ನ್ಯಾಯಾಧೀಶರ ಮುಂದೆ ಸ್ವಯಂಪ್ರೇರಿತವಾಗಿ ಹಾಜರಾಗಿ ಹೇಳಿಕೆ ನೀಡಿದ ‘ಸಿಡಿ’ ಯುವತಿಯ ಬಾಯ್​ಫ್ರೆಂಡ್​

|

Updated on: Mar 20, 2021 | 1:51 PM

ಸಿಡಿ ಪ್ರಕರಣದಲ್ಲಿ ಭಾಗಿಯಾಗಿರುವ ಯುವತಿಯ ಬಾಯ್​ಫ್ರೆಂಡ್​ ಇದೀಗ ನ್ಯಾಯಾಧೀಶರ ಮುಂದೆ ಸ್ವಯಂಪ್ರೇರಿತರಾಗಿ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಸೆಕ್ಷನ್ 164 ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಯನ್ನು ತಿಳಿಸಿದ್ದಾರೆ.

ನ್ಯಾಯಾಧೀಶರ ಮುಂದೆ ಸ್ವಯಂಪ್ರೇರಿತವಾಗಿ ಹಾಜರಾಗಿ ಹೇಳಿಕೆ ನೀಡಿದ ‘ಸಿಡಿ’ ಯುವತಿಯ ಬಾಯ್​ಫ್ರೆಂಡ್​
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಮಾಜಿ ಸಚಿವ ಶಾಸಕ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದಲ್ಲಿ ಭಾಗಿಯಾಗಿರುವ ಯುವತಿಯ ಬಾಯ್​ಫ್ರೆಂಡ್ ಆಕಾಶ್​ ಇದೀಗ ಬೆಂಗಳೂರಿನ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಸ್ವಯಂಪ್ರೇರಿತರಾಗಿ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಸೆಕ್ಷನ್ 164 ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಯನ್ನು ತಿಳಿಸಿದ್ದಾರೆ ಎಂದು ಗೊತ್ತಾಗಿದೆ. ಸದ್ಯ ಈತನ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿಡಲಾಗುತ್ತದೆ ಮತ್ತು ಚಾರ್ಜ್‌ಶೀಟ್ ಸಲ್ಲಿಕೆ ಬಳಿಕೆ ಕೋರ್ಟ್‌ಗೆ ಕಳಿಸಲಾಗುತ್ತದೆ ಎನ್ನಲಾಗಿದೆ.

ನ್ಯಾಯಾಧೀಶರ ಮುಂದೆಯೇ ಹೇಳಿಕೆ ನೀಡಿರುವ ಆಕಾಶ್​, ಸ್ವಯಂ ಪ್ರೇರಿತವಾಗಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾಗಿ ತಿಳಿದುಬಂದಿದೆ. ಆತ ತನ್ನ ಮಾತನ್ನು ಪದೇಪದೇ ಬದಲಿಸಬಾರದೆಂಬ ಕಾರಣಕ್ಕೆ ಈಗ ನೀಡಿರುವ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿಡಲಾಗಿದೆ. ಒಂದುವೇಳೆ ಈ ಹೇಳಿಕೆ ಆರೋಪಿಯದ್ದಾಗಿದ್ದರೆ ತಪ್ಪೊಪ್ಪಿಗೆ ಎಂದೂ ಮತ್ತು ಸಾಕ್ಷಿಯದ್ದಾಗಿದ್ದರೆ ಸ್ವಯಂ ಹೇಳಿಕೆ ಎಂದೂ ಪರಿಗಣನೆ ಮಾಡಬಹುದಾಗಿದೆ.

ಇದನ್ನೂ ಓದಿ:
ಸಿಡಿ ಆರೋಪಿ ಶ್ರವಣ್​ ಸಹೋದರ ನಾಪತ್ತೆ ಪ್ರಕರಣ: ಹೇಬಿಯಸ್​ ಕಾರ್ಪಸ್​ ಅರ್ಜಿ ಸುಖಾಂತ್ಯ 

ನಂಗೇನೂ ಗೊತ್ತಿಲ್ಲ, ಸಿಡಿ ನಂದಲ್ಲ, ಯುವತಿ ಯಾರು ಅಂತಾನೂ ಗೊತ್ತಿಲ್ಲ, ನೀವೇ ತನಿಖೆ ಮಾಡಿ: ಎಸ್​ಐಟಿ ತನಿಖೆಗೆ ರಮೇಶ್​ ಜಾರಕಿಹೊಳಿ ಉತ್ತರ

Published On - 1:45 pm, Sat, 20 March 21