AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಗೇನೂ ಗೊತ್ತಿಲ್ಲ, ಸಿಡಿ ನಂದಲ್ಲ, ಯುವತಿ ಯಾರು ಅಂತಾನೂ ಗೊತ್ತಿಲ್ಲ, ನೀವೇ ತನಿಖೆ ಮಾಡಿ: ಎಸ್​ಐಟಿ ತನಿಖೆಗೆ ರಮೇಶ್​ ಜಾರಕಿಹೊಳಿ ಉತ್ತರ

ಸಿಡಿ ದೃಶ್ಯಾವಳಿ ತೋರಿಸಿ ಎಸ್ಐಟಿ ಅಧಿಕಾರಿಗಳು ಪ್ರಶ್ನಿಸಿದಾಗ, ಆ ದೃಶ್ಯದಲ್ಲಿರೋದು ನಾನಲ್ಲ.. ನಾನವನಲ್ಲ.. ಅಲ್ಲವೇ ಅಲ್ಲ ಎಂದು ಉತ್ತರಿಸಿರುವ ರಮೇಶ್​ ಜಾರಕಿಹೊಳಿ, ಆಡಿಯೋ ಕ್ಲಿಪ್ ಗಳನ್ನ ಪ್ಲೇ ಮಾಡಿ ವಾಯ್ಸ್ ನಿಮ್ಮದೇ ಎಂದು ಕೇಳಿದಾಗಲೂ ನನ್ನ ಧ್ವನಿ ಇದಲ್ಲ.. ಈ ವಾಯ್ಸ್ ನನ್ನದಲ್ಲ.. ನಾನವನಲ್ಲ ಎಂದು ಹೇಳಿದ್ದಾರೆ. ಜೊತೆಗೆ, ನರೇಶ್ ಸೇರಿದಂತೆ ಇತರೆ ಕೆಲವರ ಪೋಟೋಗಳು ತೋರಿಸಿ ಎಸ್​ಐಟಿ ಪ್ರಶ್ನಿಸಿದಾಗಲೂ ಇವರು ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ

ನಂಗೇನೂ ಗೊತ್ತಿಲ್ಲ, ಸಿಡಿ ನಂದಲ್ಲ, ಯುವತಿ ಯಾರು ಅಂತಾನೂ ಗೊತ್ತಿಲ್ಲ, ನೀವೇ ತನಿಖೆ ಮಾಡಿ: ಎಸ್​ಐಟಿ ತನಿಖೆಗೆ ರಮೇಶ್​ ಜಾರಕಿಹೊಳಿ ಉತ್ತರ
‘ಆ ಪ್ರಭಾವಿ ವ್ಯಕ್ತಿ’ಗೆ ಬುದ್ಧಿ ಕಲಿಸಬೇಕು ಅಣ್ಣ ಎಂದು ಸಂತ್ರಸ್ತ ಯುವತಿ ನನ್ನ ಬಳಿ ಬಂದಿದ್ದಳು: ಎಸ್​ಐಟಿ ಎದುರು ಹೇಳಿಕೆ ಕೊಟ್ಟ ನರೇಶ್
Skanda
|

