ಕುಮಟಾ: ಬಾಳಿಗಾ ಕಾಲೇಜು ಆವರಣದಲ್ಲಿ ನಾಡ ಬಾಂಬ್ ರೂಪದ ವಸ್ತು ಪತ್ತೆ

Crime News: ಆಕೃತಿ ಬಾಂಬ್ ರೂಪದಲ್ಲಿ ಇರುವುದರಿಂದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಶ್ವಾನ ದಳ ಹಾಗೂ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದೆ. ಘಟನೆಯಿಂದ ಜನರಲ್ಲಿ ಆತಂಕ ಮನೆಮಾಡಿದೆ.

ಕುಮಟಾ: ಬಾಳಿಗಾ ಕಾಲೇಜು ಆವರಣದಲ್ಲಿ ನಾಡ ಬಾಂಬ್ ರೂಪದ ವಸ್ತು ಪತ್ತೆ
ಕಾಲೇಜು ಆವರಣದಲ್ಲಿ ನಾಡ ಬಾಂಬ್ ರೂಪದ ವಸ್ತು ಪತ್ತೆ

ಕಾರವಾರ: ಜಿಲ್ಲೆಯ ಕುಮಟಾ ತಾಲೂಕಿನ ಬಾಳಿಗಾ ಕಾಲೇಜು ಆವರಣದಲ್ಲಿ ನಾಡ ಬಾಂಬ್ ರೂಪದ ವಸ್ತು ಪತ್ತೆ ಆಗಿದೆ. ಸ್ಥಳಕ್ಕೆ ಅಗ್ನಿಶಾಮಕ, ಶ್ವಾನದಳ, ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಆಕೃತಿ ಬಾಂಬ್ ರೂಪದಲ್ಲಿ ಇರುವುದರಿಂದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಶ್ವಾನ ದಳ ಹಾಗೂ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದೆ. ಘಟನೆಯಿಂದ ಜನರಲ್ಲಿ ಆತಂಕ ಮನೆಮಾಡಿದೆ.

ಗದಗ: ನಾಪತ್ತೆಯಾಗಿದ್ದ ಹೈಸ್ಕೂಲ್ ವಿದ್ಯಾರ್ಥಿನಿ ಶವವಾಗಿ ಪತ್ತೆ
ನಾಪತ್ತೆಯಾಗಿದ್ದ ಹೈಸ್ಕೂಲ್ ವಿದ್ಯಾರ್ಥಿನಿ ಶವವಾಗಿ ಪತ್ತೆಯಾದ ದುರ್ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಈ ಮೊದಲು ನಾಪತ್ತೆಯಾಗಿದ್ದಳು. ಇದೀಗ ಕೆಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ದುಷ್ಕರ್ಮಿಗಳು ಕೊಲೆಗೈದು ಶವ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಶಿವಾನಂದ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು: ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಶವಪತ್ತೆ
ಬೆಂಗಳೂರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ ಆಗಿದೆ. ಎಲ್.ಆರ್. ಸ್ಟ್ರೀಟ್​ನ ಪ್ರತಾಪ್ ಫ್ಯಾಷನ್ಸ್​ ಶಾಪ್​​​ನಲ್ಲಿ ಶವ ಪತ್ತೆಯಾಗಿದೆ. ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿರುವ ಪ್ರತಾಪ್ ಫ್ಯಾಷನ್ಸ್ ಇಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪ್ರತಾಪ್ ಸಿಂಗ್ (22) ಎಂಬವರ ಶವ ಪತ್ತೆಯಾಗಿದೆ. ಸಿ.ಟಿ.ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Crime News ಉದ್ಯಮಿ ಶ್ರೀನಿವಾಸನಾಯ್ಡು‌ ಕಾರು ಸುಟ್ಟ ಪ್ರಕರಣ: ಸದಾಶಿವನಗರ ಪೊಲೀಸರಿಂದ ಐವರು ಆರೋಪಿಗಳ ಬಂಧನ

ಇದನ್ನೂ ಓದಿ: Kolar Cyber Crime: ಭಾರತೀಯ ಸೇನೆ ಹೆಸರಿನಲ್ಲಿ ಕೋಲಾರ ಎಪಿಎಂಸಿ ಮಂಡಿ ಮಾಲೀಕನಿಗೆ ವಂಚನೆ!

Click on your DTH Provider to Add TV9 Kannada