ಕಲಾಪ ಆರಂಭಗೊಂಡರು ಬಾರದ ಸಭಾ ನಾಯಕರು; ಸಚಿವರೆಲ್ಲ ರಾಜೀನಾಮೆ ಕೊಟ್ಟರಾ ಎಂದ ಹರಿಪ್ರಸಾದ್

ಬೆಂಗಳೂರಿನಲ್ಲಿ ಡ್ಯಾನ್ಸ್ ಬಾರ್ ಇಲ್ಲ ಎಂದು ಹೇಳುತ್ತಾರೆ. ನನ್ನ ಜೊತೆಯಲ್ಲಿ ಬನ್ನಿ ಡ್ಯಾನ್ಸ್ ಬಾರ್ ತೋರಿಸುತ್ತೇನೆ ಎಂದು ಸಚಿವರಿಗೆ ಸದಸ್ಯ ಪಿ.ಆರ್.ರಮೇಶ್ ಆಹ್ವಾನ ನೀಡಿದ್ದಾರೆ.  ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಆಹ್ವಾನ ನೀಡಲಾಗಿದೆ.

ಕಲಾಪ ಆರಂಭಗೊಂಡರು ಬಾರದ ಸಭಾ ನಾಯಕರು; ಸಚಿವರೆಲ್ಲ ರಾಜೀನಾಮೆ ಕೊಟ್ಟರಾ ಎಂದ ಹರಿಪ್ರಸಾದ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 17, 2022 | 1:19 PM

ಬೆಂಗಳೂರು: ಪರಿಷತ್ ಕಲಾಪ‌ (Parishad Kalap) ಪ್ರಾರಂಭವಾಗಿದೆ. ಆಡಳಿತ ಪಕ್ಷದ ಸಾಲಿನಲ್ಲಿ ಒಬ್ಬರೇ ಒಬ್ಬರು ಸಚಿವರೂ ಹಾಜರಿಲ್ಲ. ಚೀಫ್‌ವಿಫ್‌ ಇಲ್ಲ, ಸಭಾ ನಾಯಕ ಇಲ್ಲ, ಒಬ್ಬ ಸಚಿವರೂ ಇಲ್ಲ. ಏನು ಸಚಿವರೆಲ್ಲ ರಾಜೀನಾಮೆ ಕೊಟ್ಟಿದ್ದಾರಾ ಎಂದು ಹರಿಪ್ರಸಾದ್ ಕೇಳಿದ್ದಾರೆ. ಕಲಾಪ‌ ಮುಂದೂಡಿ ಎಂದು ಗೋವಿಂದ ರಾಜು ಹೇಳಿದ್ದಾರೆ. ಈ ವೇಳೆ ಸಚಿವ ಕಾರಜೋಳ ತಡವಾಗಿ ಆಗಮಿಸಿದರು. ತಡಿರಿ ಒಂದು ಐದು ನಿಮಿಷ ನೋಡೋಣ ಎಂದು ಸಭಾಪತಿ ಹೊರಟ್ಟಿ ಹೇಳಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಮಾಧುಸ್ವಾಮಿ, ಆರಗ ಜ್ಞಾನೇಂದ್ರ ಕಲಾಪಕ್ಕೆ ಆಗಮಿಸಿದ್ದಾರೆ. ನಂತರ ಪ್ರಶ್ನೋತ್ತರ ಕಲಾಪ ಪ್ರಾರಂಭಿಸಿದ್ದು, ಹೆಸರು ಉಲ್ಲೇಖಿಸದೇ ಐಪಿಎಸ್ ರವಿ ಚನ್ನಣ್ಣನವರ್ ಲಂಚ ಪ್ರಕರಣದ ಕುರಿತು ಎನ್ ರವಿಕುಮಾರ್ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರು ಜಿಲ್ಲೆಯ ಕ್ರಶರ್ ಮಾಲೀಕರಿಂದ ೫೫ ಲಕ್ಷ ಲಂಚ ಪಡೆಯಲಾಗಿದೆ. ಪ್ರಕರಣದಲ್ಲಿ ಕೆಳ ಹಂತದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಐಪಿಎಸ್ ಅಧಿಕಾರಿ ವಿರುದ್ದ ಯಾಕೆ ಕ್ರಮ‌ಕೈಗೊಂಡಿಲ್ಲ ಎಂದರು. ಕ್ರಶರ್ ಮಾಲೀಕರು ಕಂಪ್ಲೆಂಟ್​ನಲ್ಲಿ ಹೆಸರು ಉಲ್ಲೇಖಿಸಿದ್ದು ಸಿಪಿಐ, ಎಎಸ್ಐ ಮಾತ್ರ. ಐಪಿಎಸ್ ಅಧಿಕಾರಿ ವಿರುದ್ದ ದೂರು ದಾಖಲಾಗಿಲ್ಲ. ಮತ್ತು ಪ್ರಾಥಮಿಕ ತನಿಖೆಯಲ್ಲಿ ಐಪಿಎಸ್ ಅಧಿಕಾರಿ ಪಾತ್ರ ಇಲ್ಲ ಅಂತ ಗೊತ್ತಾಗಿದೆ. ಹೀಗಾಗಿ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಉತ್ತರಿಸಿದ್ದಾರೆ. ಐಪಿಎಸ್ ಅಧಿಕಾರಿ ಕೂಡ ತಪ್ಪು ಮಾಡಿದ್ದಾರೆ, ಅದಕ್ಕೆ ದಾಖಲೆ ಪುರಾವೆ ಇದೆ ಎಂದು ರವಿಕುಮಾರ್ ಮರು ಪ್ರಶ್ನೆ ಮಾಡಿದ್ದಾರೆ. ಐಪಿಎಸ್ ಅಧಿಕಾರಿ ವಿರುದ್ದವೂ ಕ್ರಮ ಕೈಗೊಳ್ಳಬೇಕು. ಮಧ್ಯಪ್ರವೇಶ ಮಾಡಿದ ಭೋಜೇಗೌಡ, ಸಭಾಪತಿ ಮೇಲೆ ಅಟ್ರಾಸಿಟಿ ಕೇಸ್ ಆಯ್ತು. ಕಣ್ಣೊರೆಸುವ ತಂತ್ರ ಆಗಬಾರದು ಎಂದರು.

