ಭಿತ್ತಿಪತ್ರ ಹಿಡಿದು ರಾಗಿ ರಾಗಿ ಎಂದು ಜೋರಾಗಿ ಕೂಗಿದ ಶಾಸಕ ರಂಗನಾಥ್; ಸದನದಲ್ಲಿ ಗಾಂಭೀರ್ಯದಿಂದ ವರ್ತಿಸುವಂತೆ ಸ್ಪೀಕರ್ ಸೂಚನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 17, 2022 | 2:00 PM

ರಾಗಿ ಬೆಳೆಗಾರರ ಸಮಸ್ಯೆ ಕುರಿತಂತೆ ಸದನದಲ್ಲಿ ಪ್ರಸ್ತಾಪಕ್ಕೆ ಅವಕಾಶ ನೀಡುವಂತೆ ಕುಣಿಗಲ್ ಶಾಸಕ ಡಾ.ರಂಗನಾಥ್ ಒತ್ತಾಯ ಮಾಡಿದ್ದು, ಶೂನ್ಯ ವೇಳೆಯಲ್ಲಿ ಅವಕಾಶ ನೀಡುವುದಾಗಿ ಸ್ಪೀಕರ್ ಹೇಳಿದರು.

ಭಿತ್ತಿಪತ್ರ ಹಿಡಿದು ರಾಗಿ ರಾಗಿ ಎಂದು ಜೋರಾಗಿ ಕೂಗಿದ ಶಾಸಕ ರಂಗನಾಥ್; ಸದನದಲ್ಲಿ ಗಾಂಭೀರ್ಯದಿಂದ ವರ್ತಿಸುವಂತೆ ಸ್ಪೀಕರ್ ಸೂಚನೆ
ಪ್ರಾತಿನಿಧಿಕ ಚಿತ್ರ
Follow us on

ವಿಧಾನಸಭೆ: ಹಿಜಾಬ್ ವಿವಾದ (Hijab Controversy) ದ ಸಂದರ್ಭದಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಗದವರಿಗೆ ಅವಕಾಶ ಕೊಡಬೇಕು. ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯುವವರಿಗೆ ಮತ್ತೊಮ್ಮೆ ಅವಕಾಶ ಕೊಡಬೇಕು. ಕೋರ್ಟ್ ತೀರ್ಪಿನ ಬಳಿಕ ಕಾಲೇಜುಗಳಲ್ಲಿ ವಿವಾದ ಎಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ. ರಾಗಿ ಬೆಳೆಗಾರರ ಸಮಸ್ಯೆ ಕುರಿತಂತೆ ಸದನದಲ್ಲಿ ಪ್ರಸ್ತಾಪಕ್ಕೆ ಅವಕಾಶ ನೀಡುವಂತೆ ಕುಣಿಗಲ್ ಶಾಸಕ ಡಾ.ರಂಗನಾಥ್ ಒತ್ತಾಯ ಮಾಡಿದ್ದು, ಶೂನ್ಯ ವೇಳೆಯಲ್ಲಿ ಅವಕಾಶ ನೀಡುವುದಾಗಿ ಸ್ಪೀಕರ್ ಹೇಳಿದರು. ಭಿತ್ತಿಪತ್ರ ಕೈಯಲ್ಲಿ ಹಿಡಿದುಕೊಂಡು ರಾಗಿ ರಾಗಿ ರಾಗಿ ಎಂದು ಜೋರಾಗಿ ಕೂಗಿದ ಶಾಸಕ ರಂಗನಾಥ್. ರಂಗನಾಥ್ ವರ್ತನೆಗೆ ಸ್ಪೀಕರ್ ಸಿಟ್ಟಾದರು. ಸದನದಲ್ಲಿ ಗಾಂಭೀರ್ಯದಿಂದ ನಡೆದುಕೊಳ್ಳುವಂತೆ ಸ್ಪೀಕರ್ ಸೂಚುಸಿದರು.

