ರಾಮನಗರ, ಜು.29: ನ್ಯಾಯಾಧೀಶ(Judge)ರ ಮನೆಯಲ್ಲೇ ಕಳ್ಳತನ(Theft) ಮಾಡಿದ್ದ ಖದೀಮನನ್ನ ಇದೀಗ ಐಜೂರು ಪೊಲೀಸರು ಬಂಧಿಸಿದ್ದಾರೆ. ರಾಮನಗರ(Ramanagara) ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶೆಯವರ ಮನೆಯಲ್ಲಿ ಜು.25 ರಂದು ಕಳ್ಳತನ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಧೀಶೆ ಪತಿಯವರು ಐಜೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯ ಸನ್ನದ್ಧರಾದ ಪೊಲೀಸರು, ಇದೀಗ ಕಳ್ಳನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಇವತ್ತೀನ ಕಾಲದಲ್ಲಿ ಯಾರನ್ನ ನಂಬುವುದು ತಿಳಿಯದಂತಹ ಪರಿಸ್ಥಿತಿ ಬಂದಿದೆ. ಅದರಂತೆ ನ್ಯಾಯಾಧೀಶರ ಕಾರು ಚಾಲಕನಿಂದಲೇ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಇತ 7 ಗ್ರಾಂ ಚಿನ್ನ, 30ಗ್ರಾಂ ಬೆಳ್ಳಿ ಕಳ್ಳತನವನ್ನ ಮಾಡಿ, ಎಸ್ಕೇಪ್ ಆಗಿದ್ದ. ಈ ಘಟನೆ ನಿಮಿತ್ತ ಐಜೂರು ಪೊಲೀಸರು ಕಾರ್ಯಾಚರಣೆ ನಡೆಸಿ ಕಾರು ಚಾಲಕನನ್ನ ಬಂಧಿಸಿದ್ದು, ಆರೋಪಿಯನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಾವಣಗೆರೆ: ನಗರದ ಬಿಪಿ ರಸ್ತೆಯಲ್ಲಿರುವ ಟ್ರೆಂಡ್ಸ್ ಶಾಫಿಂಗ್ ಮಾಲ್ ಒಳಗೆ ಕಳ್ಳ ನುಗ್ಗಿರುವ ಘಟನೆ ನಡೆದಿದೆ. ಬೆಳಗ್ಗೆ ಸೆಕ್ಯೂರಿಟಿಗೆ ಕಳ್ಳ ಕಾಣಿಸಿಕೊಂಡಿದ್ದು, ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಹಿನ್ನಲೆ ಕಳ್ಳನನ್ನು ಹಿಡಿಯಲು ಕಳೆದ ಮೂರು ಗಂಟೆಗಳಿಂದ ಪೊಲೀಸರು ಇಡೀ ಶಾಫಿಂಗ್ ಮಾಲ್ನ್ನು ಶೋಧ ಮಾಡುತ್ತಿದ್ದಾರೆ. ಹೌದು ಇದೀಗ ಡಾಗ್ ಸ್ಕ್ವಾಡ್, ಹಾಗೂ ಕೆಟಿಜೆ ನಗರ ಠಾಣೆ ಪೊಲೀಸರು ಸಿಸಿ ಕ್ಯಾಮರಾಗಳ ಪರಿಶೀಲನೆ ಮಾಡುತ್ತಿದ್ದು, ಶಾಪಿಂಗ್ ಮಾಲ್ ಮುಂಭಾಗದಲ್ಲಿ ಜನರು ಜಮಾಯಿಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:19 am, Sat, 29 July 23