ವಿಧಾನ ಪರಿಷತ್ನಲ್ಲಿ ನಡೆದ ಗಲಾಟೆ ನನ್ನ ಕೈ ಮೀರಿದ ಘಟನೆಗಳಾಗಿವೆ -ಸಭಾಪತಿ ನೋಟಿಸ್ಗೆ ಪರಿಷತ್ ಕಾರ್ಯದರ್ಶಿ ಉತ್ತರ
ಪರಿಷತ್ನಲ್ಲಿ ನಡೆದ ಗಲಾಟೆ ನನ್ನ ಕೈ ಮೀರಿದ ಘಟನೆಗಳಾಗಿವೆ. ಆದ್ದರಿಂದ ಸದನ ಮುಂದುವರಿಸುವ ಬಗ್ಗೆ ಯಾವುದೇ ದಾಖಲೆಗಳನ್ನ ಒದಗಿಸಿಲ್ಲ. ಪೀಠದಲ್ಲಿ ಉಪಸಭಾಪತಿ ಕೂರಿಸಲು ನನ್ನ ಚಿತವಾಣೆ ಇಲ್ಲ ಎಂದು ಸ್ಪಷ್ಟಪಡಿಸ್ತೇನೆ. ನನ್ನ ಮೇಲಿರುವ ಆರೋಪವನ್ನ ನಾನು ನಿರಾಕರಿಸುತ್ತೇನೆ ಎಂದು ಪರಿಷತ್ ಕಾರ್ಯದರ್ಶಿ ಸಭಾಪತಿಗೆ ಉತ್ತರ ನೀಡಿದ್ದಾರೆ.
ಬೆಂಗಳೂರು: ವಿಧಾನಪರಿಷತ್ನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಷತ್ ಕಾರ್ಯದರ್ಶಿಗೆ ಸಭಾಪತಿ ಶೋಕಾಸ್ ನೋಟಿಸ್ ನೀಡಿದ್ದರು. ಇದೀಗ, ಪರಿಷತ್ ಸಭಾಪತಿ ನೀಡದ್ದ ನೋಟಿಸ್ಗೆ ಕಾರ್ಯದರ್ಶಿ ಉತ್ತರ ಕೊಟ್ಟಿದ್ದಾರೆ.
ಪರಿಷತ್ನಲ್ಲಿ ನಡೆದ ಗಲಾಟೆ ನನ್ನ ಕೈ ಮೀರಿದ ಘಟನೆಗಳಾಗಿವೆ. ಆದ್ದರಿಂದ ಸದನ ಮುಂದುವರಿಸುವ ಬಗ್ಗೆ ಯಾವುದೇ ದಾಖಲೆಗಳನ್ನ ಒದಗಿಸಿಲ್ಲ. ಪೀಠದಲ್ಲಿ ಉಪಸಭಾಪತಿ ಕೂರಿಸಲು ನನ್ನ ಚಿತವಾಣೆ ಇಲ್ಲ ಎಂದು ಸ್ಪಷ್ಟಪಡಿಸ್ತೇನೆ. ನನ್ನ ಮೇಲಿರುವ ಆರೋಪವನ್ನ ನಾನು ನಿರಾಕರಿಸುತ್ತೇನೆ ಎಂದು ಪರಿಷತ್ ಕಾರ್ಯದರ್ಶಿ ಸಭಾಪತಿಗೆ ಉತ್ತರ ನೀಡಿದ್ದಾರೆ.
ಪರಿಷತ್ ಕಾರ್ಯವಿಧಾನ, ನಡುವಳಿಕೆ ಬಗ್ಗೆ ಹೇಳಿದೆ. ನನ್ನ ಸ್ಥಾನಕ್ಕೆ ಬಂದು ಕೂರಬೇಕೆನ್ನುವಷ್ಟರಲ್ಲಿ ಸಭಾಪತಿ ಸ್ಥಾನಕ್ಕೆ ಉಪ ಸಭಾಪತಿ ಕೂತರು. ನಿಯಮ ಪ್ರತಿಯನ್ನ ಉಪ ಸಭಾಪತಿಗೆ ನೀಡಲು ಹೊರಟೆ. ಅವರು ಆಪ್ತ ಕಾರ್ಯದರ್ಶಿ ಜೊತೆ ನಿರತರಾಗಿದ್ರು. ನಿಯಮ ಪ್ರತಿಯನ್ನ ಪೀಠದ ಮೇಲಿಟ್ಟು ಬಂದೆ. ಆಗ ನಾರಾಯಣಸ್ವಾಮಿ ಸಭಾಪತಿ ಮೇಲೆ ಅವಿಶ್ವಾಸವಿದೆ ಎಂದರು. ಈ ವೇಳೆ, ಸಭೆಯಲ್ಲಿ ಗಲಾಟೆ ಶುರುವಾಯಿತು. ರವಿಕುಮಾರ್ ಅವರು ಸಭಾಪತಿ ಅವರು ಮಾತನಾಡಲಿ, ಅವರಿಗೆ ಅವಕಾಶ ನೀಡಬೇಕು. ಅವರ ಮೇಲೆ ಅವಿಶ್ವಾಸವಿದೆ ಎಂದು ರವಿಕುಮಾರ ಹೇಳಿದರು ಎಂದು ತಮ್ಮ ಉತ್ತರದಲ್ಲಿ ಪರಿಷತ್ ಕಾರ್ಯದರ್ಶಿ ತಿಳಿಸಿದ್ದಾರೆ.
ಮೇಲ್ಮನೆಯಲ್ಲಿ ‘ಕೆಳ’ ವರ್ತನೆ: ಕಾರಣ ಕೇಳಿ ಪರಿಷತ್ ಕಾರ್ಯದರ್ಶಿಗೆ ಪತ್ರ ಬರೆದ ಸಭಾಪತಿ