‘ಶಾಸಕಿ ಬಗ್ಗೆ ಮಾತಾಡಬೇಡ ಎಂದು ವರಿಷ್ಠರ ವಾರ್ನಿಂಗ್ ಇದೆ.. ಹಾಗಾಗಿ ಕಳೆದ 6 ತಿಂಗಳಿನಿಂದ ಒಂದು ಶಬ್ದ ಮಾತನಾಡಿಲ್ಲ’

|

Updated on: Dec 25, 2020 | 1:44 PM

ಸಚಿವ ರಮೇಶ್ ಜಾರಕಿಹೊಳಿ‌ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಟಾಕ್ ವಾರ್ ಮುಂದುವರೆದಿದೆ. ಲಕ್ಷ್ಮೀ ಹೆಬ್ಬಾಳ್ಕರ್‌ ಹೆಸರು ಬಳಸದೇ ಗೋಕಾಕ್ ಸಾಹುಕಾರ್ ಓಪನ್ ಚಾಲೇಂಜ್ ಹಾಕಿದ್ದಾರೆ. ಮುಂದಿನ ಬಾರಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಗೆದ್ರೆ ಹಾರ ಹಾಕೋಣ ಎಂದಿದ್ದಾರೆ.

ಶಾಸಕಿ ಬಗ್ಗೆ ಮಾತಾಡಬೇಡ ಎಂದು ವರಿಷ್ಠರ ವಾರ್ನಿಂಗ್ ಇದೆ.. ಹಾಗಾಗಿ ಕಳೆದ 6 ತಿಂಗಳಿನಿಂದ ಒಂದು ಶಬ್ದ ಮಾತನಾಡಿಲ್ಲ
ರಮೇಶ್​ ಜಾರಕಿಹೊಳಿ
Follow us on

ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾತಾಡಬೇಡ ಎಂದು ವರಿಷ್ಠರ ವಾರ್ನಿಂಗ್ ಇದೆ. ಹಾಗಾಗಿ ಕಳೆದ 6 ತಿಂಗಳಿನಿಂದ ಒಂದು ಶಬ್ದ ಮಾತನಾಡಿಲ್ಲ. ಮುಂದಿನ ಬಾರಿ ಕ್ಷೇತ್ರದಲ್ಲಿ ಶಾಸಕಿ ಗೆದ್ರೆ ಹಾರ ಹಾಕೋಣ ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಪ್ರಹಾರ ನಡೆಸಿದ್ದಾರೆ.

ಸಚಿವ ರಮೇಶ್ ಜಾರಕಿಹೊಳಿ‌ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಟಾಕ್ ವಾರ್ ಮುಂದುವರೆದಿದೆ. ಲಕ್ಷ್ಮೀ ಹೆಬ್ಬಾಳ್ಕರ್‌ ಹೆಸರು ಬಳಸದೇ ಗೋಕಾಕ್ ಸಾಹುಕಾರ್ ಓಪನ್ ಚಾಲೇಂಜ್ ಹಾಕಿದ್ದಾರೆ. ಮುಂದಿನ ಬಾರಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಗೆದ್ರೆ ಹಾರ ಹಾಕೋಣ ಎಂದಿದ್ದಾರೆ. ಈ ವೇಳೆ ಮಾತನಾಡಿದ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಬಗ್ಗೆ ಮಾತನಾಡಬೇಡ ಎಂದು ವರಿಷ್ಠರ ವಾರ್ನಿಂಗ್ ಇದೆ.

ಚುನಾವಣೆ ಗೆದ್ದ ಬಳಿಕ ಬೇರೆ ರೂಪ ತಾಳಿದ್ರು
ಹಾಗಾಗಿ ಕಳೆದ 6 ತಿಂಗಳಿನಿಂದ ಒಂದು ಶಬ್ದ ಮಾತನಾಡಿಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಪ್ರಯತ್ನ ನಡೆಯುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಯಾವ ಮಟ್ಟಿಗೆ ತಯಾರಿ ಮಾಡಿದ್ದೇವು ಎಲ್ಲರಿಗೂ ಗೊತ್ತಿದೆ. ಆದರೆ ಚುನಾವಣೆ ಗೆದ್ದ ಬಳಿಕ ಬೇರೆ ರೂಪ ತಾಳಿದ್ರು ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ‌ ಕಿಡಿ ಕಾರಿದ್ರು.

ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಯುವರಾಜ ಕದಂ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ರಮೇಶ್ ಜಾರಕಿಹೊಳಿ‌, ನಾನು ಸೇಡು ತೀರಿಸಿಕೊಳ್ಳುತ್ತಿಲ್ಲ. ಕಳೆದ ಬಾರಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜನ ನನ್ನ ನಂಬಿ ಮತ ಹಾಕಿದ್ರು. ಮುಂದಿನ ಬಾರಿ ಅವರಿಗೆ ಮತ ಹಾಕಿದ್ರೆ ಶಾಸಕಿಗೆ ಮಾಲೆ ಹಾಕೋಣ ಎಂದು ಸಚಿವ ರಮೇಶ್ ಜಾರಕಿಹೊಳಿ‌ ಸವಾಲು ಹಾಕಿದ್ರು.

PM Narendra Modi Speech LIVE UPDATES: ‘ರೈತರ ವಿಷಯದಲ್ಲಿ ರಾಜಕೀಯ ಮಾಡಬೇಡಿ’ ಪ್ರಧಾನಿ ನರೇಂದ್ರ ಮೋದಿ