Yadgir police: ಗಂಡನ ಹತ್ಯೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ: 1 ತಿಂಗಳಲ್ಲಿ ಪತ್ನಿಯ ಕಳ್ಳಾಟ ಬಯಲಿಗೆಳೆದ ಯಾದಗಿರಿ ಪೊಲೀಸರು!

Illicit relationship: ಪೊಲೀಸರ ತನಿಖೆಯಲ್ಲಿ ಬಟಾಬಯಲಾಯ್ತು ಆತ್ಮಹತ್ಯೆಯ ಅಸಲಿ ಕಹಾನಿ.. ಕೊಲೆ ಅಲ್ಲ ಮರ್ಡರ್ ಅಂತ ಸಾಬೀತು ಮಾಡಿದ ಪೊಲೀಸರು.. ಯಸ್ ಇದೆಲ್ಲಾ ನಡೆದಿರುವುದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕೊಂಕಲ್ ಗ್ರಾಮದಲ್ಲಿ..

Yadgir police: ಗಂಡನ ಹತ್ಯೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ: 1 ತಿಂಗಳಲ್ಲಿ ಪತ್ನಿಯ ಕಳ್ಳಾಟ ಬಯಲಿಗೆಳೆದ ಯಾದಗಿರಿ ಪೊಲೀಸರು!
ಗಂಡನ ಹತ್ಯೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ
Follow us
ಅಮೀನ್​ ಸಾಬ್​
| Updated By: ಸಾಧು ಶ್ರೀನಾಥ್​

Updated on: Jul 25, 2023 | 11:47 AM

ಆ ವ್ಯಕ್ತಿ ತಾನಾಯ್ತು ತನ್ನ ಕೆಲಸ ಆಯ್ತು ಅಂತ ಕೃಷಿ ಕೆಲಸ ಮಾಡಿಕೊಂಡಿದ್ದ. ಮಡದಿ, ಮೂರು ಮಕ್ಕಳ ಜೊತೆ ಬದುಕು ಸಾಗಿಸುತ್ತಿದ್ದ. ಆದ್ರೆ ಕಳೆದ ಒಂದು ತಿಂಗಳ ಹಿಂದೆ ಜಮೀನು ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿ ಸಿಕ್ಕಿದ್ದಾನೆ. ಆಗ, ಪತ್ನಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾನೇ ಹೇಳಿದ್ದಾಳೆ. ಆದ್ರೆ ಪೊಲೀಸರು ಕೂಲಂಕಷವಾಗಿ ಒಂದು ತಿಂಗಳ ಕಾಲ ತನಿಖೆ ನಡೆಸಿ ಅದು ಆತ್ಮಹತ್ಯೆ ಅಲ್ಲ; ಕೊಲೆ ಅಂತ ಸಾಬೀತು ಮಾಡಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿಯ ಕೊಲೆ ಮಾಡಿದಾದ್ರು ಯಾಕೆ ಮತ್ತು ಯಾರು ಅಂತೀರಾ? ಈ ಸ್ಟೋರಿ ನೋಡಿ.. ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ.. ಪೊಲೀಸರ ತನಿಖೆಯಲ್ಲಿ ಬಟಾಬಯಲಾಯ್ತು (paramour) ಆತ್ಮಹತ್ಯೆಯ ಅಸಲಿ ಕಹಾನಿ.. ಆತ್ಮಹತ್ಯೆ ಅಲ್ಲ (suicide) ಮರ್ಡರ್ ಅಂತ (murder) ಸಾಬೀತು ಮಾಡಿದ ಪೊಲೀಸರು.. ಯಸ್ ಈ ವಿದ್ಯಮಾನಗಳು ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯ ಗುರುಮಠಕಲ್ (Gurmatkal) ತಾಲೂಕಿನ ಕೊಂಕಲ್ ಗ್ರಾಮದಲ್ಲಿ.. (Yadgir police)

ಹೌದು ಕೊಂಕಲ್ ಗ್ರಾಮದಲ್ಲಿ ಕಳೆದ ಒಂದು ತಿಂಗಳ ಹಿಂದೆ ಜಮೀನಿ ನ ಬನ್ನಿ ಗಿಡಕ್ಕೆ ಗ್ರಾಮದ 36 ವರ್ಷದ ಕಾಶಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡ್ಲೆ ಗುರುಮಠಕಲ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳಕ್ಕೆ ಹೋಗಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿದ ಕಾಶಪ್ಪನ ಸಹೋದರಿ ಕಾಶಮ್ಮ ಕೂಡ ಸ್ಥಳಕ್ಕೆ ಬಂದಿದ್ದಾಳೆ.