Updated on:Mar 20, 2021 | 9:55 AM

Share

ಬೆಂಗಳೂರು: ರಾಜ್ಯದಲ್ಲಿ ಬಹುದೊಡ್ಡ ಸಂಚಲನಕ್ಕೆ ಕಾರಣವಾಗಿರುವ ಅಶ್ಲೀಲ ಸಿಡಿ ಪ್ರಕರಣ ದಿನೇ ದಿನೇ ಮಹತ್ವದ ತಿರುವು ಪಡೆದುಕೊಳ್ಳುತ್ತಿದ್ದು, ಎಸ್​ಐಟಿ ಅಧಿಕಾರಿಗಳು ಸಿಡಿ ಬಗ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಡಿ ಹಾಗೂ ಆಡಿಯೋ ಕ್ಲಿಪ್​ ಜೊತೆಗೆ ಕೆಲ ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆಯೂ ತನಿಖೆ ನಡೆಸುತ್ತಿರುವ ಎಸ್​ಐಟಿ ಅಧಿಕಾರಿಗಳು ಸತತ ನಾಲ್ಕು ಗಂಟೆ ವಿಚಾರಣೆ ನಡೆಸಿ ದಾಖಲೆಗಳನ್ನು ಮುಂದಿಟ್ಟು ಮಾಜಿ ಸಚಿವರಿಂದ ಉತ್ತರ ಪಡೆಯುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಎಸ್​ಐಟಿ ಅಧಿಕಾರಿಗಳು ಅಧಿಕಾರಿಗಳು ಕೇಳಿದ ಬಹುತೇಕ ಪ್ರಶ್ನೆಗಳಿಗೆ ರಮೇಶ್​ ಜಾರಕಿಹೊಳಿ ನಿರಾಕರಣೆಯ ಉತ್ತರವನ್ನೇ ಕೊಟ್ಟಿದ್ದು, ಆ ಸಿಡಿಯಲ್ಲಿರುವುದು ನಾನಲ್ಲ, ಅದು ನನ್ನ ಧ್ವನಿ ಅಲ್ಲ, ಆ ಯುವತಿ ಬಗ್ಗೆ ನನಗೆ ಗೊತ್ತೇ ಇಲ್ಲ, ನನ್ನ ಬಳಿ ಯಾರೂ ಬಂದಿಲ್ಲ, ನೇರವಾಗಿ ಹಣಕ್ಕೆ ಬೇಡಿಕೆ ಸಹ ಇಟ್ಟಿಲ್ಲ, ಅದು ಯಾರ ಮನೆ, ಯಾವ ಜಾಗ ಅನ್ನೋದೂ ಗೊತ್ತಿಲ್ಲ, ನನಗೆ ಮೊಬೈಲ್​ ಬಗ್ಗೆ ತಿಳಿದಿಲ್ಲ, ನಾನು ಅನಕ್ಷರಸ್ಥ, ಈ ವಿಚಾರ ನನಗೆ ನಾಲ್ಕು ತಿಂಗಳ ಹಿಂದೆ ಗೊತ್ತಾಯ್ತು. ಆದರೆ, ನಾನೇನು ಮಾಡಿಲ್ಲ ಅದಕ್ಕಾಗಿ ಆ ವಿಚಾರದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಅದೊಂದು ನಕಲಿ ವಿಡಿಯೋ ಎನ್ನುವ ಮೂಲಕ ಈ ಪ್ರಕರಣಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಉತ್ತರಿಸಿದ್ದಾರೆ.

