AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

24 ಗಂಟೆಯಲ್ಲಿ ಛಬ್ಬಿ ಗ್ರಾಮದ ಸಮಸ್ಯೆಗಳು ಬಗೆಹರಿಯಬೇಕು: ಕಂದಾಯ ಸಚಿವ ಆರ್ ಅಶೋಕ ಆದೇಶ

ಎಲ್ಲರೂ ಅವರ ಹಳ್ಳಿಗಳಿಗೆ ಬನ್ನಿ ಎಂದು ಕರೆಯುತ್ತಿದ್ದಾರೆ. ಜನರ ಮನೆ ಬಾಗಿಲಿಗೆ ಸರ್ಕಾರವನ್ನು ತಗೆದುಕೊಂಡು ಹೋಗಬೇಕಾಗಿದೆ. ಬಂದ ಸಿದ್ದ ಹೋದ ಸಿದ್ದ ಎನ್ನುವುದು ಗ್ರಾಮ ವಾಸ್ತವ ಅಲ್ಲ. 24 ಗಂಟೆಯಲ್ಲಿ ಗ್ರಾಮದ ಸಮಸ್ಯೆಗಳು ಬಗೆಹರಿಯಬೇಕು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.

24 ಗಂಟೆಯಲ್ಲಿ ಛಬ್ಬಿ ಗ್ರಾಮದ ಸಮಸ್ಯೆಗಳು ಬಗೆಹರಿಯಬೇಕು: ಕಂದಾಯ ಸಚಿವ ಆರ್ ಅಶೋಕ ಆದೇಶ
ಆರ್.ಅಶೋಕ
preethi shettigar
|

Updated on: Mar 20, 2021 | 1:42 PM

Share

ಹುಬ್ಬಳ್ಳಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಯೋಜನೆ ಅಡಿಯಲ್ಲಿ ಛಬ್ಬಿ ಗ್ರಾಮಕ್ಕೆ ಆಗಮಿಸಿದ ಕಂದಾಯ ಸಚಿವ ಆರ್ ಅಶೋಕ, ಛಬ್ಬಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಆರ್. ಅಶೋಕ್ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಯೋಜನೆಯನ್ನ ಜಾರಿಗೆ ತರಲಾಗಿದೆ. ಇದು ನನ್ನ 2ನೇ ಗ್ರಾಮ ವಾಸ್ತವ್ಯವಾಗಿದೆ ಎಂದು ಹೇಳಿದ್ದಾರೆ.

ಕಂದಾಯ ಆಡಳಿತವನ್ನ ಜನರ ಮನೆ ಬಾಗಿಲಿಗೆ ಕೊಡಬೇಕು. ಅಧಿಕಾರಿ ವರ್ಗಗಳಾದ ಡಿಸಿ, ಎಸಿ, ತಹಶಿಲ್ದಾರರು ಎಲ್ಲರೂ ಜನರ ಸೇವಕರು. 20-30 ವರ್ಷದಿಂದ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಜನರು ಸರ್ಕಾರಿ ಕಚೇರಿ ಮುಂದೆ ಕೈ ಕಟ್ಟಿ ನಿಂತುಕೊಳ್ಳಬಾರದು ಎಂದು ಕಂದಾಯ ಸಚಿವ ಆರ್​. ಅಶೋಕ್ ಮಾರ್ಮಿಕವಾಗಿ ತಿಳಿಸಿದ್ದಾರೆ.