ಬೆಂಗಳೂರಿನ ಪುಲಿಕೇಶಿನಗರದಲ್ಲಿ ಪರಿಶಿಷ್ಟರೇ ಹೆಚ್ಚಿದ್ದಾರೆ. 1 ಐಟಿಐ ಕಾಲೇಜು ಕೊಡಿ, 2.5 ಎಕರೆ ಜಮೀನು ಸಹ ಇದೆ ಎಂದು ಪರಿಷತ್‌ನಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪ್ರಸ್ತಾಪ ಮಾಡಿದರು. ಐಟಿಐ ಕಾಲೇಜು ನೀಡಲು 2 ಎಕರೆ ಜಮೀನು ಬೇಕು. ಶಾಸಕರು ಹೇಳ್ತಿರೋದು ಸರ್ಕಾರಿ ಶಾಲೆ ಬಳಿಯ ಜಾಗ. ಸರ್ಕಾರಿ‌ ಶಾಲೆ ಜಾಗದಲ್ಲಿ ಐಟಿಐ ಕಾಲೇಜು ಮಾಡಲಾಗಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಉತ್ತರಿಸಿದರು. 5 ಎಕರೆ ಭೂಮಿ ಇದೆ, 2.5 ಎಕರೆ ಶಾಲೆಗೆ ಇಡಲಾಗಿದೆ. ಉಳಿದ 2.5 ಎಕರೆ ಖಾಲಿ ಇದೆ, ಅಲ್ಲಿ ಕಾಲೇಜು ಕಟ್ಟಬಹುದು ಎಂದು ಸರ್ಕಾರಕ್ಕೆ ಶಾಸಕ ಅಖಂಡ ಮತ್ತೆ ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಸಚಿವ ಡಾ. ಅಶ್ವತ್ಥ್ ಹೇಳಿದರು.

ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ವಿಚಾರವಾಗಿ ಶಾಸಕ ಶಿವಾನಂದ ಪಾಟೀಲ್ ಪ್ರಶ್ನಿಸಿದರು. ಡಿಗ್ರಿ ಕಾಲೇಜಿನಲ್ಲಿ ಉಪನ್ಯಾಸಕರು, ಡಿ ದರ್ಜೆ ನೌಕರರಿಲ್ಲ. ಪಾಟೀಲ್ ಮಾತಿಗೆ ಸ್ಪೀಕರ್, ಡೆಪ್ಯುಟಿ ಸ್ಪೀಕರ್ ದನಿಗೂಡಿಸಿದರು. ಉನ್ನತ ಶಿಕ್ಷಣಕ್ಕೆ ಅನುದಾನವೇ ಕೊಟ್ಟಿಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ ಹೇಳಿದರು.​​​ ಅನುದಾನದ ಬಗ್ಗೆ ಮಾತ್ರ ಶಾಸಕರು ಮಾತನಾಡಲ್ಲ. ಅಶ್ವತ್ಥ್​​ ನಾರಾಯಣ ಹೇಳಿಕೆಗೆ ವಿಪಕ್ಷ ಶಾಸಕರು ಗರಂ ಆಗಿದ್ದು, ಮಾತನಾಡಲು ನಿಂತರೆ ನೀವು ಬಿಡಲ್ಲ ಎಂದು ಯೂ.ಟಿ. ಖಾದರ್ ಹೇಳಿದರು. ಬಜೆಟ್ ಮೇಲೆ ಚರ್ಚೆ ಮುಗಿದಿಲ್ಲ ಎಂದು ಸ್ಪೀಕರ್ ಕಾಗೇರಿ ಹೇಳಿದರು.

ಆನೆ ದಾಳಿಯ ಬಗ್ಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕೇಳಿದ ಪ್ರಶ್ನೆಗೆ ಉತ್ತರಿಸಲು 15 ದಿನ ಸಮಯ ಬೇಕು ಎಂದು ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ಹೇಳಿದ್ದು, ಸಚಿವರು ಸಮಯಾವಕಾಶ ಕೇಳಿದ್ದಕ್ಕೆ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನಗೊಂಡರು. ಆನೆ ಹಾವಳಿ ಹೆಚ್ಚಾಗಿದೆ. ಸರ್ಕಾರಕ್ಕೆ ಕಂಟ್ರೋಲ್ ಮಾಡಲು ಆಗಲ್ಲ ಅಂದರೆ ಹೇಳಿ, ನಾವೇ ನೋಡಿಕೊಳ್ಳುತ್ತೇವೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು. ಸಚಿವರು ಉತ್ತರ ನೀಡೋದನ್ನು ತಪ್ಪಿಸಿಕೊಳ್ಳಲು ಈ ರೀತಿಯಾಗಿ ಸಮಯ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ:

ಕಲಾಪ ಆರಂಭಗೊಂಡರು ಬಾರದ ಸಭಾ ನಾಯಕರು; ಸಚಿವರೆಲ್ಲ ರಾಜೀನಾಮೆ ಕೊಟ್ಟರಾ ಎಂದ ಹರಿಪ್ರಸಾದ್