ಶೀಘ್ರದಲ್ಲೇ ಬಹುದೊಡ್ಡ, ಇತಿಹಾಸ ಕಾಣದ ನಿರ್ಧಾರ ಘೋಷಣೆ ಮಾಡುವುದಾಗಿ ಪಂಜಾಬ್ ಸಿಎಂ ಭಗವಂತ್ ಮಾನ್ ಟ್ವೀಟ್
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಭಗವಂತ್ ಮಾನ್, ಪಂಜಾಬ್ ಜನರ ಹಿತದೃಷ್ಟಿಯಿಂದ ಇಂದು ಒಂದು ಬಹುದೊಡ್ಡ, ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿ, ಕುತೂಹಲ ಸೃಷ್ಟಿಸಿದ್ದಾರೆ.
ನಿನ್ನೆಯಷ್ಟೇ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಭಗವಂತ್ ಮಾನ್ ಈಗೊಂದು ಬಹುದೊಡ್ಡ, ಮಹತ್ವದ ಘೋಷಣೆ ಮಾಡಲು ಸಜ್ಜಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾನ್, ಶೀಘ್ರದಲ್ಲೇ ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಲಿದ್ದೇನೆ. ಇಂಥ ಘೋಷಣೆಯನ್ನು ಪಂಜಾಬ್ ಇತಿಹಾಸದಲ್ಲಿಯೇ ಯಾರೂ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 92 ಕ್ಷೇತ್ರಗಳನ್ನು ಗೆದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದೆ. ಭಗವಂತ್ ಮಾನ್ ಅವರು ನಿನ್ನೆ (ಮಾ.16) ಪಂಜಾಬ್ನ ಖಟ್ಕರ್ ಕಲಾನ್ ಗ್ರಾಮದಲ್ಲಿ ಅದ್ದೂರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ನಾನು ಕ್ಷುಲ್ಲಕ ರಾಜಕಾರಣ ಮಾಡುವುದಿಲ್ಲ, ಯಾರಿಗೂ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದರು.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಭಗವಂತ್ ಮಾನ್, ಪಂಜಾಬ್ ಜನರ ಹಿತದೃಷ್ಟಿಯಿಂದ ಇಂದು ಒಂದು ಬಹುದೊಡ್ಡ, ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗುವುದು. ಇಂಥ ನಿರ್ಧಾರವನ್ನು ಪಂಜಾಬ್ ಇತಿಹಾಸದಲ್ಲಿಯೇ ಯಾರೂ ಮಾಡಿರಲಿಲ್ಲ. ಅದೇನೆಂದು ಶೀಘ್ರದಲ್ಲಿಯೇ ಹೇಳುತ್ತೇನೆ ಎಂದು ತಿಳಿಸಿದ್ದಾರೆ. ಭಗವಂತ್ ಮಾನ್ ಒಬ್ಬ ಹಾಸ್ಯನಟನಾಗಿದ್ದವರು ಇಂದು ಮುಖ್ಯಮಂತ್ರಿ ಗದ್ದುಗೆಗೆ ಏರಿದ್ದಾರೆ. ಪಂಜಾಬ್ನಲ್ಲಿ ಆಪ್ ಅಧಿಕಾರಕ್ಕೆ ಏರಿದ್ದೇ ಒಂದು ಇತಿಹಾಸ ಸೃಷ್ಟಿಯಾಗಿರುವಾಗ, ಈಗ ಇನ್ನೊಂದು ಇತಿಹಾಸ ಕಾಣದ ನಿರ್ಧಾರ ಘೋಷಿಸುವುದಾಗಿ ಅವರು ತಿಳಿಸಿದ್ದಾರೆ.
पंजाब की जनता के हित में आज एक बहुत बड़ा फ़ैसला लिया जाएगा। पंजाब के इतिहास में आज तक किसी ने ऐसा फैसला नहीं लिया होगा।
कुछ ही देर में एलान करूँगा…।
— Bhagwant Mann (@BhagwantMann) March 17, 2022
ಇತ್ತೀಚೆಗೆ ನಡೆದ ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಗೋವಾ ವಿಧಾನಸಭೆ ಚುನಾವಣೆಗಳಲ್ಲಿ ಒಂದೂ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಇದ್ದ ಪಂಜಾಬ್ ಕೂಡ ಕೈಬಿಟ್ಟು ಹೋಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಪ್ರಕ್ಷುಬ್ಧತೆ ಉಂಟಾಗಿದ್ದು, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸೇರಿ ಐದೂ ರಾಜ್ಯಗಳ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ್ದಾರೆ. ಪಂಜಾಬ್ನಲ್ಲಿ ಕಾಂಗ್ರೆಸ್ ಸೋಲಲು ನವಜೋತ್ ಸಿಂಗ್ ಸಿಧು ಅವರೇ ಕಾರಣ ಎಂದು ರಾಜಕೀಯ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ. ಆದರೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಸಿಧು, ತಮ್ಮ ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿಯವರಿಗೆ ಸಲ್ಲಿಸಿ, ಆಪ್ ಪಕ್ಷವನ್ನು ಹೊಗಳುತ್ತಿದ್ದಾರೆ.
ಇದನ್ನೂ ಓದಿ: Hijab: ಹಿಜಾಬ್ ತೀರ್ಪು ವಿರೋಧಿಸಿ ಕರ್ನಾಟಕ ಬಂದ್ ಕರೆಗೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ
Published On - 1:16 pm, Thu, 17 March 22