ಬೆಂಗಳೂರಿನಲ್ಲಿ ಡ್ಯಾನ್ಸ್ ಬಾರ್ ಇಲ್ಲ ಎಂದು ಹೇಳುತ್ತಾರೆ. ನನ್ನ ಜೊತೆಯಲ್ಲಿ ಬನ್ನಿ ಡ್ಯಾನ್ಸ್ ಬಾರ್ ತೋರಿಸುತ್ತೇನೆ ಎಂದು ಸಚಿವರಿಗೆ ಸದಸ್ಯ ಪಿ.ಆರ್.ರಮೇಶ್ ಆಹ್ವಾನ ನೀಡಿದ್ದಾರೆ.  ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಆಹ್ವಾನ ನೀಡಲಾಗಿದೆ. ನನ್ನ ಗಮನಕ್ಕೆ ಬಂದ ಕೂಡಲೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವೆ. ಯಾವುದೇ ರಾಜಿ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಸಭಾಪತಿ ವಿರುದ್ಧ ತಪ್ಪು ಎಫ್‌ಐಆರ್ ದಾಖಲಾಗಿದೆ. ಸಂಬಂಧಪಟ್ಟ ತನಿಖಾಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ. ಸಬ್ ಇನ್ಸ್‌ಪೆಕ್ಟರ್‌ ಸಸ್ಪೆಂಡ್ ಮಾಡಿದ್ದು ಸರಿಯಾದ ಕ್ರಮವಲ್ಲ. ಮೇಲಧಿಕಾರಿಗಳ ವಿರುದ್ಧವೇ ಕ್ರಮ ಆಗಬೇಕು ಎಂದು ಪರಿಷತ್ ಸದಸ್ಯ ಭೋಜೇಗೌಡ ಹೇಳಿದ್ದಾರೆ. ಸಭಾಪತಿಗಳದ್ದು ಸಾಂವಿಧಾ‌ನಿಕ ಹುದ್ದೆ. ಈ ವಿಚಾರದಲ್ಲಿ ಮಾಹಿತಿ ಸಿಕ್ಕ ತಕ್ಷಣವೇ ನಾನು ಸಭಾಪತಿ ಹಾಗೂ ಹಿರಿಯ ಅಧಿಕಾರಿಗಳ ಜೊತೆಗೂ ಮಾತನಾಡಿದ್ದೇನೆ. ಪ್ರೊಸಿಜರ್ ಫಾಲೋ ಆಗಿಲ್ಲ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೀಗಾಗಿ ಗೃಹ ಸಚಿವರು ಕ್ರಮ ತೆಗೆದುಕೊಂಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಸಭಾಪತಿಗಳು ಈ ಪ್ರಕರಣದಲ್ಲಿ ಧೃತರಾಷ್ಟ್ರರಾಗಿದ್ದಾರೆ ಎಂದು ಯುಬಿ ವೆಂಕಟೇಶ್ ಹೇಳಿದರು. ಈ ವೇಳೆ ನಾನು ಕ್ರಮ ಕೈಗೊಳ್ಳುತ್ತೇನೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಎಫ್‌ಐಆರ್ ಮಾಡಿರುವ ಸಬ್ ಇನ್ಸ್‌ಪೆಕ್ಟರ್ ಸಸ್ಪೆಂಡ್ ಮಾಡಿದ್ದೇವೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸಸ್ಪೆಂಡ್ ಆಗಿರುವ ಸಬ್ ಇನ್ಸ್‌ಪೆಕ್ಟರ್ ದಲಿತ, ನೀವು ಯಾರನ್ನೋ ಬಲಿಪಶು ಮಾಡಲು ಸಾಧ್ಯವಿಲ್ಲ. ಎಲ್ಲರನ್ನೂ ಸಸ್ಪೆಂಡ್ ಮಾಡಿ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರು.

