ಬಿಡದಿ‌: ಕೆರೆ ಕಟ್ಟೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಜಲಸಮಾಧಿ

ಮೃತ ಬಾಲಕರಿಬ್ಬರೂ ರಾಮನಗರ ‌ತಾಲೂಕಿನ ಬಿಡದಿ ಪಟ್ಟಣದ ನಿವಾಸಿಗಳು. ನಿನ್ನೆ ಗುರುವಾರ ಇಬ್ಬರೂ ಈಜಾಡಲು ಹೋಗಿದ್ದರು. ಕಟ್ಟೆಯಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ. ರಾತ್ರಿ ಮನೆಗೆ ಬಾರದ ಹಿನ್ನೆಲೆ ಪೋಷಕರು ‌ಹುಡುಕಾಟ ನಡೆಸಿದ್ದರು. ಇಂದು ಕುಂಬಾರ ಕಟ್ಟೆಯಲ್ಲಿ ಬಾಲಕರ ಮೃತ ದೇಹಗಳು‌ ಪತ್ತೆಯಾಗಿವೆ.

ಬಿಡದಿ‌: ಕೆರೆ ಕಟ್ಟೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಜಲಸಮಾಧಿ
ಬಿಡದಿ‌: ಕೆರೆ ಕಟ್ಟೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಜಲಸಮಾಧಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 22, 2021 | 9:31 AM

ರಾಮನಗರ: ರಾಮನಗರ ತಾಲೂಕಿನ ಕೆಂಚನಗುಪ್ಪೆ ಗ್ರಾಮದ ಕುಂಬಾರ ಕಟ್ಟೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವಿಗೀಡಾಗಿರುವ ಘಟನೆ ನಡೆದಿದೆ. ಕೌಶಿಕ್(11) ಮತ್ತು ಕರಣ್(12) ಮೃತ ಬಾಲಕರು. ಬಿಡದಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಬಾಲಕರಿಬ್ಬರೂ ರಾಮನಗರ ‌ತಾಲೂಕಿನ ಬಿಡದಿ ಪಟ್ಟಣದ ನಿವಾಸಿಗಳು. ನಿನ್ನೆ ಗುರುವಾರ ಇಬ್ಬರೂ ಈಜಾಡಲು ಹೋಗಿದ್ದರು. ಕಟ್ಟೆಯಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ. ರಾತ್ರಿ ಮನೆಗೆ ಬಾರದ ಹಿನ್ನೆಲೆ ಪೋಷಕರು ‌ಹುಡುಕಾಟ ನಡೆಸಿದ್ದರು. ಇಂದು ಕುಂಬಾರ ಕಟ್ಟೆಯಲ್ಲಿ ಬಾಲಕರ ಮೃತ ದೇಹಗಳು‌ ಪತ್ತೆಯಾಗಿವೆ.

ಪ್ರಿಯಕರನೊಂದಿಗೆ ಕೈಜೋಡಿಸಿ, ಗಂಡನನ್ನೆ ಕೊಂದ ಪತ್ನಿ!

ಕಲಬುರಗಿ: ಪ್ರಿಯಕರನೊಂದಿಗೆ ಕೈಜೋಡಿಸಿದ ಪತ್ನಿ ತನ್ನ ಗಂಡನನ್ನೆ ಕೊಂದಿದ್ದಾಳೆ. ಕೊಲೆ ಮಾಡಿ ಕುಡಿದು ಸತ್ತಿದ್ದಾನೆ ಅಂತಾ ಹೆಂಡತಿ ಕತೆ ಕಟ್ಟಿದ್ದಳು. ಇನ್ನು ಕುಟುಂಬದವರೂ ಸಹ ಕುಡಿದು ಸತ್ತಿದ್ದಾನೆ ಅಂತಾ ನಂಬಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಅಂತ್ಯ ಸಂಸ್ಕಾರ ಆಗಿ ಎರಡು ತಿಂಗಳ ಬಳಿಕ ಕೊಲೆಯ ರಹಸ್ಯ ಬಯಲಾಗಿದೆ.

