
ರಾಮನಗರ, ನವೆಂಬರ್ 1: ನಗರದ ಹೊರವಲಯದ ಅಯಾನಾ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ರೇವ್ ಪಾರ್ಟಿ ಮೇಲೆ ಬೆಂಗಳೂರಿನ (Bengaluru) ದಕ್ಷಿಣ ಎಸ್‌ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಿ, 115 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ದೇವಿಗೆರೆ ಕ್ರಾಸ್ ಸಮೀಪದಲ್ಲಿರುವ ಅಯಾನಾ ಖಾಸಗಿ ರೆಸಾರ್ಟ್‌ನಲ್ಲಿ ರಾತ್ರಿ ವೇಳೆ ರೇವ್ ಪಾರ್ಟಿ ನಡೆಯುತ್ತಿದೆ ಎನ್ನುವ ಮಾಹಿತಿ ಮೇರೆಗೆ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ, 35 ಯುವತಿಯರು ಸೇರಿದಂತೆ ಒಟ್ಟು 115 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಹೊರವಲಯದ ದೇವಿಗೆರೆ ಕ್ರಾಸ್ ಬಳಿ ಇರುವ ಅಯಾನ ಎಂಬ ಅನಾಧಿಕೃತ ಹೋಮ್ ಸ್ಟೇ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಬೆಂಗಳೂರು ದಕ್ಷಿಣ ಎಸ್ ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ದಾಳಿ ಮಾಡಿ, 115 ಯುವಕ-ಯುವತಿಯರನ್ನ ವಶಕ್ಕೆ ಪಡೆಯಲಾಗಿದೆ. ಅಂದಹಾಗೆ ಬೆಂಗಳೂರು ಮೂಲದ ವಿಶ್ವನಾಥ್ ಎಂಬುವವರ ಅನಾಧಿಕೃತ ರೆಸಾರ್ಟ್‌ನಲ್ಲಿ ಬೆಂಗಳೂರು ಮೂಲದ ಐವರು ಸೇರಿಕೊಂಡು ರೆವ್ ಪಾರ್ಟಿ ಆಯೋಜನೆ ಮಾಡಿದ್ದರು.
ಇದನ್ನೂ ಓದಿ: ರೇವ್ ಪಾರ್ಟಿ ಮೇಲೆ ದಾಳಿ: ನಶೆಯಲ್ಲಿ ತೇಲಾಡುತ್ತಿದ್ದ 30ಕ್ಕೂ ಹೆಚ್ಚು ಯುವಕ-ಯುವತಿಯರು ವಶಕ್ಕೆ
ಆ್ಯಪ್ ಒಂದರ ಮೂಲಕ ರಿಜಿಸ್ಟರ್ ಆಗಿದ್ದ ಸುಮಾರು 300ಕ್ಕೂ ಹೆಚ್ಚು ಯುವಕ ಯುವತಿಯರು ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಎಣ್ಣೆ, ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುತ್ತಿದ್ದರು. ಈ ಒಂದು ಮಾಹಿತಿ ಪಡೆದ ಎಸ್ ಪಿ ಶ್ರೀನಿವಾಸ್ ಗೌಡ, ತಮ್ಮ ತಂಡದೊಂದಿಗೆ ಮಧ್ಯರಾತ್ರಿ ರೇಡ್ ಮಾಡಿದ್ದರು. ಈ ವೇಳೆ 35 ಯುವತಿಯರು ಸೇರಿ 115 ರನ್ನ ವಶಕ್ಕೆ ಪಡೆದ್ದಾರೆ. ಪಾರ್ಟಿ ವೇಳೆ ಮಾದಕ ವಸ್ತು ಸೇವನೆ ಮಾಡಿರಬಹುದು ಎಂಬ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾಸ್ಪತ್ರೆ ಎಲ್ಲರಿಗೂ ಮೆಡಿಕಲ್ ಟೆಸ್ಟ್ ಸಹ ಮಾಡಿಸಲಾಗಿದೆ. ಆನಂತರ ಎಲ್ಲರ ಮಾಹಿತಿ ಪಡೆದು ಕಳುಹಿಸಿ ಕೊಡಲಾಗಿದೆ.
ಬೆಂಗಳೂರು ಹೊರವಲಯದಲ್ಲಿರುವ ಅಯಾನ ಎಂಬ ಹೋಮ್ ಸ್ಟೇ ಯಾವುದೇ ರೀತಿಯ ಅನುಮತಿಯನ್ನ ಸಂಬಂಧಪಟ್ಟ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಪಡೆದಿಲ್ಲ. ಅನಧಿಕೃತವಾಗಿ ಹೋಮ್ ಸ್ಟೇ ನಡೆಸುತ್ತಿದ್ದರು. ಇನ್ನು ಆಗಾಗ ಈ ರೀತಿಯ ರೇವ್ ಪಾರ್ಟಿಗಳನ್ನ ಈ ಸ್ಥಳದಲ್ಲೇ ಆಯೋಜನ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ಸದ್ಯ ಆಯೋಜಕ ಹಾಗೂ ಹೋಮ್ ಸ್ಟೇ ಮಾಲೀಕನ ವಿರುದ್ಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಪಾರ್ಟಿಗಳಲ್ಲಿ ಡ್ರಗ್ಸ್ ಕಂಡುಬಂದರೆ ರೆಸಾರ್ಟ್, ಹೋಂ ಸ್ಟೇ, ಹೋಟೆಲ್ ಮಾಲೀಕರ ಮೇಲೂ ಕೇಸ್
ಒಟ್ಟಾರೆ ಅನಧಿಕೃತ ಹೋಮ್ ಸ್ಟೇ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಅಡ್ಡೆ ಮೇಲೆ ಖಾಕಿ ದಾಳಿ ನಡೆಸಿದ್ದು, ವೈದ್ಯಕೀಯ ವರದಿ ಬಂದ ನಂತರ ಪಾರ್ಟಿಯಲ್ಲಿ ಮಾದಕವಸ್ತು ಬಳಕೆ ಆಗಿತ್ತಾ ಇಲ್ಲವಾ ಎಂಬುದು ತಿಳಿಯಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:12 am, Sat, 1 November 25