ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಕಿಂಗ್‌ಪಿನ್​ಗಳಿಗೆ ಜಾಮೀನು ಸಿಕ್ಕರೂ ರಿಲೀಫ್‌ ಇಲ್ಲ; ನರೇಶ್ ಗೌಡ, ಶ್ರವಣ್‌ಗೆ ಬಂಧನ ಭೀತಿ ತಪ್ಪಿಲ್ಲ

ಸಿಡಿ ಕಿಂಗ್‌ಪಿನ್‌ಗಳಾದ ನರೇಶ್ ಮತ್ತು ಶ್ರವಣ್‌ಗೆ ಇದರಿಂದ ಮತ್ತೆ ಸಂಕಷ್ಟ ಎದುರಾದಂತಾಗಿದೆ. ಆರೋಪಿಗಳ ಬಂಧನ ಅವಶ್ಯವಿದ್ದರೆ ಬಂಧಿಸಬಹುದು. ಬಂಧಿಸಲು ಎಸ್​ಐಟಿ ತನಿಖಾಧಿಕಾರಿಗಳು ಸ್ವತಂತ್ರ ಎಂದು ಕೋರ್ಟ್ ಹೇಳಿದೆ. CCH 91ರ ಜಡ್ಜ್‌ ಶ್ರೀಧರ್ ಗೋಪಾಲಕೃಷ್ಣ ಭಟ್ ಆದೇಶ ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಕಿಂಗ್‌ಪಿನ್​ಗಳಿಗೆ ಜಾಮೀನು ಸಿಕ್ಕರೂ ರಿಲೀಫ್‌ ಇಲ್ಲ; ನರೇಶ್ ಗೌಡ, ಶ್ರವಣ್‌ಗೆ ಬಂಧನ ಭೀತಿ ತಪ್ಪಿಲ್ಲ
ಪ್ರಮುಖ ಆರೋಪಿ ನರೇಶ್​
Updated By: ganapathi bhat

Updated on: Jun 09, 2021 | 7:03 PM

ಬೆಂಗಳೂರು: ಸಿಡಿ ಕಿಂಗ್‌ಪಿನ್​ಗಳಿಗೆ ಜಾಮೀನು ಸಿಕ್ಕರೂ ರಿಲೀಫ್‌ ಇಲ್ಲ. ನರೇಶ್ ಗೌಡ, ಶ್ರವಣ್‌ಗೆ ಬಂಧನ ಭೀತಿ ಮಾತ್ರ ತಪ್ಪಿಲ್ಲ. ‘ಅಗತ್ಯಬಿದ್ದರೆ ಬಂಧಿಸಿ ವಿಚಾರಣೆ ಮಾಡಲು ಅನುಮತಿ’ ಎಂದು ನಿರೀಕ್ಷಣಾ ಜಾಮೀನು ಮಂಜೂರು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅಗತ್ಯವೆನಿಸಿದರೆ ವಶಕ್ಕೆ ಪಡೆದು ವಿಚಾರಣೆಗೆೆ ತನಿಖಾಧಿಕಾರಿಗಳಿಗೆ ಅನುಮತಿ ಕೊಟ್ಟು ನ್ಯಾಯಾಲಯ ಆದೇಶಿಸಿದೆ.

ಸಿಡಿ ಕಿಂಗ್‌ಪಿನ್‌ಗಳಾದ ನರೇಶ್ ಮತ್ತು ಶ್ರವಣ್‌ಗೆ ಇದರಿಂದ ಮತ್ತೆ ಸಂಕಷ್ಟ ಎದುರಾದಂತಾಗಿದೆ. ಆರೋಪಿಗಳ ಬಂಧನ ಅವಶ್ಯವಿದ್ದರೆ ಬಂಧಿಸಬಹುದು. ಬಂಧಿಸಲು ಎಸ್​ಐಟಿ ತನಿಖಾಧಿಕಾರಿಗಳು ಸ್ವತಂತ್ರ ಎಂದು ಕೋರ್ಟ್ ಹೇಳಿದೆ. CCH 91ರ ಜಡ್ಜ್‌ ಶ್ರೀಧರ್ ಗೋಪಾಲಕೃಷ್ಣ ಭಟ್ ಆದೇಶ ನೀಡಿದ್ದಾರೆ.