ಪೊಲೀಸರು ಕಾಶಮ್ಮಳಿಂದ ಅಸಹಜ ಸಾವು ಅಂತ ದೂರು ದಾಖಲಿಸಿಕೊಂಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಒಂದು ತಿಂಗಳ ಕಾಲ ತನಿಖೆ ನಡೆಸಿದ್ದಾರೆ. ಬಳಿಕ ಕಾಶಪ್ಪ ಆತ್ಮಹತ್ಯೆ ಮಾಡಿಕೊಂಡಿಲ್ಲ ಬದಲಿಗೆ ಕಾಶಪ್ಪನ ಕೊಲೆ ಯಾರಿಗೂ ಗೊತ್ತಾಗಬಾರದು ಅಂತ ನೇಣು ಬಿಗಿದ್ದಾರೆ ಅಂತ ಗೊತ್ತಾಗಿದೆ.

ಅಷ್ಟಕ್ಕೂ ಇಲ್ಲಿ ಕಾಶಪ್ಪನ ಕೊಲೆ ಮಾಡಿದವರಾದ್ರು ಯಾರು ಅಂದ್ರೆ ಇದೇ ಕಾಶಪ್ಪನ ಪತ್ನಿ 31 ವರ್ಷ ಅನೀತಾ ಹಾಗೂ ಕಾಶಪ್ಪನ ಹಿಂದಿನ ಮನೆಯ 25 ವರ್ಷ ನಾಗರಾಜ್ ಅಂತ ಗೊತ್ತಾಗಿದೆ. ಈ ಕಾಶಪ್ಪನ ಕೊಲೆಗೆ ಕಾರಣ ತಿಳಿದ ಪೊಲೀಸರಿಗೆ ಶಾಕ್ ಆಗಿದೆ. ಕಾಶಪ್ಪನ ಪತ್ನಿ ಗಂಡನನ್ನೆ ಕೊಲೆ ಮಾಡಲು ಕಾರಣವಾದ್ರು ಏನು ಅಂದ್ರೆ ತನ್ನ ಅನೈತಿಕ ಸಂಬಂಧಕ್ಕೆ ಕಾರಣವಾಗಿದ್ದಕ್ಕೆ ಪ್ರಿಯತಮ ನಾಗರಾಜ್ ಜೊತೆ ಸೇರಿ ಅನೀತಾ ಗಂಡನನ್ನ ಕೊಲೆ ಮಾಡಿದ್ದಾಳೆ..

ಇನ್ನು ಕಾಶಪ್ಪ ಗ್ರಾಮದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ. ತನ್ನದೆ ಆದ ಸ್ವಂತ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕಾಶಪ್ಪನ ಮನೆಯ ಹಿಂದೆ ವಾಸವಾಗಿದ್ದ ನಾಗರಾಜ್ ಕಾಶಪ್ಪನ ಜಮೀನಿಗೆ ಕೆಲಸ ಮಾಡಲು ಬರ್ತಾಯಿದ್ದ. ಇದೆ ವೇಳೆ ಕಾಶಪ್ಪನ ಪತ್ನಿ ಅನೀತಾ, ನಾಗರಾಜನನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾಳೆ.

ಮೂರು ವರ್ಷಗಳಿಂದ ಇಬ್ಬರ ಮಧಗ್ಯೆ ಅನೈತಿಕ ಸಂಬಂಧ ಬೆಳೆದಿದೆ. ಇಬ್ಬರೂ ಆಗಾಗ ಜಮೀನಿನಲ್ಲಿ ಸೇರುತ್ತಿದ್ರು. ಈ ವಿಚಾರ ಕಾಶಪ್ಪನಿಗೂ ಗೊತ್ತಾಗಿದೆ. ಇದೇ ಕಾರಣಕ್ಕೆ ಗ್ರಾಮದ ಹಿರಿಯ ಸಮ್ಮುಖದಲ್ಲಿ ಎರಡು ಬಾರಿ ನ್ಯಾಯ ಪಂಚಾಯ್ತಿ ಕೂಡ ಮಾಡಿ ಇಬ್ಬರಿಗೂ ಬುದ್ದಿ ಮಾತು ಹೇಳಿದ್ದಾರೆ.

ಆದ್ರೆ ಮೂರು ಮಕ್ಕಳ ತಾಯಿಯಾಗಿರುವ ಅನೀತಾ ಮಾತ್ರ ಯಾರ ಮಾತಿಗೂ ಕಿವಿ ಕೊಡದೆ ಮತ್ತೆ ಮತ್ತೆ ಫೋನ್ ಮಾಡಿ ನಾಗರಾಜ್ ಗೆ ಕರೆಸಿಕೊಳ್ಳುತ್ತಿದ್ಳು. ಕೊನೆಗೆ ಬೇಸತ್ತು ನಾಗರಾಜನ ತಾಯಿ ಊರಲ್ಲಿ ಇದ್ರೆ ಮಗ ಪೂರ್ತಿ ಹಾಳಾಗುತ್ತಾನೆ ಅಂತ ಬೆಂಗಳೂರಿಗೆ ದುಡಿಯಲು ಕಳುಹಿಸಿದ್ಳು. ಆದ್ರೆ ಅನೀತಾ ಮಾತ್ರ ನಾಗರಾಜನನ್ನು ಬಿಟ್ಟು ದೂರ ಆಗುವುದ್ದಕ್ಕೆ ಯಾವುದೇ ಕಾರಣಕ್ಕೆ ಒಪ್ಪಿಲ್ಲ.