ಅಧಿಕಾರಿಗಳು ಜನರ ಬಾಗಿಲಿಗೆ ಬಂದು ಕೆಲಸ ಮಾಡಿಕೊಡಬೇಕು ಎಂದು ಈ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ. 15 ದಿನ ಮುಂಚಿತವಾಗಿ ಜನರ ಮನೆಗೆ ಹೋಗಿ ಅಧಿಕಾರಿಗಳು ಸಮಸ್ಯೆಗಳ ಪಟ್ಟಿ ತಯಾರಿಸಿದ್ದಾರೆ‌. ಕಂದಾಯ ಇಲಾಖೆ ಕೆಲಸ, ಪಿಂಚಣಿ ಸೇರಿದಂತೆ ಗ್ರಾಮಸ್ಥರ ಸಮಸ್ಯೆಗಳ ಪಟ್ಟಿ ಮಾಡಿದ್ದಾರೆ‌. 2ಗ್ರಾಮ ವಾಸ್ತವ್ಯದಿಂದ ಸಾಕಷ್ಟು ಬೇಡಿಕೆ ಬಂದಿದೆ ಎಂದು ಸಚಿವ ಆರ್​ ಅಶೋಕ್ ಹೇಳಿದ್ದಾರೆ.

grama vasthavya

ಗ್ರಾಮ ವಾಸ್ತವ ಕಾರ್ಯಕ್ರಮದ ಸಿದ್ಧತೆಯ ದೃಶ್ಯ

ಎಲ್ಲರೂ ಅವರ ಹಳ್ಳಿಗಳಿಗೆ ಬನ್ನಿ ಎಂದು ಕರೆಯುತ್ತಿದ್ದಾರೆ. ಜನರ ಮನೆ ಬಾಗಿಲಿಗೆ ಸರ್ಕಾರವನ್ನು ತಗೆದುಕೊಂಡು ಹೋಗಬೇಕಾಗಿದೆ. ಬಂದ ಸಿದ್ದ ಹೋದ ಸಿದ್ದ ಎನ್ನುವುದು ಗ್ರಾಮ ವಾಸ್ತವ ಅಲ್ಲ. 24 ಗಂಟೆಯಲ್ಲಿ ಗ್ರಾಮದ ಸಮಸ್ಯೆಗಳು ಬಗೆಹರಿಯಬೇಕು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.

grama vasthavya

ಛಬ್ಬಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ಸಿದ್ಧತೆ

ಗ್ರಾಮ ವಾಸ್ತವಕ್ಕೆ ಕೊರೋನಾ ಅಡ್ಡಿ ಬಂದಿಲ್ಲ: ಇನ್ನು ಕೊರೊನಾದ ಎರಡನೇ ಅಲೆಯ ಭೀತಿ ಎಲ್ಲೇಡೆ ಹೆಚ್ಚಾಗುತ್ತಿದ್ದು, ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಯೋಜನೆ ಎಷ್ಟರಮಟ್ಟಿಗೆ ಸೂಕ್ತ ಎನ್ನುವ ಬಗ್ಗೆ ಮಾತನಾಡಿದ ಸಚಿವರಾದ ಆರ್​. ಅಶೋಕ ಗ್ರಾಮ ವಾಸ್ತವಕ್ಕೆ ಕೊರೋನಾ ಅಡ್ಡಿ ಬಂದಿಲ್ಲ. ಇನ್ನು ಮುಂದೆ ನಾವು ಕೋವಿಡ್ ಜೊತೆ ಬದುಕಬೇಕಾಗಿದೆ. ಲಾಕ್​ಡೌನ್ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಾಗಿದೆ ಎಂದು ಆರ್. ಅಶೋಕ ಹೇಳಿದ್ದಾರೆ.

ಇದನ್ನೂ ಓದಿ:

ಪಂಚಮಸಾಲಿ ಸಮಾವೇಶ: ಯಾರೂ ಕೂಡ ರಾಜ್ಯ ಸರ್ಕಾರಕ್ಕೆ ಗಡುವು ನೀಡಬಾರದು: ಕೈಮುಗಿದು ಕೇಳಿಕೊಂಡ ಆರ್. ಅಶೋಕ್

ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ, ಸರ್ಕಾರ ರೈತರ ಜೊತೆ ಸದಾ ಇರುತ್ತದೆ: ಕಂದಾಯ ಸಚಿವ ಆರ್.ಅಶೋಕ್