Ramanagara: ವರ್ಷದ ನಂತರ ಸಿಕ್ತು ಅಪರಿಚಿತ ಮಹಿಳೆಯ ಕೊಲೆ ಪ್ರಕರಣದ ಸುಳಿವು, ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 12, 2023 | 1:58 PM

ಜಿಲ್ಲೆಯ ಚನ್ನಪಟ್ಟಣದಲ್ಲಿ ವರ್ಷದ ಹಿಂದೆ ಕೊಲೆ ಮಾಡಲಾಗಿದ್ದ ಅಪರಿಚಿತ ಮಹಿಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಕೆಯ ಸುಳಿವು ಪತ್ತೆಯಾಗಿದ್ದು, ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.

Ramanagara: ವರ್ಷದ ನಂತರ ಸಿಕ್ತು ಅಪರಿಚಿತ ಮಹಿಳೆಯ ಕೊಲೆ ಪ್ರಕರಣದ ಸುಳಿವು, ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ
ರಾಮನಗರ ಎಸ್​ ಪಿ ಸಂತೋಷ್ ಬಾಬು ಕೆ
Follow us on

ರಾಮನಗರ: 2021ಆಕ್ಟೋಬರ್ 9 ರ ಬೆಳ್ಳಂಬೆಳಗ್ಗೆ ಅಪರಿಚಿತ ಮಹಿಳೆಯ ಕಾಲು ವಾಟರ್ ಹೆಡ್ ಟ್ಯಾಂಕ್​ನ ಕೆಳಭಾಗದಲ್ಲಿ ಇದ್ದ ವಾಲ್​ನಲ್ಲಿ ಪತ್ತೆಯಾಗಿತ್ತು. ಆದಾದ ನಂತರ ಕೆಲವೇ ದಿನಗಳಲ್ಲಿ ಮಹಿಳೆಯ ಮೃತದೇಹದ ಭಾಗಗಳು ಕೂಡ ಪತ್ತೆಯಾಗಿತ್ತು. ಈ ಸಂಬಂಧ ಚನ್ನಪಟ್ಟಣ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆದರೆ ಅಪರಿಚಿತ ಮಹಿಳೆಯನ್ನ ಯಾರು, ಏತಕ್ಕಾಗಿ ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಆದರೆ ಇದೀಗ ಮಹಿಳೆಯ ಬಗ್ಗೆ ಮಾಹಿತಿ ದೊರೆತಿದೆ. ಬೆಂಳೂರಿನ ದೇವನಹಳ್ಳಿಯ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಮಹಿಳೆಯ ಮೃತದೇಹ ಎಂಬುದು ಗೊತ್ತಾಗಿದ್ದು, ಪ್ರೀಯಕರನ ಮಸಲತ್ತಿಗೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ವಿಶೇಷ ತಂಡವನ್ನ ರಚಿಸಿ ತನಿಖೆ ಆರಂಭಿಸಿದ್ದಾರೆ.

ಪ್ರಾರಂಭದಲ್ಲಿ ಕೊಲೆ ಪ್ರಕರಣವನ್ನ ದಾಖಲಿಸಿಕೊಂಡಿದ್ದ ಚನ್ನಪಟ್ಟಣ ಟೌನ್ ಠಾಣೆ ಪೊಲೀಸರು ಕಾಲ್ ಡೀಟೈಲ್ಸ್, ಸಿಸಿ ಕ್ಯಾಮರಾಗಳ ತಪಾಸಣೆ ಸೇರಿ ಎಲ್ಲ ಆಯಾಮಗಳಲ್ಲಿ ತನಿಖೆ ಮಾಡಿದ್ದರು. ಆದರೆ ಅರೋಪಿಗಳ ಬಗ್ಗೆ ಮಾತ್ರ ಒಂದು ಸುಳಿವು ಇದುವರೆಗೂ ಪೊಲೀಸರಿಗೆ ಸಿಕ್ಕಿರಲಿಲ್ಲ. ಸಾಕಷ್ಟು ಪ್ಲಾನ್ ಮಾಡಿ ದುಷ್ಕರ್ಮಿಗಳು ಮಹಿಳೆಯನ್ನ ಬೇರೆಡೆಗೆ ಹತ್ಯೆಗೈದು ಭಾಗಗಳನ್ನ ಕತ್ತರಿಸಿ ಗೊತ್ತಾಗಬಾರದು ಎಂದು ಸುಮಾರು ನೂರು ಅಡಿ ಎತ್ತರ ಇರುವ ನೀರಿನ ಟ್ಯಾಂಕ್ ಒಳಗೆ ಹಾಕಿ ಎಸ್ಕೇಪ್ ಆಗಿದ್ದಾರೆ.