ಇಂದಿರಾ ನಗರ ಬಿಡಿಎ ಕಾಂಪ್ಲೆಕ್ಸ್ ಶಿಥಿಲವಾಗಿದೆ. ಪೊಲೀಸರು ಹಳೆ ಗಾಡಿ ನಿಲ್ಲಿಸುವ ಜಾಗ ಮಾಡಿಕೊಂಡಿದ್ದಾರೆ. ಇದಕ್ಕೆ ಫೋಟೋ ದಾಖಲೆ ಇದೆ ಎಂದು ಯು.ಬಿ. ವೆಂಕಟೇಶ ಹೇಳಿದ್ದಾರೆ. ಬಿಡಪ್ಪ ಫೋಟೋ ಇಲ್ಲದೇ ನೀನು ಪ್ರಶ್ನೇನೇ ಕೇಳಲ್ಲ ಅದೇ ನಿನ್ನ ಸ್ಪೆಷಾಲಿಟಿ ಎಂದು ಸಿಎಂ ಬೊಮ್ಮಾಯಿ ಇದಕ್ಕೆ ಹಾಸ್ಯ ಮಾಡಿದರು. ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ನಂತರ ವೈದ್ಯಕೀಯ ಚಿಕಿತ್ಸೆಗೆ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಿಸಲು ಸಿಎಂ ಬೊಮ್ಮಾಯಿಗೆ ಭಾರತಿ ಶೆಟ್ಟಿ ಮನವಿ ಮಾಡಿದ್ದಾರೆ. 7 ಗಂಭೀರ ಕಾಯಿಲೆಗೆ ಜ್ಯೋತಿ ಸಂಜೀವಿನಿ ಯೋಜನೆ ಇದೆ. ಎಲ್ಲ ಕಾಯಿಲೆಗೆ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಣೆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ನಿವೃತ್ತ ಸರ್ಕಾರಿ ನೌಕರರಿಗೂ ಜ್ಯೋತಿ ಸಂಜೀವಿನಿ ವಿಸ್ತರಣೆ ಬಗ್ಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಕೋಲಾರದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣ ಎಂದು 5 ವರ್ಷದಿಂದ ತೋರಿಸುತ್ತಿದ್ದಾರೆ. ಅಲ್ಪಸ್ವಲ್ಪ ಕೆಲಸ ಮಾಡಿ ಕೈಬಿಟ್ಟಿದ್ದಾರೆ ಎಂದು ಪರಿಷತ್ ಸದಸ್ಯ ಅನಿಲ್ ಕುಮಾರ್ ಹೇಳಿದರು. ಅನಿಲ್ ಕುಮಾರ್​ ಪ್ರಶ್ನೆಗೆ ಸಚಿವ ಮಾಧುಸ್ವಾಮಿ ಉತ್ತರಿಸಿದ್ದು, ಎಸ್ಟಿಮೇಟ್ ಪ್ರಕಾರ ಕೆಲಸವಾಗದೆ ಬಿಲ್ ಆಗಿದ್ರೆ ಸಹಿಸಲ್ಲ. ಸಂಪೂರ್ಣ ವಿವರ ಕೊಟ್ಟರೆ ಕಠಿಣಕ್ರಮ ಕೈಗೊಳ್ಳುತ್ತೇವೆ. ಆರ್ಥಿಕ ಹಿನ್ನಡೆಯಿಂದ ಕೆಲ ಕಾಮಗಾರಿಗಳಿಗೆ ತಡೆ ಬಿದಿದ್ದೆ. ನಿಂತಿರುವ ಕಾಮಗಾರಿಗಳನ್ನು ಮುಂದುವರಿಸುತ್ತೇವೆ ಎಂದರು.