ನಿರೀಕ್ಷಣಾ ಜಾಮೀನು ನೀಡಿರುವ ಆದೇಶದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದ್ದು, ‘ವಸ್ತುಗಳು ಹಾಗೂ ದಾಖಲೆ ವಶಪಡಿಸಿಕೊಳ್ಳಬಹುದು’ ಎಂದು ಕೂಡ ಹೇಳಲಾಗಿದೆ. ಹೀಗಾಗಿ ಸಿಡಿ ಕಿಂಗ್‌ಪಿನ್ಸ್‌ ಎಂದು ಕರೆಸಿಕೊಂಡ ನರೇಶ್‌, ಶ್ರವಣ್‌ಗೆ ಇನ್ನೂ ಬಂಧನ ಭೀತಿ ಉಳಿದುಕೊಳ್ಳುವಂತಾಗಿದೆ.

ಆರೋಪಿಗಳ ಬಂಧನ ಅಗತ್ಯವೆನಿಸಿದ್ರೆ ಬಂಧಿಸಬಹುದು ಎಂದು ಷರತ್ತು ವಿಧಿಸಿ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಯಾವುದೇ ಷರತ್ತು ಉಲ್ಲಂಘಿಸಿದ್ರೂ ಸಹ ಜಾಮೀನು ರದ್ದುಗೊಳಿಸಲಾಗುವುದು. ತಾನೇ ತಾನಾಗಿ ಜಾಮೀನು ರದ್ದಾಗಲಿದೆ ಎಂದು ಕೋರ್ಟ್‌ ಹೇಳಿದೆ.

ಕೋರ್ಟ್‌ ಅನುಮತಿ ಇಲ್ಲದೆ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ. ಐದು ದಿನಗಳಲ್ಲಿ ತನಿಖಾಧಿಕಾರಿ ಮುಂದೆ ಶರಣಾಗಬೇಕು. ಸಿಡಿ ಕೇಸ್‌ ಸಾಕ್ಷಿಗಳಿಗೆ ಬೆದರಿಕೆ, ಆಮಿಷವೊಡ್ಡುವಂತಿಲ್ಲ. ತನಿಖಾಧಿಕಾರಿ ಕರೆದಾಗೆಲ್ಲಾ ವಿಚಾರಣೆಗೆ ಹಾಜರಾಗಬೇಕು. ‘ಇಂಥದ್ದೇ ಬೇರೆ ಕೃತ್ಯಗಳಲ್ಲಿ ತೊಡಗದಿರುವಂತೆ ಷರತ್ತು’ ವಿಧಿಸಿ CCH 91ರ ಜಡ್ಜ್‌ ಶ್ರೀಧರ್ ಗೋಪಾಲಕೃಷ್ಣ ಭಟ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Big Update: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದ ನರೇಶ್​ ಗೌಡ ಹಾಗೂ ಶ್ರವಣ್​ಗೆ ನಿರೀಕ್ಷಣಾ ಜಾಮೀನು ನೀಡಿದ ಕೋರ್ಟ್

ರಮೇಶ್ ಜಾರಕಿಹೊಳಿ ರಕ್ತ, ವೀರ್ಯ, ಉಗುರು, ಕೂದಲ ಸ್ಯಾಂಪಲ್ ಪಡೆದು ತನಿಖೆ ನಡೆಸಿಲ್ಲ: ಹೈಕೋರ್ಟ್‌ಗೆ ಯುವತಿಯಿಂದ‌ ಅರ್ಜಿ