ರಾಮನಗರದಲ್ಲಿ 7 ವರ್ಷದಲ್ಲಿ ಕಾಡಾನೆ ದಾಳಿಗೆ 38ಕ್ಕೂ ಹೆಚ್ಚು ಜನರು ಬಲಿ: ಸದನದಲ್ಲಿ ಪ್ರಸ್ತಾಪಿಸಿದ ರವಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 13, 2024 | 7:46 PM

ವಿಧಾನ ಪರಿಷತ್​ನಲ್ಲಿ ಗಮನ ಸೆಳೆಯುವ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಎಸ್.ರವಿ(S Ravi) ‘ ರಾಮನಗರ ಜಿಲ್ಲೆಯಲ್ಲಿ ಕಳೆದ ಏಳು ವರ್ಷಗಳಿಂದ ಇದುವರೆಗೂ  ಕಾಡಾನೆ ಹಾವಳಿಯಿಂದ(Wild elephant) 38ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂದು  ಹೇಳಿದರು. ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ಈಶ್ವರ್​ ಖಂಡ್ರೆ, ‘ ಈ ವರ್ಷ ಪ್ರಾಣಿ ದಾಳಿಯಿಂದ 55 ಮಂದಿ ಸಾವನ್ನಪ್ಪಿದ್ದಾರೆ. ಆನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬರದಂತೆ ಏನು ಕ್ರಮ ಕೈಗೊಳ್ಳಬೇಕೆಂದು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.

ರಾಮನಗರದಲ್ಲಿ 7 ವರ್ಷದಲ್ಲಿ ಕಾಡಾನೆ ದಾಳಿಗೆ 38ಕ್ಕೂ ಹೆಚ್ಚು ಜನರು ಬಲಿ: ಸದನದಲ್ಲಿ ಪ್ರಸ್ತಾಪಿಸಿದ ರವಿ
ಎಸ್​ ರವಿ
Follow us on

ರಾಮನಗರ, ಫೆ.13: ರಾಮನಗರ ಜಿಲ್ಲೆಯಲ್ಲಿ ಕಳೆದ ಏಳು ವರ್ಷಗಳಿಂದ ಇದುವರೆಗೂ  ಕಾಡಾನೆ ಹಾವಳಿಯಿಂದ(Wild elephant) 38ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ಎಸ್.ರವಿ(S Ravi) ಹೇಳಿದರು. ವಿಧಾನ ಪರಿಷತ್​ನಲ್ಲಿ ಮಾತನಾಡಿದ ಅವರು, ‘ಇದುವರೆಗೆ ಕಾಡಾನೆ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕೃಷಿ ಕೆಲಸಕ್ಕೆ ಹೋದ ರೈತರು ಮನೆಗೆ ಹಿಂದಿರುಗುವ ನಂಬಿಕೆಯಿಲ್ಲ. ಪ್ರತಿನಿತ್ಯ ಕಾಡಾನೆ ಸಮಸ್ಯೆ ಹೆಚ್ಚಳವಾಗುತ್ತಿದೆ. ಭೀತಿಯಿಂದ ಅದೆಷ್ಟೋ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈ ಹಿನ್ನಲೆ ಕಾಡಾನೆ ನಿಯಂತ್ರಿಸುವಂತೆ ಜನರು ನಮಗೆ ಒತ್ತಾಯ ಮಾಡುತ್ತಿದ್ದಾರೆ ಎಂದರು.

ಈ ವರ್ಷ ಪ್ರಾಣಿ ದಾಳಿಯಿಂದ 55 ಮಂದಿ ಸಾವು-ಈಶ್ವರ್​ ಖಂಡ್ರೆ

ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ಈಶ್ವರ್​ ಖಂಡ್ರೆ, ‘ ಈ ವರ್ಷ ಪ್ರಾಣಿ ದಾಳಿಯಿಂದ 55 ಮಂದಿ ಸಾವನ್ನಪ್ಪಿದ್ದಾರೆ. ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಿಂದ ಆನೆಗಳು ರಾಮನಗರ, ಕನಕಪುರ ಭಾಗಕ್ಕೆ ಬರುತ್ತಿದ್ದಾವೆ. ಆನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬರದಂತೆ ಏನು ಕ್ರಮ ಕೈಗೊಳ್ಳಬೇಕೆಂದು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.

ರಾಮನಗರ ಹಾಗೂ ಬನ್ನೇರುಘಟ್ಟದಲ್ಲಿ ಎರಡು ಆನೆ ಕಾರ್ಯಪಡೆ

ಇದನ್ನೂ ಓದಿ:ಕನಕಪುರ: ತೋಟಕ್ಕೆ ಹೋಗುತಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ

‘ಕಂದಕ ನಿರ್ಮಾಣ, ವಿದ್ಯುತ್ ತಂತಿ ಬೇಲಿ, ರೈಲ್ವೆ ಬ್ಯಾರಿಕೇಡ್ ಮಾಡುವ ಕೆಲಸ ಮಾಡುತ್ತಿದ್ದೇವೆ. ಜೊತೆಗೆ ಆನೆ ಕ್ಯಾಂಪ್ ಮಾಡುವ ಪ್ರಸ್ತಾವನೆ ಮಾಡಿದ್ದಾರೆ. ಅದನ್ನ ಪರಿಶೀಲನೆ ಮಾಡುತ್ತೇವೆ. ಮಾನವ – ಪ್ರಾಣಿ ಸಂಘರ್ಷ ತಡೆಯಲು ನಾವು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದು, ರಾಮನಗರ ಹಾಗೂ ಬನ್ನೇರುಘಟ್ಟದಲ್ಲಿ ಎರಡು ಆನೆ ಕಾರ್ಯಪಡೆ ಮಾಡಿದ್ದೇವೆ ಎಂದು ಉತ್ತರಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