ರಾಜಪ್ಪ ರೆಡ್ಡಿ( 38) ಹೆಂಡತಿ ಮತ್ತು ಪ್ರಿಯಕರನಿಂದ ಕೊಲೆಯಾದ ವ್ಯಕ್ತಿ. ಪತ್ನಿ ಅನಸೂಯಾ ಪ್ರಿಯಕರ ಶ್ರೀಶೈಲ್ ಜೊತೆ ಸೇರಿ ಪತಿ ರಾಜಪ್ಪನ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಈರ್ನಾಪಲ್ಲಿಯಲ್ಲಿ ಘಟನೆ ನಡೆದಿದೆ. ಕಳೆದ ಆಗಸ್ಟ್ 24 ರಂದು ರಾಜಪ್ಪ ರೆಡ್ಡಿ ಕೊಲೆಯಾಗಿದ್ದ.

ಗಂಡನ ಸಾವಿನ ಬಳಿಕ ಪ್ರಿಯಕರನೊಂದಿಗೆ ಸರಸವಾಡುವಾಗ ಹೆಂಡತಿ ಸಿಕ್ಕಿಬಿದ್ದಿದ್ದಾಳೆ. ಗ್ರಾಮಸ್ಥರು ಪ್ರಿಯಕರನನ್ನ ಕಂಬಕ್ಕೆ ಕಟ್ಟಿ ಥಳಿಸಿದಾಗ ಅಸಲಿ ಕಥೆ ಬಾಯಿಬಿಟ್ಟಿದ್ದಾನೆ. ರಾಜಪ್ಪ ರೆಡ್ಡಿ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ತೆಲಂಗಾಣದ ಅಂತಾವರಂಗೆ ಪತ್ನಿಯ ಮೆನೆಗೆ ತೆರಳಿದ್ದ. ಕೆಲ ತಿಂಗಳುಗಳ ಕಾಲ ಅಂತಾವರಂ ನಲ್ಲಿಯೇ ರಾಜಪ್ಪ ರೆಡ್ಡಿ ಉಳಿದಿದ್ದ. ಆಗ ಪತ್ನಿ ಅನುಸೂಯಾ ಪಕ್ಕದ ಮನೆಯ ಶ್ರೀಶೈಲ್ ಜೊತೆ ಅಕ್ರಮ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಗೊತ್ತಾದ ತಕ್ಷಣ ರಾಜಪ್ಪರೆಡ್ಡಿ ತನ್ನ ಪತ್ನಿ ಅನುಸೂಯಾಳನ್ನು ತವರು ಮನೆಯಿಂದ ಕರೆದುಕೊಂಡು ಬಂದಿದ್ದ.

ಆದರೆ ಗಂಡನ ಮನೆಗೆ ಬಂದ‌ ನಂತರವೂ ಪತ್ನಿಯ ಲವ್ವಿ ಡವ್ವಿ ಮುಂದುವರಿದಿದೆ. ಹೆಂಡತಿಯ ಲವ್ವಿ ಡವ್ವಿಯಿಂದ ರಾಜಪ್ಪ ರೆಡ್ಡಿ ಬೆಸತ್ತಿದ್ದ. ಕುಡಿತದ ಚಟ ಹೊಂದಿದ್ದ ರಾಜಪ್ಪ ರೆಡ್ಡಿಗೆ ಪತ್ನಿ ಮತ್ತು ಪ್ರಿಯಕರ ಕಂಠ ಪೂರ್ತಿ ಕುಡಿಸಿ ಮಾತ್ರೆ ನೀಡಿದ್ದರು. ಕುಡಿದು ಮಾತ್ರೆ ಸೇವಿಸಿದರೂ ರಾಜಪ್ಪ ರೆಡ್ಡಿ ಸಾಯಲಿಲ್ಲ. ಕೊನೆಗೆ ಆತನ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಗಂಡನ ಕೊಲೆ ಮಾಡಿದ ಪತ್ನಿ ಅನುಸೂಯಾ ಮತ್ತು ಪ್ರಿಯಕರ ಶ್ರೀಶೈಲನನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಮುಧೋಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ramanagara bidadi 2 boys while swimming drown in lake)

Published On - 9:20 am, Fri, 22 October 21

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?