ಅಲ್ಲದೆ ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಟ್ಯಾಂಕ್​ನ ಮೇಲ್ಭಾಗದಲ್ಲಿ ಚಪ್ಪಲಿ, ಮಹಿಳೆಯ ಬಟ್ಟೆಯನ್ನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಆದರೆ ಆರೋಪಿಗಳು ಚಾಪೆ ಕೆಳಗೆ ನುಸುಳಿದರೆ ಪೊಲೀಸರು ರಂಗೋಲಿ ಕೆಳಗೆ ನುಸಳುತ್ತಾರೆ. ಸೂಕ್ಷ್ಮವಾಗಿ ತನಿಖೆ ಮುಂದುವರೆಸಿದ ವೇಳೆ ಪೊಲೀಸರಿಗೆ ಕೊಲೆಯಾದ ಮಹಿಳೆಯ ಸುಳಿವು ಸಿಕ್ಕಿದೆ. ಆದರೆ ಯಾಕಾಗಿ ಕೊಲೆಯಾಗಿದೆ ಎಂಬುದು ಇನ್ನು ತಿಳಿದು ಬಂದಿಲ್ಲ. ಈ ನಿಟ್ಟಿನಲ್ಲಿ ಚನ್ನಪಟ್ಟಣ ಟೌನ್ ಸರ್ಕಲ್ ಇನ್ಸ್​ಪೆಕ್ಟರ್ ಶುಭಾ ಸಾತನೂರು, ಕನಕಪುರ ಸಬ್​ಇನ್ಸ್​ಪೆಕ್ಟರ್​ಗಳ ನೇತೃತ್ವದಲ್ಲಿ ವಿಶೇಷ ತಂಡ ಕೂಡ ರಚನೆ ಮಾಡಿದ್ದು, ಶೀಘ್ರವೇ ಆರೋಪಿಗಳನ್ನ ಬಂಧಿಸುತ್ತೇವೆ ಎನ್ನುತ್ತಿದ್ದಾರೆ ರಾಮನಗರ ಎಸ್ ಪಿ. ಸಂತೋಷ್ ಬಾಬು ಕೆ

ಇದನ್ನೂ ಓದಿ:ಗೃಹ ಸಚಿವರ ಆಪ್ತ ವಲಯದಲ್ಲೇ ಪೊಲೀಸ್ ವರ್ಗಾವಣೆ ಆಟಾಟೋಪ ನಡೆಸಿದ್ದ ಸ್ಯಾಂಟ್ರೋ ರವಿಗೆ ಕಾಡುತ್ತಿದೆ ಎನ್ಕೌಂಟರ್ ಭೀತಿ, ಪಿಕ್ಚರ್ ಅಭಿ ಬಾಕಿ ಹೈ!

ಒಟ್ಟಾರೆ ಚನ್ನಪಟ್ಟಣದಲ್ಲಿ ಹದಿನೈದು ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದ ರಹಸ್ಯ ಇದೀಗ ತಾರ್ತಿಕ ಅಂತ್ಯಕ್ಕೆ ಬಂದಿದ್ದು ಶೀಘ್ರವೇ ಆರೋಪಿಗಳನ್ನ ಬಂಧಿಸಲಿದ್ದಾರೆ ಪೊಲೀಸರು.

ವರದಿ: ಪ್ರಶಾಂತ್ ಹುಲಿಕೆರೆ ಟಿವಿ9 ರಾಮನಗರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:57 pm, Thu, 12 January 23