ಆಂಧ್ರಪ್ರದೇಶ ಇಬ್ಭಾಗ ಆಗಿದೆ. ಹೀಗಾಗಿ ನಮಗೆ ಹೆಚ್ಚಿನ ನೀರು ಬರಬೇಕಿದೆ ಎಂದು ಅಲ್ಲಂ ವೀರಭದ್ರಪ್ಪ ಹೇಳ್ತಿದ್ದಾರೆ. ಹಳೆಯ ನಡಾವಳಿಗಳನ್ನು ತೆಗೆದು ನೋಡುತ್ತೇವೆ. ಕಾನೂನು ತಜ್ಞರ ಜೊತೆಯೂ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಬಹಳ ಯೋಚನೆ ಮಾಡಿ ನವಿಲೆ ಡ್ಯಾಂ ಯೋಜನೆ ಮಾಡಲಾಗಿದೆ. ತುಂಗಭದ್ರಾ ಅಣೆಕಟ್ಟೆಯಲ್ಲಿ ಹೂಳು ತೆಗೆಯಲು ಸಾಧ್ಯವಿಲ್ಲ. ನವಿಲೆ ಯೋಜನೆ ಡಿಪಿಆರ್ ಕೆಲವೇ ತಿಂಗಳಲ್ಲಿ ಸಿದ್ಧವಾಗಲಿದೆ. ಇದೇ ವರ್ಷದಲ್ಲಿ ಮಾತುಕತೆ ಸಫಲ ಆದರೆ ಹಣ ಬೇಕಾಗುತ್ತದೆ. ಹೀಗಾಗಿ ಹಣ ಮೀಸಲಿಟ್ಟಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ:

Hijab: ಹಿಜಾಬ್ ತೀರ್ಪು ವಿರೋಧಿಸಿ ಕರ್ನಾಟಕ ಬಂದ್​ ಕರೆಗೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