ಆಸ್ತಿಗಾಗಿ ಅಪ್ಪನನ್ನು ಮನೆಯಿಂದ ಹೊರಹಾಕಿದ್ದ ಮಗ ಅರೆಸ್ಟ್; ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಿದ ಪೊಲೀಸರು

ವಿಡಿಯೋ ವೈರಲ್​ ಆದ ಹಿನ್ನೆಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಅಮಾನವೀಯ ಘಟನೆಗೆ ಕಾರಣವಾದ ಪುತ್ರ ಕುಮಾರ್​ ಎಂಬಾತನ್ನು ಬಂಧಿಸಿದ್ದಾರೆ. ತಂದೆ ತಿಮ್ಮಯ್ಯ ಅವರನ್ನು ರಾಮನಗರದ ಕೆ.ಪಿ.ದೊಡ್ಡಿ ಗ್ರಾಮದಲ್ಲಿರುವ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.

ಆಸ್ತಿಗಾಗಿ ಅಪ್ಪನನ್ನು ಮನೆಯಿಂದ ಹೊರಹಾಕಿದ್ದ ಮಗ ಅರೆಸ್ಟ್; ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಿದ ಪೊಲೀಸರು
ಆಸ್ತಿಗಾಗಿ ತಂದೆಯನ್ನೇ ಮನೆಯಿಂದ ಹೊರ ಎಸೆದ ಮಗ
Follow us
TV9 Web
| Updated By: guruganesh bhat

Updated on: Jul 08, 2021 | 10:04 PM

ರಾಮನಗರ: ಆಸ್ತಿಗಾಗಿ ಅಪ್ಪನನ್ನು ಮನೆಯಿಂದ ಹೊರಹಾಕಿದ್ದ ಪುತ್ರನನ್ನು ರಾಮನಗರ ಪುರ ಠಾಣೆ ಪೊಲಿಸರು ಬಂಧಿಸಿದ್ದಾರೆ. ಕೆಎಸ್​ಆರ್​ಟಿಸಿ ಬಸ್​ ಚಾಲಕನಾಗಿದ್ದ ಕುಮಾರ್ ಎಂಬ ವ್ಯಕ್ತಿ ತನ್ನ ಹೆಸರಿಗೆ ಮನೆ ಬರೆದುಕೊಡದಿದ್ದಕ್ಕೆ ತನ್ನ ತಂದೆಯನ್ನು ಹೊರಹಾಕಿದ್ದ. ಈ ಘಟನೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಅತ್ಯಂತ ಆಕ್ರೋಶ ಮೂಡಿಸಿತ್ತು. ರಾಮನಗರದ ಸಿಂಗ್ರಾಬೋವಿದೊಡ್ಡಿಯಲ್ಲಿ ನಡೆದಿದ್ದ ಘಟನೆ ವಿಡಿಯೋ ಮಾಡಲಾಗಿತ್ತು. ಅಪ್ಪನನ್ನು ಮನೆಯಿಂದ ಹೊರಹಾಕುವ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋ ವೈರಲ್​ ಆದ ಹಿನ್ನೆಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಅಮಾನವೀಯ ಘಟನೆಗೆ ಕಾರಣವಾದ ಪುತ್ರ ಕುಮಾರ್​ ಎಂಬಾತನ್ನು ಬಂಧಿಸಿದ್ದಾರೆ. ತಂದೆ ತಿಮ್ಮಯ್ಯ ಅವರನ್ನು ರಾಮನಗರದ ಕೆ.ಪಿ.ದೊಡ್ಡಿ ಗ್ರಾಮದಲ್ಲಿರುವ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.

ತಿಮ್ಮಯ್ಯರಿಗೆ ಮೂರು ಜನ ಗಂಡು ಮಕ್ಕಳು. ಇನ್ನಿಬ್ಬರು ಬೇರೆ ಬೇರೆ ಕಡೆ ವಾಸವಾಗಿದ್ದಾರೆ. ಸ್ವಯರ್ಜಿತ ಆಸ್ತಿಯಾದ ತನ್ನ ಮನೆಯಲ್ಲಿ ತಿಮ್ಮಯ್ಯ ವಾಸವಾಗಿದ್ದರು. ಮನೆಯಲ್ಲಿಯೇ ಜೊತೆಗೆ ಇದ್ದ ಕುಮಾರ್, ಮನೆಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಕಳೆದ ಹಲವು ವರ್ಷಗಳಿಂದ ಪೀಡಿಸಿದ್ದಾನೆ. ಇದಕ್ಕೆ ಒಪ್ಪದೇ ಇದ್ದಾಗ ಸಾಕಷ್ಟು ಬಾರಿ ಕಿರುಕುಳ ನೀಡಿದ್ದಾನೆ. ಈ ವಿಚಾರವಾಗಿ ಸಾಕಷ್ಟು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ರು ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರು ಯಾವುದೇ ಕ್ರಮವನ್ನ ತೆಗೆದುಕೊಳ್ಳದೇ ರಾಜಿ ಸಂಧಾನ ಮಾಡಿ ಕಳುಹಿಸಿದ್ದಾರೆ. ಹೀಗಾಗಿ ತಿಮ್ಮಯ್ಯ ಕಣ್ಣೀರು ಇಡುತ್ತಿದ್ದಾರೆ.  ಮಗ ನೀಡುತ್ತಿರುವ ಸಮಸ್ಯೆಯನ್ನು ತಡೆಯಲಾರದೇ ಇನ್ನೊಬ್ಬ ಮಗನ ಮನೆಗೆ ಬಂದು ಆಶ್ರಯ ಪಡೆದಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ರಾಮನಗರ ಎಸ್ ಪಿ, ಈ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದರು.

ಇದನ್ನೂ ಓದಿ: 

Big News: ರೈತರಿಗೆ ಎಪಿಎಂಸಿ ಮೂಲಕ 1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ, 23,123 ಕೋಟಿ ತುರ್ತು ಕೊವಿಡ್​ ಫಂಡ್ ಬಿಡುಗಡೆ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

CoWin: ಕೊವಿಡ್ ಲಸಿಕೆ ಬುಕಿಂಗ್ ಪೋರ್ಟಲ್​ ಕೊವಿನ್​ನಲ್ಲಿ ಏನಿದೆ?

(Ramnagar Police arrest Man who drove Dad out of the house for the property and charged with self incriminating complaint)

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