ರಾಮನಗರ: ಜಿಲ್ಲೆಯ ಚನ್ನಪಟ್ಟಣದ ಸಾತನೂರು ರಸ್ತೆಯಲ್ಲಿ ಸುಮಾರು ನೂರಾರು ಎಕರೆ ಪ್ರದೇಶದಲ್ಲಿ ಪ್ರಾಧಿಕಾರದ ವತಿಯಿಂದ 2000ನೇ ಸಾಲಿನಲ್ಲಿ ಕಣ್ವ ಬಡಾವಣೆಯನ್ನ ನಿರ್ಮಾಣ ಮಾಡಿ ಮಾರಾಟ ಮಾಡಲಾಗಿದೆ. ಸುಮಾರು 989 ನಿವೇಶನಗಳಲ್ಲಿ 880 ಮಂದಿಗೆ 2011ರಲ್ಲಿ ಹಂಚಿಕೆ ಮಾಡಲಾಗಿದೆ. ಆದರೆ ಪ್ರಾಧಿಕಾರ ಹಂಚಿಕೆ ಮಾಡಿ ಯಡವಟ್ಟು ಮಾಡಿದ್ದು, ಬಡಾವಣೆಯ ನಿವೇಶನದಾರರಿಗೆ ಸ್ಥಳೀಯ ಸಂಸ್ತೆಯಿಂದ ಇ ಖಾತೆ ಸಿಗುತ್ತಿಲ್ಲ. ಅಲ್ಲದೆ ಖಾತೆ ಇಲ್ಲದ ಕಾರಣ ಮಾರಾಟ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ.
ಇನ್ನು ನಿವೇಶನದಾರರಿಗೆ ಖಾತೆ ಆಗದೇ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಒಂದು ಕಡೆ ಆದರೆ ಮತ್ತೊಂದು ಕಡೆ ಮೂಲಭೂತ ಸೌಕರ್ಯಗಳು ಲೇಔಟ್ಗೆ ಇಲ್ಲದಂತೆ ಆಗಿದೆ. ಯುಜಿಡಿ, ಚರಂಡಿ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸೌಲಭ್ಯವನ್ನು ಕೂಡ ಒದಗಿಸಿಲ್ಲ. ಹೀಗಾಗಿ ಮೂಲಭೂತ ಸೌಕರ್ಯಗಳು ಇಲ್ಲದೆ ಇರುವುದರಿಂದ ಬಡಾವಣೆ ಹಾಳುಕೊಂಪೆಯಾಗಿ ಮಾರ್ಪಟ್ಟಿದೆ. ಈ ಕುರಿತು ಸಾಕಷ್ಟು ಬಾರಿ ನಿವೇಶನದಾರರು ಮನವಿ ಮಾಡಿದ್ರು ಕೂಡ ಸಂಬಂಧಪಟ್ಟವರು ಯಾರು ಕೂಡ ತಲೆ ಕೆಡಿಸಿಕೊಂಡಿಲ್ಲ. ಇನ್ನು ಈ ಬಗ್ಗೆ ರಾಮನಗರ ಅಭಿವೃದ್ದಿ ಪ್ರಾಧಿಕಾರದ ಆಯುಕ್ತರನ್ನ ಕೇಳಿದ್ರೆ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎನ್ನುತ್ತಿದ್ದಾರೆ.
ಇದನ್ನೂ ಓದಿ:ರಾಮನಗರ: ಅಂತರ್ ಜಿಲ್ಲಾ ಮನೆ, ಸರಗಳ್ಳರ ಬಂಧನ; 20 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ
ಒಟ್ಟಾರೆ ಲಕ್ಷಾಂತರ ರೂ. ಕಟ್ಟಿ ನಿವೇಶನ ಖರೀದಿಸಿದ ಜನರಿಗೆ ಮೂಲಸೌಕರ್ಯ ಹಾಗೂ ಇ ಖಾತೆ ಸಿಗದೇ ಪರದಾಟ ನಡೆಸುತ್ತಿದ್ದಾರೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಲಕ್ಷ್ಯವಹಿಸಿ ಜನರ ಸಮಸ್ಯೆಯನ್ನ ಬಗೆಹರಿಸಬೇಕಾಗಿದೆ.
ವರದಿ: ಪ್ರಶಾಂತ್ ಹುಲಿಕೆರೆ ಟಿವಿ9 ರಾಮನಗರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