ಸಿಡಿ ದೃಶ್ಯಾವಳಿ ತೋರಿಸಿ ಎಸ್ಐಟಿ ಅಧಿಕಾರಿಗಳು ಪ್ರಶ್ನಿಸಿದಾಗ, ಆ ದೃಶ್ಯದಲ್ಲಿರೋದು ನಾನಲ್ಲ.. ನಾನವನಲ್ಲ.. ಅಲ್ಲವೇ ಅಲ್ಲ ಎಂದು ಉತ್ತರಿಸಿರುವ ರಮೇಶ್​ ಜಾರಕಿಹೊಳಿ, ಆಡಿಯೋ ಕ್ಲಿಪ್ ಗಳನ್ನ ಪ್ಲೇ ಮಾಡಿ ವಾಯ್ಸ್ ನಿಮ್ಮದೇ ಎಂದು ಕೇಳಿದಾಗಲೂ ನನ್ನ ಧ್ವನಿ ಇದಲ್ಲ.. ಈ ವಾಯ್ಸ್ ನನ್ನದಲ್ಲ.. ನಾನವನಲ್ಲ ಎಂದು ಹೇಳಿದ್ದಾರೆ. ಜೊತೆಗೆ, ನರೇಶ್ ಸೇರಿದಂತೆ ಇತರೆ ಕೆಲವರ ಪೋಟೋಗಳು ತೋರಿಸಿ ಎಸ್​ಐಟಿ ಪ್ರಶ್ನಿಸಿದಾಗಲೂ ಇವರು ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ನಂತರ ಕೆಲವು ಸಿಸಿಟಿವಿ ದೃಶ್ಯವಾಳಿಗಳನ್ನು ತೋರಿಸಿ ದೃಶ್ಯದಲ್ಲಿರುವ ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಕೇಳಿದಾಗಲೂ ಗೊತ್ತಿಲ್ಲ ಎಂಬ ಉತ್ತರವನ್ನೇ ಪುನರುಚ್ಚರಿಸಿದ್ದಾರೆ. ಸಿಡಿಗೆ ಹಣದ ಬೇಡಿಕೆ ಇಟ್ಟವರು ರಾಉ ಎಂದು ಕೇಳಿದಾಗ, ನನ್ನ ಬಳಿ ನೇರವಾಗಿ ಯಾರೂ ಬೇಡಿಕೆ ಇಟ್ಟಿಲ್ಲ, ನಾಗರಾಜ್​ ಎನ್ನುವವರ ಮೂಲ ಇಡಲಾಗಿತ್ತು. ಅವರು ಹೇಳಿದ್ದರಿಂದ ಗೊತ್ತಾಯಿತು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಹೀಗೆ ಎರಡು ಬಾರಿ ವಿಡಿಯೋ, ಆಡಿಯೋ ಪ್ಲೇ ಮಾಡಿದರೂ ಗೊತ್ತಿಲ್ಲ ಎಂಬ ಒಂದೇ ಉತ್ತರ ನೀಡುತ್ತಿರುವ ರಮೇಶ್ ಜಾರಕಿಹೊಳಿ, ಒಂದು ಹಂತದಲ್ಲಿ ನೀವೇ ತನಿಖೆ ನಡೆಸಿ ನನಗೆ ಮಾಹಿತಿ ಕೊಡಿ ಎಂದು ಅಧಿಕಾರಿಗಳನ್ನೇ ಕೇಳಿದ್ದಾರೆ. ಇಷ್ಟು ನಿಖರವಾಗಿ 2+3+4 ಷಡ್ಯಂತ್ರ ಎಂದು ಆರೋಪಿಸುತ್ತಿದ್ದೀರಿ ಯಾರವರು? ಮಾಹಿತಿ ಕೊಡಿ ಎಂದು ಎಸ್ಐಟಿ ಕೇಳಿದಾಗ, ನನಗೆ ಗೊತ್ತಿರುವ ಮಾಹಿತಿ ಇಷ್ಟೇ. ನಿಮ್ಮ ಕೆಲವು ಪ್ರಶ್ನೆಗಳಿಗೆ ಅಡ್ವೋಕೇಟ್ ಮೂಲಕ ಉತ್ತರ ಕೊಡುತ್ತೀನಿ. ನೀವು ತನಿಖೆ ನಡೆಸಿ ಆರೋಪಿಗಳಿಗೆ ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂದು ಕೇಳಿಕೊಂಡಿದ್ದಾರೆ. ಅಲ್ಲದೇ, ಷಡ್ಯಂತ್ರ ಭೇದಿಸಿ ಎಂದು ದೂರು ನೀಡಿದರೆ ನನ್ನನ್ನೇ ಅಪರಾಧಿ ಎಂಬಂತೆ ನೋಡುತ್ತೀರಾ ಎಂದು ಅಧಿಕಾರಿಗಳಿಗೆ ಮರುಪ್ರಶ್ನೆ ಎಸೆದಿದ್ದಾರೆ.

