ರಾಮನಗರ: ತೆಂಗಿನ ಕಾಯಿ ಅನ್ಕೊಂಡು ತಪಾಸಣೆ; ಅಷ್ಟರಲ್ಲೆ ಸಿಡಿದ ನಾಡ ಬಾಂಬ್!

ಮಾಟಮಂತ್ರ ಮಾಡಿಸಿಟ್ಟ ತೆಂಗಿನಕಾಯಿ ಎಂದು ಪಾಷಾ ಅವರು ಪರಿಶೀಲಿಸುತ್ತಿದ್ದರು. ಈ ವೇಳೆ ಈ ಅವಘಡ ನಡೆದಿದ್ದು, ಕಾಡುಹಂದಿ ಬೇಟೆಗೆ ಇಟ್ಟಿದ್ದ ನಾಡಬಾಂಬ್ ಸ್ಫೋಟವಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ನಂಜಪ್ಪ ರೈಸ್ ಮಿಲ್​ನಲ್ಲಿ ಕೆಲಸ ಮಾಡುತ್ತಿದ್ದ ನೌಷಾದ್ ಪಾಷಾಗೆ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ರಾಮನಗರ: ತೆಂಗಿನ ಕಾಯಿ ಅನ್ಕೊಂಡು ತಪಾಸಣೆ; ಅಷ್ಟರಲ್ಲೆ ಸಿಡಿದ ನಾಡ ಬಾಂಬ್!
ಕನಕಪುರದಲ್ಲಿ ನಾಡಬಾಂಬ್​ ಸ್ಪೋಟ
Updated By: ಕಿರಣ್ ಹನುಮಂತ್​ ಮಾದಾರ್

Updated on: Dec 03, 2023 | 3:05 PM

ರಾಮನಗರ, ಡಿ.03: ತೆಂಗಿನಕಾಯಿ ಎಂದು ಭಾವಿಸಿ ಪರಿಶೀಲಿಸುತ್ತಿದ್ದಾಗ ನಾಡಬಾಂಬ್ ಸ್ಫೋಟವಾದ ಘಟನೆ ರಾಮನಗರ (Ramanagara) ಜಿಲ್ಲೆಯ ಕನಕಪುರ ತಾಲೂಕಿನ ನೇರಳಹಟ್ಟಿ ಗ್ರಾಮದಲ್ಲಿ ನಡೆದಿದೆ. ನಾಡಬಾಂಬ್ ಸ್ಫೋಟದಿಂದ ನೌಷಾದ್ ಪಾಷಾ(29) ಎಂಬುವವರಿಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ.

ಮಾಟಮಂತ್ರ ಮಾಡಿಸಿಟ್ಟ ತೆಂಗಿನಕಾಯಿ ಎಂದು ಪರಿಶೀಲನೆ ವೇಳೆ ಅವಘಡ

ಮಾಟಮಂತ್ರ ಮಾಡಿಸಿಟ್ಟ ತೆಂಗಿನಕಾಯಿ ಎಂದು ಪಾಷಾ ಅವರು ಪರಿಶೀಲಿಸುತ್ತಿದ್ದರು. ಈ ವೇಳೆ ಈ ಅವಘಡ ನಡೆದಿದ್ದು, ಕಾಡುಹಂದಿ ಬೇಟೆಗೆ ಇಟ್ಟಿದ್ದ ನಾಡಬಾಂಬ್ ಸ್ಫೋಟವಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ನಂಜಪ್ಪ ರೈಸ್ ಮಿಲ್​ನಲ್ಲಿ ಕೆಲಸ ಮಾಡುತ್ತಿದ್ದ ನೌಷಾದ್ ಪಾಷಾಗೆ ಗಾಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕನಕಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಕೇರಳದಲ್ಲಿ ಮತ್ತೆ ಬಾಂಬ್ ಸದ್ದು, ಮನೆಯ ಮೇಲೆ ದುಷ್ಕರ್ಮಿಗಳಿಂದ ನಾಡ ಬಾಂಬ್ ದಾಳಿ, ಇಬ್ಬರಿಗೆ ಗಂಭೀರ ಗಾಯ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ಡೇಟ್​ ಆಗುತ್ತಿದೆ….