ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್ ಸನಿಹದಲ್ಲಿ ಸಿಡಿ ಯುವತಿ; ವಕೀಲ ಜಗದೀಶ್
ನ್ಯಾಯಾಲಯ ಯಾವಾಗ ಹೇಳುತ್ತೋ ಆವಾಗ ಯುವತಿಯನ್ನು ಕರೆದುಕೊಂಡು ಬರುತ್ತೇವೆ. ನ್ಯಾಯಾಲಯ ಕರೆತನ್ನಿ ಅಂದ್ರೆ ಕರೆದುಕೊಂಡು ಬರ್ತಿನಿ. ಸೆಕ್ಯೂರಿಟಿ ಸಿದ್ದತೆಯಾದ ತಕ್ಷಣ ಅನುಮತಿ ಕೊಡಬಹುದು. ಯುವತಿ ಇರೋ ಜಾಗದಲ್ಲಿ ಈಗಾಗಲೇ ಭದ್ರತೆ ಒದಗಿಸಲಾಗಿದೆ: ವಕೀಲ ಜಗದೀಶ್
ಬೆಂಗಳೂರು: ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಸನಿಹದಲ್ಲಿಯೇ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಇದ್ದಾರೆ. ವಕೀಲರ ಜೊತೆಗೆ ಯುವತಿ ನ್ಯಾಯಾಲಯ ತಲುಪಲಿದ್ದಾರೆ ಎಂದು ಯುವತಿಪರ ವಕೀಲ ಕೆ.ಎನ್.ಜಗದೀಶ್ ಹೇಳಿದರು. ಈ ಮೊದಲು ಟಿವಿ9 ಪ್ರತಿನಿಧಿಯೊಂದಿಗೆ ಮಾತನಾಡಿದ್ದ ಅವರು, ಅರ್ಧ ಗಂಟೆ ಅಥವಾ ಒಂದು ಗಂಟೆ, ಇಲ್ಲವೇ ಎರಡು ಗಂಟೆಗಳಲ್ಲಿ ಯುವತಿಯನ್ನು ನ್ಯಾಯಾಲಯಕ್ಕೆ ಹಾಜರು ಮಾಡುತ್ತೇವೆ ಎಂದು ಹೇಳಿದ್ದರು. ಈ ಮೊದಲು ಸಿಆರ್‌ಪಿಸಿ 164 ಪ್ರಕಾರ ಕೋರ್ಟ್ನಲ್ಲಿ ಹೇಳಿಕೆ ದಾಖಲು ಮಾಡುತ್ತೇವೆ ಎಂದು ನ್ಯಾಯಾಧೀಶರು ಆದೇಶಿಸಿದ ಬೆನ್ನಲ್ಲೇ ವಕೀಲ ಜಗದೀಶ್ ಈ ಹೇಳಿಕೆ ನೀಡಿದ್ದಾರೆ.
ಡಿಸಿಪಿ ಇಶಾಪಂಥ್ ಭದ್ರತೆಯಲ್ಲಿ ಯುವತಿ ಕೋರ್ಟ್ಗೆ ಹಾಜರಾಗಲಿದ್ದಾಳೆ.ಪೊಲೀಸ್ ಸಿಬ್ಬಂದಿ ಕಣ್ಗಾವಲಿನಲ್ಲಿ ಸಂತ್ರಸ್ತ ಯುವತಿಯನ್ನು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ ಎಂಬ ಮಾಹಿತಿ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ.
ನ್ಯಾಯಾಲಯ ಯಾವಾಗ ಹೇಳುತ್ತೋ ಆವಾಗ ಯುವತಿಯನ್ನು ಕರೆದುಕೊಂಡು ಬರುತ್ತೇವೆ. ನ್ಯಾಯಾಲಯ ಕರೆತನ್ನಿ ಅಂದ್ರೆ ಕರೆದುಕೊಂಡು ಬರ್ತಿನಿ. ಸೆಕ್ಯೂರಿಟಿ ಸಿದ್ದತೆಯಾದ ತಕ್ಷಣ ಅನುಮತಿ ಕೊಡಬಹುದು. ಯುವತಿ ಇರೋ ಜಾಗದಲ್ಲಿ ಈಗಾಗಲೇ ಭದ್ರತೆ ಒದಗಿಸಲಾಗಿದೆ. ನ್ಯಾಯಾಲಯ ಅನುಮತಿ ಕೊಟ್ಟ ತಕ್ಷಣ ಕರೆದುಕೊಂಡು ಬರ್ತೀನಿ. ಕಳೆದ 28 ದಿನಗಳಿಂದ ಆಕೆ ಒತ್ತಡದಲ್ಲಿದ್ದರು. ಅವರ ಆರೋಗ್ಯ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ..
ಸಂತ್ರಸ್ತೆ ಕೋರ್ಟ್ನಿಂದ ನಾಲ್ಕು ಕಿಮೀ ದೂರದಲ್ಲಿದ್ದಾಳೆ. ಐದು ಕಾರಿನಲ್ಲಿ ಯುವತಿಯ ಜತೆ ವಕೀಲರ ತಂಡ ಆಗಮಿಸುತ್ತಿದೆ ಎಂಬ ಮಾಹಿತಿಗಳೂ ದೊರೆತಿವೆ. ಈ ಪ್ರಕರಣದಲ್ಲಿ ಆರೋಪಿ ಎನಿಸಿರುವ ವ್ಯಕ್ತಿ ಎಸ್ಐಟಿ ತನಿಖಾ ತಂಡಕ್ಕೆ ಉತ್ತರ ಕೊಟ್ಟಿಲ್ಲ. ಇನ್ನು ನಾಲ್ಕು ದಿನಗಳ ಕಾಲ ಕಾಲವಕಾಶ ಕೇಳಿದ್ದಾರೆ. ಪ್ರಕರಣದಲ್ಲಿ ಸಂತ್ರಸ್ತೆಯನ್ನು ಬಿಟ್ಟರೆ ಬೇರೆ ಯಾರಿಗೂ ಪ್ರಧಾನವಾಗಿ ಅವಕಾಶವಿಲ್ಲ. ಆಕೆ ವಯಸ್ಕಳಾಗಿದ್ದು, ತಂದೆ ತಾಯಿ ಹೇಳಿಕೆ ಕೊಡೋದನ್ನು ನಿಲ್ಲಿಸಬೇಕು. ಮಗಳ ಯೋಗಕ್ಷೇಮ ವಿಚಾರಿಸಲಿ. ಆಕೆಯ ಹೇಳಿಕೆಯ ಪರವಾಗಿ ನಿಲ್ಲಲಿ ಎಂದು ವಕೀಲ ಜಗದೀಶ್ ಹೇಳಿದ್ದಾರೆ.
Published On - 1:20 pm, Tue, 30 March 21