ಸತತ ನಾಲ್ಕು ಗಂಟೆಗಳ ವಿಚಾರಣೆ ಮತ್ತು ಪ್ರಶ್ನೆಗಳನ್ನು ಎದುರಿಸಿ ಕಂಗಾಲಾದ ರಮೇಶ್ ಜಾರಕಿಹೊಳಿಗೆ ಎಸ್​ಐಟಿ ಅಧಿಕಾರಿಗಳು ಕೆಲ ನೇರಾನೇರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ ಎಂಬ ವಿಚಾರ ಗೊತ್ತಾಗಿದೆ. ಸಿಡಿಯಲ್ಲಿದ್ದ ಯುವತಿ ಬಗ್ಗೆ ಮಾಹಿತಿ ಕೇಳಿದಾಗ, ಆಕೆ ಯಾರು ಎಂಬುಂದೇ ಗೊತ್ತಿಲ್ಲ ಎಂದು ಜಾರಕಿಹೊಳಿ ಹೇಳಿದ್ದಾರೆ. ಆದರೆ, ಅಷ್ಟಕ್ಕೇ ಬಿಡದ ಎಸ್​ಐಟಿ ಆಕೆಯ ಜೊತೆ ಸಂಪರ್ಕದ ಬಗ್ಗೆ ಕೆದಕಿದ್ದಾರೆ. ಅದಕ್ಕೂ ಗೊತ್ತಿಲ್ಲ ಎಂಬ ಉತ್ತರವನ್ನೇ ಹೇಳಿದಾಗ, ಯುವತಿ ಜೊತೆ ನಡೆದಿತ್ತು ಎನ್ನಲಾದ ಸಂಭಾಷಣೆಯ ಕಾಲ್ ಡಿಟೈಲ್ಸ್​ ತೋರಿಸಿದ ಎಸ್​ಐಟಿ ಅಧಿಕಾರಿಗಳು ರಮೇಶ್​ ಜಾರಕಿಹೊಳಿಗೆ ಶಾಕ್​ ನೀಡಿದ್ದಾರೆ. ದಾಖಲೆ ಕಂಡು ಒಮ್ಮೆಲೆ ಶಾಕ್​ ಆದ ರಮೇಶ್ ಜಾರಕಿಹೊಳಿ, ಮೊಬೈಲ್ ಬಗ್ಗೆ ನನಗೆ ಏನೂ ಗೊತ್ತಿಲ್ಲ, ನಾನು ಅನಕ್ಷರಸ್ಥ. ಯುವತಿ ಬಗ್ಗೆಯೂ ಗೊತ್ತಿಲ್ಲ, ನಾನು ಆಕೆಯನ್ನು ಯಾವತ್ತೂ ಭೇಟಿಯಾಗಿಲ್ಲ ಎಂದು ಹೇಳುತ್ತಾ, ಫ್ಲ್ಯಾಟ್​ನಲ್ಲಿ ನನ್ನ ವಿರುದ್ಧ ಷಡ್ಯಂತ್ರ ಆಗಿದೆ ಮತ್ತು ಇದರ ಹಿಂದೆ ಮಹಾನಾಯಕ ಇದ್ದಾನೆ ಎಂದು ಉತ್ತರ ಕೊಟ್ಟಿದ್ದಾರೆ.

ಇದೇ ವಿಷಯವನ್ನು ಇಟ್ಟುಕೊಂಡ ಎಸ್​ಐಟಿ ಮಹಾನಾಯಕ ಯಾರೆಂದು ಹೇಳಿ ಎಂದಾಗ ಮತ್ತೆ ತನ್ನ ಮಾಮೂಲಿ ವರಸೆ ತೆಗೆದ ರಮೇಶ್ ಜಾರಕಿಹೊಳಿ, ಆತ ಯಾರು ಎಂಬುದನ್ನು ನೀವೇ ತನಿಖೆ ಮಾಡಿ ಎಂದು ಅಧಿಕಾರಿಗಳಿಗೇ ತಿರುಗುಬಾಣ ಬಿಟ್ಟಿದ್ದಾರೆ. ಸಿಡಿ ನಕಲಿ ಎನ್ನುವುದಕ್ಕೆ ದಾಖಲೆ ಕೊಡಿ ಎಂದಾಗಲೂ ಆರೋಪದ ಬಗ್ಗೆ ನೀವೇ ತನಿಖೆ ಮಾಡಿ ಎಂದಿದ್ದಾರೆ. ಅಂತೆಯೇ ದೃಶ್ಯದಲ್ಲಿರುವ ಫ್ಲ್ಯಾಟ್​ ಕುರಿತು ವಿಚಾರಿಸಿದ ಅಧಿಕಾರಿಗಳು, ಅದು ನಿಮ್ಮ ಆಪ್ತರ ಫ್ಲ್ಯಾಟ್​ ಅಲ್ಲವೇ ಎಂದಾಗ ಅದು ಯಾರ ಮನೆ, ಏನು ಅನ್ನೊದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.

