ರಾಜ್ಯದೆಲ್ಲೆಡೆ ಸಂಕ್ರಾಂತಿ ಸಂಭ್ರಮ: ಆದ್ರೆ ರಾಮನಗರ ಕರಿ ಕಬ್ಬು ಬೆಲೆ ಕುಸಿತ, ರೈತರಿಗೆ ನಿರಾಸೆ

ಕರಿ ಕಬ್ಬು ಬೇಸಾಯ ಮಾಡಲು ಎಕರೆಗೆ ಒಂದೂವರೆ ಲಕ್ಷ ರೂ ಖರ್ಚು ಮಾಡಿದ್ದ ರೈತರು ಭಾರಿ ಲಾಭದ ನಿರೀಕ್ಷೆಯಲ್ಲಿದ್ದರು. ಅದರೆ ಈ ಬಾರಿಯ ಧಾರಣೆ ಕುಸಿತದಿಂದ ಬೇಸಾಯಕ್ಕೆ ಮಾಡಿದ್ದ ಖರ್ಚು ಕೊಡ ಸಿಗುತ್ತಿಲ್ಲ, ಹಾಗಾಗಿ ಸರ್ಕಾರ ನೊಂದ ರೈತರ ನೆರವಿಗೆ ಧಾವಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ

ರಾಜ್ಯದೆಲ್ಲೆಡೆ ಸಂಕ್ರಾಂತಿ ಸಂಭ್ರಮ: ಆದ್ರೆ ರಾಮನಗರ ಕರಿ ಕಬ್ಬು ಬೆಲೆ ಕುಸಿತ, ರೈತರಿಗೆ ನಿರಾಸೆ
ರಾಜ್ಯದೆಲ್ಲೆಡೆ ಸಂಕ್ರಾಂತಿ ಸಂಭ್ರಮ: ಆದ್ರೆ ರಾಮನಗರ ಕರಿ ಕಬ್ಬು ಬೆಲೆ ಕುಸಿತ
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಸಾಧು ಶ್ರೀನಾಥ್​

Updated on: Jan 15, 2024 | 12:00 PM

ರಾಜ್ಯದೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ, ಪ್ರತಿ ಮನೆಯಲ್ಲೂ ಎಳ್ಳು ಬೆಲ್ಲದ ಜೊತೆ ಕರಿ ಕಬ್ಬಿಗೆ ವಿಶೇಷ ಸ್ಥಾನವಿರುತ್ತೆ,‌ ಆದರೆ ಈ ಬಾರಿ ಕರಿ ಕಬ್ಬಿಗೆ ಬೇಡಿಕೆ ಕುಸಿದಿದ್ದು ಕರಿ ಜಬ್ಬು‌ ಬೆಳೆದ ರೈತರಿಗೆ ನಿರಾಸೆಯಾಗಿದೆ.‌

ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು ಎಂಬ ಸಂದೇಶ ಸಾರುವ ಸಂಕ್ರಾಂತಿ ಹಬ್ಬದಲ್ಲಿ ಕರಿ ಕಬ್ಬು ಬೆಳೆದ ರೈತರಿಗೆ ಮಾತೇ ತೋಚದಾಗಿದೆ. ಈ ಬಾರಿ ಸಂಕ್ರಾಂತಿಯ ಹಬ್ಬಕ್ಕೆ ಕಬ್ಬು ಮಾರಿ ತುಸು ಲಾಭ ಮಾಡಿಕೊಳ್ಳೋಣ ಅಂತಿದ್ದ ರೈತಿರಿಗೆ ಬೇಡಿಕೆ ಕುಸಿತಗೊಂಡು, ಹಾಕಿದ ಬಂಡವಾಳ ವಾಪಾಸ್ ಬಂದ್ರೆ ಸಾಕು ಎಂಬ ಆತಂಕದಲ್ಲಿ‌ಇದ್ದಾರೆ. ಪಟ್ಲು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ರೈತರು ಹಲವಾರು ವರ್ಷಗಳಿಂದ ಪ್ರಮುಖ ವಾಣಿಜ್ಯ ಬೆಳೆಯಾಗಿ ಈ ಕರಿಕಬ್ಬು ಬೆಳೆಯುತ್ತಿದ್ದಾರೆ.

