಕ್ರಿಯೆ ನೀಡಿದರು. ಇತ್ತೀಚಿಗೆ ಮಂಗಳೂರು ನಗರದಲ್ಲಿ ಒಂದು ಬಾಂಬ್ ಬ್ಲಾಸ್ಟ್ ಪ್ರಕರಣ ನಡೆಯಿತು. ಬಹಳ ದೊಡ್ಡ ಮಟ್ಟದಲ್ಲಿ ವಿಸ್ತಾರಗೊಂಡಿದೆ. ಬೇರೆ ಬೇರೆ ರಾಜ್ಯಗಳಿಗೂ ಇದರ ಲಿಂಕ್ ಇರೋದು ಗೊತ್ತಾಗಿದೆ. ಪ್ರತಿ ಸಲ ಘಟನೆ ಆದ ನಂತರ ಜಾಗೃತರಾಗುತ್ತಾರೆ, ಹೇಳಿಕೆ ನೀಡ್ತಾರೆ. ಇಸ್ಲಾಮಿಕ್, ಭಯೋತ್ಪಾದನೆ ಕೆಲಸಗಳು ನಡೆಯುತ್ತಿವೆ. ಶಾರೀಕ್ ಅನ್ನೋನು ಹಿಂದೆ ಕೇಸ್ ನಲ್ಲಿ ಇದ್ದು ಜಾಮೀನಿನ ಮೇಲೆ ಬರ್ತಾನೆ. ಸರ್ಕಾರ ಕೇವಲ ಅಧಿಕಾರ, ಚುನಾವಣೆ ಅಂದುಕೊಂಡ್ರೆ ಆಗೊಲ್ಲ. ವಿರೋಧ ಪಕ್ಷದಲ್ಲೂ ಭಯೋತ್ಪಾದಕರು ಇದ್ದಾರೆ. ರಾಮನಗರದಲ್ಲೂ ಕೂಡ ಎಷ್ಟು ಜನರು ಸಿಕ್ಕಿಹಾಕಿಕೊಂಡಿದ್ದಾರೆ. ನಿಮ್ಮ ನಿಮ್ಮ ಅಧಿಕಾರದ ದಾಳಕ್ಕೆ ಉಪಯೋಗಿಸಿಕೊಳ್ಳಬೇಡಿ. ನಿಮ್ಮ ಅಧಿಕಾರದ ದಾಹಕ್ಕೆ ಭಯೋತ್ಪಾದನೆಗೆ ಬೆಂಬಲ ಕೋಡಬೇಡಿ. ಎಲ್ಲಿ ಮುಸ್ಲೀಂ ಮತಗಳು ನಿಮ್ಮ ಕೈಹಿಡಿಯೊಲ್ಲ ಎಂದು ಅವರಿಗೆ ಬೆಂಬಲ ಕೊಡೋದು ಬಿಡಬೇಕು ಎಂದು ಕಿಡಿಕಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ವೋಟು ಒಡೆಯುವ ಉದ್ದೇಶದಿಂದ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿದೆ: ಪ್ರಮೋದ್ ಮುತಾಲಿಕ್
ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಾವು ನಿರಂತರವಾಗಿ ಹೋರಾಟ ಮಾಡ್ತಾವೆ
ಎನ್ಐಎ ನಿಮ್ಮ ನಿರ್ಲಕ್ಷ್ಯದಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ. ನೀವು, ನಿಮ್ಮ ಮಕ್ಕಳು ಇದೇ ದೇಶದಲ್ಲಿ ಬದುಕಬೇಕಿದೆ. ಪೋಲಿಸರು ಮತ್ತು ಸರ್ಕಾರದ ವೈಫಲ್ಯ ಎದ್ದು ಕಾಣ್ತಿದೆ. ಎನ್ಐಎ ಸಂಸ್ಥೆಯ ಒಂದೇ ಒಂದು ವಿಶೇಷ ಬ್ರಾಂಚ್ ಕೂಡ ಇಲ್ಲ. ಕಳೆದ ಹಲವು ವರ್ಷಗಳಿಂದ ಹಲವು ಸಂಘ ಸಂಸ್ಥೆಗಳು ಹೋರಾಟ ಮಾಡುತ್ತಾ ಬಂದಿವೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಾವು ನಿರಂತರವಾಗಿ ಹೋರಾಟ ಮಾಡ್ತಾನೆ ಇರ್ತೆವೆ. ಎಸ್ ಡಿಫಿಐ ಹಾಗೂ ಪಿಎಫ್ ಐ ಬ್ಯಾನ್ ಮಾಡಿ ಎಂದು