ರಾಮನಗರ: ಸ್ತ್ರೀ ಶಕ್ತಿ ಯೋಜನೆ ಅಡಿ ಸಾಲ ಪಡೆದು ಮರು ಪಾವತಿಸಬೇಡಿ. ನನ್ನ ಪತಿ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಅಧಿಕಾರಕ್ಕೆ ಬಂದ 24 ಗಂಟೆ ಒಳಗಾಗಿ ಸಾಲ ಮನ್ನಾ ಮಾಡುತ್ತಾರೆ ಎಂದು ರಾಮನಗರದ (Ramnagar) ಜೆಡಿಎಸ್ (JDS) ಶಾಸಕಿ ಅನಿತಾ ಕುಮಾರಸ್ವಾಮಿ (Anitha Kumaraswamy) ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.
ರಾಮನಗರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ ಅವರು ಈಗಾಗಲೇ ಸ್ತ್ರೀ ಶಕ್ತಿ ಯೋಜನೆ ಅಡಿಯಲ್ಲಿ ಪಡೆದ ಸಾಲಗಳನ್ನು ಮನ್ನಾ ಮಾಡುತ್ತೇನೆ ಎಂದು ಘೋಷಿಸಿದ್ದಾರೆ. ಹೀಗಾಗಿ ಸಾಕಷ್ಟು ಸಾಲ ಪಡೆಯಿರಿ ಆದರೆ ಯಾರು ಕೂಡ ಮರು ಪಾವತಿಸಬೇಡಿ ಕುಮಾರಸ್ವಾಮಿಯವರು ಮನ್ನಾ ಮಾಡುತ್ತಾರೆ ಎಂದಿದ್ದಾರೆ. ಸದ್ಯ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಗಿ ಕಾಮೆಂಟ್ಗಳು ಬರುತ್ತಿವೆ.
MLA of Ramanagara #AnithaKumaraswamy wife of #JDS head #HDKumaraswamy tells voters to take loans under #StreeShakti scheme and to not to repay the loans. After Kumaraswamy comes to power, he will write off the loans in 24 hours. No problem.#Karnataka #Ramanagara pic.twitter.com/FurLNJVbaY
— Hate Detector ? (@HateDetectors) December 23, 2022
ಜೆಡಿಎಸ್ ಪಂಚರತ್ನ ಯಾತ್ರೆ ನಡೆಸುತ್ತಿದೆ. ಯಾತ್ರೆ ಕಾಲಿಟ್ಟಲೆಲ್ಲಾ ಅಭೂತಪೂರ್ವ ಸ್ವಾಗತ ದೊರೆಯುತ್ತಿದೆ. ಅನಿತಾ ಕುಮಾರಸ್ವಾಮಿಯವರು ಕಳೆದ ವಾರವಷ್ಟೇ ಮಗ ನಿಖಿಲ್ ಕುಮಾರಸ್ವಾಮಿಯವರಿಗೆ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟರು. ಈ ಮೂಲಕ ನಿಖಲ್ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