ಪಟ್ಲು ಸೇರಿದಂತೆ ತಿಟ್ಟಮಾರನಹಳ್ಳಿ, ಅಬ್ಬೂರು, ಅಬ್ಬೂರುದೊಡ್ಡಿ, ಕಳ್ಳಿಹೊಸೂರು, ತೊರೆಹೊಸೂರು, ಚಿಕ್ಕನದೊಡ್ಡಿ, ಮೈಲನಾಯ್ಕನಹಳ್ಳಿ ಗ್ರಾಮಗಳಲ್ಲ ಹಲವಾರು ವರ್ಷಗಳಿಂದ ಕರಿಕಬ್ಬು ಬೆಳೆಯಲಾಗುತ್ತಿದೆ. ಈ ಹಿಂದೆ ಸುಮಾರು 300 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತಿತ್ತು, ಆದರೆ ಈ ಬೇಸಾಯಕ್ಕೆ ಸಾಕಷ್ಟು ಕಠಿಣ ಶ್ರಮ ಹಾಗೂ ಕಾರ್ಮಿಕರ ಅವಶ್ಯಕತೆ ಇರುವುದರಿಂದ ಇತ್ತೀಚಿಗೆ ಸ್ವಲ್ಪ ಕಡಿಮೆಯಾಗಿದೆ. ‌ಪಟ್ಲು ಕರಿಕಬ್ಬಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಜೊತೆಗೆ ಕೇರಳ, ತಮಿಳುನಾಡು ಸೇರಿದಂತೆ ಹಲವು ಭಾಗಗಳಿಗೆ ಈ ಕಬ್ಬು ರಫ್ತಾಗುತ್ತದೆ. ಹೆಚ್ಚಿನ ಲಾಭ ತಂದುಕೊಡುವ ಕರಿ ಕಬ್ಬು ಬೆಳೆಯನ್ನು ಇಡೀ ಕುಟುಂಬದವರು ಸಾಕಷ್ಟು ಮುತುವರ್ಜಿಯಿಂದ ಬೆಳೆಯುತ್ತಾ ಬಂದಿದ್ದಾರೆ ಆದರೆ ಕಳೆದೆರಡು ವರ್ಷಗಳಿಂದ ಕರಿ ಕಬ್ಬು ಬೇಡಿಕೆ ಕುಣಿಯುತ್ತಾ ಬಂದಿದೆ.

ಇದನ್ನೂ ಓದಿ: LPG ಸಿಲಿಂಡರ್ ಕೆಂಪು ಬಣ್ಣದಲ್ಲಿರುತ್ತದೆ ಏಕೆ? ಇದರ ಹಿಂದಿನ ಕುತೂಹಲಕಾರಿ ಕಾರಣ ಇದೇ…

ರಾಮನಗರ ಜಿಲ್ಲೆಯ ಬೊಂಬೆನಾಡು ಚನ್ನಪಟ್ಟಣ ತಾಲ್ಲೂಕಿನ ಪಟ್ಲು ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕರಿ ಕಬ್ಬು ಬೆಳೆಯುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಕರಿ ಕಬ್ಬು ಗ್ರಾಮ ಎಂದೇ ನಾಡಿನಲ್ಲಿ ಖ್ಯಾತಿ ಗಳಿಸಿದೆ. ಗ್ರಾಮದ ಬಹುತೇಕ ರೈತರು ವಿಶೇಷವಾಗಿ ಸಂಕ್ರಾಂತಿ ಕರಿ ಕಬ್ಬು ಬೇಸಾಯ ಮಾಡುತ್ತಾರೆ. ಸಂಕ್ರಾಂತಿ ಹಬ್ಬಕ್ಕೆ ವಾರದ ಮೊದಲೇ ಕರಿ ಕಬ್ಬ ವ್ಯಾಪಾರಸ್ಥರು ‌ಪಟ್ಲು ಗ್ರಾಮಕ್ಕೆ ಬಂದು ರೈತರಿಂದ ಕರಿ ಕಬ್ಬು ಖರೀದಿಸಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಾದ ದೆಹಲಿ, ಗುಜರಾತ್‌‌ ಸೇರಿದಂತೆ ಹೊರ ರಾಜ್ಯಗಳಿಗೆ ರಫ್ತು ಮಾಡುತ್ತಿದ್ದರು. ಅದರೆ ಕಳೆದ‌ ವರ್ಷದಂತೆ ಈ ಬಾರಿಯೂ ಬೇಡಿಕೆ ಸತತ ಕುಸಿತ‌‌ ಕಂಡಿದೆ. ಒಂದು ಜೊತೆ ಕಬ್ಬು 20 ರೂ ನಿಂದ 30 ರೂ ಬಿಕರಿಯಾಗುತ್ತಿದ್ದು, ಇದೇ ಕಬ್ಬು ಕಳೆದ ಮೂರು ವರ್ಷಗಳ ಹಿಂದೆ ಒಂದು ಜೊತೆ ಕ‌ಬ್ಬಿಗೆ 60 ರಿಂದ 80 ರೂಪಾಯಿ ವರೆಗೆ ಮಾರಾಟವಾಗುತ್ತಿತ್ತು.

ಪ್ರತಿ ಎಕರೆ ಕರಿ ಕಬ್ಬು ಬೇಸಾಯ ಮಾಡಲು ಎಕರೆಗೆ ಒಂದರಿಂದ ಒಂದುವರೆ ಲಕ್ಷ ರೂ ಖರ್ಚು ಮಾಡಿದ್ದ ರೈತರು ಭಾರಿ ಲಾಭದ ನಿರೀಕ್ಷೆಯಲ್ಲಿದ್ದರು. ಅದರೆ ಈ ಬಾರಿಯ ಧಾರಣೆ ಕುಸಿತದಿಂದ ಬೇಸಾಯಕ್ಕೆ ಮಾಡಿದ್ದ ಖರ್ಚು ಕೊಡ ಸಿಗುತ್ತಿಲ್ಲ, ಹಾಗಾಗಿ ಸರ್ಕಾರ ಕರಿ ಕಬ್ಬಿಗೆ ಬೆಂಬಲ ಬೆಲೆ ನೀಡುವ ಮೂಲಕ ನೊಂದ ರೈತರ ನೆರವಿಗೆ ಧಾವಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