ಪ್ರಶ್ನಾವಳಿಗಳನ್ನು ಸಿದ್ದಪಡಿಸಿಕೊಂಡಿದ್ದ ಎಸ್​ಐಟಿ ಅಧಿಕಾರಿಗಳು ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ನೋಟಿಸ್​ ಹಿನ್ನೆಲೆ ನಿನ್ನೆ ಸಂಜೆ 5ಗಂಟೆ ಸುಮಾರಿಗೆ ರಮೇಶ್ ಜಾರಕಿಹೊಳಿ ತಮ್ಮ ವಕೀಲರೊಂದಿಗೆ ಆಡುಗೋಡಿಯ ಟೆಕ್ನಿಕಲ್​ ಸೆಲ್​ಗೆ ಬಂದಿದ್ದರು ಎಂದು ಗೊತ್ತಾಗಿದೆ. ಇನ್ನು ವಿಚಾರಣೆಯನ್ನು ಎರಡು ಕ್ಯಾಮೆರಾಗಳ ಮುಂದೆಯೇ ನಡೆಸಲಾಗಿದ್ದು, ಸತತ ನಾಲ್ಕು ಗಂಟೆಗಳ ಎಸ್​ಐಟಿ ವಿಚಾರಣೆಗೆ ಬೆವರಿದ ರಮೇಶ್ ಜಾರಕಿಹೊಳಿ, ನೀರು ಕುಡಿದು ತಡಬಡಾಯಿಸುತ್ತ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸತತ 4 ಗಂಟೆಯ ವಿಚಾರಣೆಯಲ್ಲಿ ಒಟ್ಟು 56 ಪ್ರಶ್ನೆಗಳನ್ನು ಕೇಳಲಾಗಿದ್ದು, ಎಸ್​ಐಟಿ ಹಿರಿಯ ಅಧಿಕಾರಿ ಸಂದೀಪ್ ಪಾಟೀಲ್, ಕೇಂದ್ರ ವಿಭಾಗದ ಡಿಸಿ ಅನುಚೇತ್, ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಎಸಿಪಿ ಧರ್ಮೇಂದ್ರ ಅವರಿಂದ ವಿಚಾರಣೆ ನಡೆಸಲಾಗಿದೆ. ವೈಯಕ್ತಿಕ ವಿಷಯಗಳಿಂದ ಆರಂಭವಾದ ವಿಚಾರಣೆಯಲ್ಲಿ ರಮೇಶ್ ಜಾರಕಿಹೊಳಿ ಜನ್ಮಸ್ಥಳ, ವಿದ್ಯಾಭ್ಯಾಸ, ಜೀವನದ ಪ್ರಮುಖ ವಿಚಾರಗಳಿಂದ ಹಿಡಿದು ಹಂತಹಂತವಾಗಿ ಮಾಹಿತಿ ಸಂಗ್ರಹಿಸಲಾಗಿದೆ.

ಇದನ್ನೂ ಓದಿ: ಕಾಲ್​ ಬಗ್ಗೆ ಗೊತ್ತಿಲ್ಲ ಎಂದು ಜಾರಿಕೊಂಡ ಜಾರಕಿಹೊಳಿಗೆ, ಕಾಲ್​ ಡಿಟೈಲ್ಸ್​ ತೋರಿಸಿ ಶಾಕ್​ ಕೊಟ್ಟ ಎಸ್​ಐಟಿ ಅಧಿಕಾರಿಗಳು

Published On - 9:24 am, Sat, 20 March 21