ಇದೆ ಕಾರಣಕ್ಕೆ ಬೆಂಗಳೂರಿನಲ್ಲಿದ್ದ ನಾಗರಾಜನಿಗೆ ಫೋನ್ ಮಾಡಿ ಮತ್ತೆ ಊರಿಗೆ ಕರೆಸಿಕೊಂಡಿದ್ದಾಳೆ. ಊರಿಗೆ ಬಂದ ನಾಗರಾಜ್ ಜೊತೆ ಮತ್ತೆ ಅನೈತಿಕ ಸಂಬಂಧವನ್ನ ಮುಂದುವರೆಸಿದಳು. ಇದೆ ಕಾರಣಕ್ಕೆ ಕಳೆದ ಜೂನ್ 15 ರಂದು ಗಂಡ ಹೆಂಡ್ತಿ ಇಬ್ಬರ ಮಧ್ಯೆ ಇದೇ ವಿಚಾರಕ್ಕೆ ಜಗಳವಾಗಿದೆ. ಬಳಿಕ ರಾತ್ರಿ ವೇಳೆ ಕಾಶಪ್ಪ ಮನೆಯಲ್ಲಿ ಮಲಗಿದ್ದಾಗ ಅನೀತಾ ನಾಗರಾಜನನ್ನು ಮನೆಗೆ ಕರೆಸಿಕೊಂಡು ಇಬ್ಬರೂ ಸೇರಿ ಕಾಶಪ್ಪನಿಗೆ ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಬಳಿಕ ಯಾರಿಗೂ ಗೊತ್ತಾಗಬಾರದು ಅಂತ ರಾತ್ರೋರಾತ್ರಿ ಜಮೀನಿಗೆ ಮೃತದೇಹವನ್ನ ಬೈಕ್ ಮೇಲೆ ತೆಗೆದುಕೊಂಡು ಹೋಗಿ ಬನ್ನಿ ಗಿಡಕ್ಕೆ ಹಗ್ಗದಿಂದ ನೇಣು ಬಿಗಿದಿದ್ದಾರೆ. ಬೆಳಗ್ಗೆ ಎದ್ದು ಜನ ನೋಡಿದ್ರೆ ಕಾಶಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಗೊತ್ತಬೇಕು ಅಂತ ಈ ಪ್ಲಾನ್ ಮಾಡಿದ್ದಾರೆ. ಆದ್ರೆ ಕಾಶಪ್ಪನ ಸಹೋದರಿ ಕಾಶಮ್ಮ ಮಾತ್ರ ತನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿಲ್ಲ. ನನಗೆ ಸಂಶಯ ಇದೆ. ಹೀಗಾಗಿ ಕೂಲಂಕಷವಾಗಿ ತನಿಖೆ ಮಾಡುವಂತೆ ಗುರುಮಠಕಲ್ ಠಾಣೆಯ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾಳೆ.

ಬಳಿಕ ಪೊಲೀಸರು ತನಿಖೆ ಮಾಡಿದಾಗ ಅನೀತಾ ಮತ್ತು ನಾಗರಾಜ್ ಮಧ್ಯೆ ಇರುವ ಅನೈತಿಕ ಸಂಬಂಧಕ್ಕೆ ಕಾಶಪ್ಪ ಅಡ್ಡ ಆಗುತ್ತಿದ್ದಾನೆ ಅಂತ ಕೊಲೆ ಮಾಡಿದ್ದಾರೆ ಅಂತ ತಿಳಿದು ಬಂದಿದೆ. ಒಟ್ನಲ್ಲಿ ಮದುವೆಯಾಗಿ 14 ವರ್ಷ ಕಳೆದಿದ್ದು, ಮೂರು ಮುದ್ದಾದ ಮಕ್ಕಳಿದ್ದರೂ ಅನೀತಾ ಮಾತ್ರ ಪರ ಪುರುಷನ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದಾಳೆ. ತನ್ನ ಹೊಲಸು ಕೆಲಕ್ಕೆ ಗಂಡ ಅಡ್ಡ ಆಗ್ತಾಯಿದ್ದಾನೆ ಅಂತ ಒಂದೆ ಕಾರಣಕ್ಕೆ ಗಂಡನನ್ನ ಕೊಲೆ ಮಾಡಿದ್ದಾಳೆ. ಗಂಡನನ್ನ ಕೊಲೆ ಮಾಡಿ ಈಗ ಪ್ರಿಯತಮನ ಜೊತೆ ಜೈಲು ಸೇರಿದ್ದಾಳೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