ಎಟಿಎಂಗೆ ಹಣ ಹಾಕುವ ವಾಹನದಲ್ಲಿ ಸಿಕ್ತು 2 ಕೋಟಿ ರೂ.: ಪತ್ತೆ ಮಾಡಿದ್ದೇಗೆ ಗೊತ್ತಾ?

|

Updated on: Apr 18, 2023 | 10:26 AM

ರಾಮನಗರ ಜಿಲ್ಲೆ ಹಾರೋಹಳ್ಳಿ ತಾಲೂಕಿನ ಗಂಟಕನದೊಡ್ಡಿ ಚೆಕ್​ಪೋಸ್ಟ್​ನಲ್ಲಿ ಚುನಾವಣಾಧಿಕಾರಿಗಳು ದಾಖಲೆ ಇಲ್ಲದ ವಾಹನದಲ್ಲಿ ಸಾಗಿಸುತ್ತಿದ್ದ 2 ಕೋಟಿ ಹಣ ಜಪ್ತಿ ಮಾಡಿದ್ದಾರೆ.

ಎಟಿಎಂಗೆ ಹಣ ಹಾಕುವ ವಾಹನದಲ್ಲಿ ಸಿಕ್ತು 2 ಕೋಟಿ ರೂ.: ಪತ್ತೆ ಮಾಡಿದ್ದೇಗೆ ಗೊತ್ತಾ?
2 ಕೋಟಿ ರೂ ಪತ್ತೆ
Follow us on

ರಾಮನಗರ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಸದ್ಯ ರಾಮನಗರ ಜಿಲ್ಲೆ ಹಾರೋಹಳ್ಳಿ ತಾಲೂಕಿನ ಗಂಟಕನದೊಡ್ಡಿ ಚೆಕ್​ಪೋಸ್ಟ್​ನಲ್ಲಿ ಚುನಾವಣಾಧಿಕಾರಿಗಳು ದಾಖಲೆ ಇಲ್ಲದ ವಾಹನದಲ್ಲಿ ಸಾಗಿಸುತ್ತಿದ್ದ 2 ಕೋಟಿ ಹಣ ಜಪ್ತಿ ಮಾಡಿದ್ದಾರೆ. ರಾಮನಗರ ಜಿಲ್ಲಾ ವರಿಷ್ಠಾಧಿಕಾರಿ ಕಾರ್ತಿಕ್ ಹಾಗು ಚುನಾವಣೆ ಅಧಿಕಾರಿ ಅವಿನಾಶ್ ಮೆನನ್ ರಾಜೇಂದ್ರ ನೇತೃತ್ವದಲ್ಲಿ ಎಟಿಎಂಗೆ ಹಣ ಹಾಕುವ ವಾಹನದಲ್ಲಿ ತೆಗೆದುಕೊಂಡು‌ ಹೋಗುತ್ತಿದ್ದ ಎರಡು ಕೋಟಿ ಹಣ ಜಪ್ತಿ ಮಾಡಲಾಗಿದೆ.

ಎಟಿಎಂಗೆ ಹಣ ಹಾಕುವ ವಾಹನದಲ್ಲಿ ದಾಖಲೆ ಇಲ್ಲದೆ ಸಂಜೆ 6 ಗಂಟೆ ಬಳಿಕ ಹಣ ಸಾಗಿಸುತ್ತಿದ್ದರಿಂದ ಅನುಮಾನಗೊಂಡ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆಗ ಹಣ ಸಿಕ್ಕಿದೆ.ಸಾಗಿಸಲಾಗುತ್ತಿದ್ದ ಹಣಕ್ಕೆ ಅಗತ್ಯ ದಾಖಲೆ ಇಲ್ಲದ ಹಿನ್ನೆಲೆ ಹಣವನ್ನು ವಶಕ್ಕೆ ಪಡೆಯಲಾಗಿದೆ. ಗನ್​ಮ್ಯಾನ್ ಇಲ್ಲದೆ ವಾಹನದಲ್ಲಿ ಹಣ ಸಾಗಿಸುತ್ತಿದ್ದ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Karnataka Election Live: ರಾಜ್ಯದಲ್ಲಿ ಜೋರಾದ ಅಭ್ಯರ್ಥಿಗಳ ಶಕ್ತಿ ಪ್ರದರ್ಶನ ಹಾಗೂ ನಾಮಪತ್ರ ಸಲ್ಲಿಕೆ: ಇಂದಿನ ಅಪ್ಡೇಟ್ಸ್​​​ ಇಲ್ಲಿದೆ

ಗಾಂಜಾ ಸಾಗಾಟ ಗ್ಯಾಂಗ್​ನ ಹೆಡೆಮುರಿ ಕಟ್ಟಿದ ಬೀದರ್ ಪೊಲೀಸರು

ಅಂತರ್ ರಾಜ್ಯ ಗಾಂಜಾ ಸಾಗಾಟ ಗ್ಯಾಂಗ್ ಮೇಲೆ ದಾಳಿ ಮಾಡಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಚಿಟಗುಪ್ಪಾ ತಾಲೂಕಿನ ಬೆಳಕೇರಾ ಬಳಿ ಕಾರಿನಲ್ಲಿ ಆಂಧ್ರಪ್ರದೇಶದಿಂದ ಬೀದರ್ ‌ಮಾರ್ಗವಾಗಿ ಮುಂಬೈಗೆ ಗಾಂಜಾ ಸಾಗಿಸುತ್ತಿದ್ದ ಗ್ಯಾಂಗನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 1.56 ಕೋಟಿ ರೂಪಾಯಿ ಮೌಲ್ಯದ ಒಂದೂವರೆ ಕಿಂಟಾಲ್ ಗಾಂಜಾ ವಶಕ್ಕೆ ಪಡೆಯಲಾಗಿದೆ. ಕಾರ್ಯಚರಣೆ ನಡೆಸಿದ ಔರಾದ್ ಪೋಲಿಸರಿಗೆ ಬೀದರ್ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಯಚರಣೆ ನಡೆಸಿದ ಪೋಲಿಸರಿಗೆ ಬೀದರ್ ಎಸ್ಪಿ ಯಿಂದ ಬಹುಮಾನ ಕೂಡ ಘೋಷಣೆ ಮಾಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:26 am, Tue, 18 April 23