ಹೋರಾಟ ಮಾಡಿದ್ದೇವೆ. ಇದೀಗ ಪಿಎಫ್ಐ ನಿಷೇಧ ಮಾಡಿದ್ದಾರೆ. ಕಳೆದ ಸಾಕಷ್ಟು ಪ್ರಕರಣದಲ್ಲಿ ಎಸ್ ಡಿಪಿಐನ ಸಂಘಟನೆಯವರು ಭಾಗಿಯಾಗಿದ್ದಾರೆ. ಎಸ್ಡಿಪಿಐ ಬ್ಯಾನ್ ಮಾಡದೇ ಇರೋದು ಬಿಜೆಪಿಯ ಲಾಭಕ್ಕೆ ಇಟ್ಟುಕೊಂಡಿದೆ. ಎಸ್ಡಿಪಿಐ ಒಂದು ದೇಶದ್ರೋಹಿ ಸಂಘಟನೆ. ಇದೊಂದು ಕ್ಯಾನ್ಸರ್ ರೀತಿ ಇದ್ದ ಹಾಗೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಲವ್ ಜಿಹಾದ್ ನಿಯಂತ್ರಣಕ್ಕೆ ಪ್ರತ್ಯೇಕ ಕಾಯಿದೆ ರೂಪಿಸಬೇಕು
ಲವ್ ಜಿಹಾದ್ ಸಂಬಂಧ ಹಿಂದೂ ಹುಡುಗಿಯರಿಗೆ ಮನವಿ ಮಾಡಿ ಎಚ್ಚರಿಕೆ ನೀಡುತ್ತಿದ್ದೇನೆ. ದಯವಿಟ್ಟು ಪೀಸ್ ಪೀಸ್ ಆಗಬೇಡಿ. ಯಾರನ್ನು ಲವ್ ಮಾಡ್ತಾ ಇದ್ದೀನಿ ಅನ್ನೋದು ಯೋಚನೆ ಮಾಡಿ. ಯಾವ ಪ್ರೀತಿ ಕೂಡ ಇಲ್ಲ ಅದೆಲ್ಲವೂ ಮೋಸ. ಶ್ರದ್ದಾ ಘಟನೆಯಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಪೋಷಕರು ಕೂಡ ಇದರ ಬಗ್ಗೆ ಎಚ್ಚರಗೊಳ್ಳಬೇಕು ಎಂದರು.
ಲವ್ ಜಿಹಾದ್ ನಿಯಂತ್ರಣಕ್ಕೆ ಪ್ರತ್ಯೇಕ ಕಾಯಿದೆ ರೂಪಿಸಬೇಕು. ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗೆ ವಿಶೇಷವಾಗಿ ಮನವಿ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಲವ್ ಜಿಹಾದ್ ದಿನೇ ದಿನೇ ಹೆಚ್ಚಾಗುತ್ತಿದೆ. ಲವ್ ಜಿಹಾದ್ ವಿರುದ್ದ ಮೊದಲು ಧ್ವನಿ ಎತ್ತಿದವನೇ ನಾನು. 3 ಸಾವಿರ ಹೆಣ್ಣು ಮಕ್ಕಳನ್ನ ಲವ್ ಜಿಹಾದ್ ನಿಂದ ನಾವು ಪಾರು ಮಾಡಿದ್ದೇವೆ. ಹಿಂದೂ ಹೆಣ್ಣು ಮಕ್ಕಳು ಪ್ರೀತಿ ಮಾಡಬೇಕಾದರೆ ಅಬ್ದುಲ್ಲಾ, ಅಶೋಕ್ ವ್ಯತ್ಯಾಸ ಅರಿತು ಪ್ರೀತಿ ಮಾಡಬೇಕು. ಇಲ್ಲವಾದರೆ ದೆಹಲಿಯಲ್ಲಿ ನಡೆದಂತೆ ಹಿಂದೂ ಹೆಣ್ಣು ಮಕ್ಕಳು ತುಂಡು ತುಂಡಾಗಿ ಬಲಿಯಾಗುತ್ತಾರೆ. ನಿಮ್ಮ ಜೊತೆಗೆ ಹಿಂದೂ ಧರ್ಮವನ್ನೂ ಬಲಿ ಕೊಡಬೇಡಿ. ಲವ್ ಜಿಹಾದ್ ನಿಯಂತ್ರಣವಾಗಬೇಕಾದರೆ ಪ್ರತ್ಯೇಕ ಕಾನೂನು ರೂಪಿಸಬೇಕು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:44 pm, Wed, 23 November 22