AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಪಕ್ಷದಲ್ಲಿನ ಒಳಜಗಳ ಮತ್ತು ಬಿಜೆಪಿ ಅಧಿಕಾರ ದುರುಪಯೋಗ ಕಾರಣ -ಖರ್ಗೆ

ಇದೇ ನಾಯಕರೇ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ಕರೆತಂದಿದ್ದು. ಇದೀಗ ಅವರೇ ಸೋನಿಯಾರ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಗುಂಡಿಗೆ ಬಲಿಯಾದರು. ಇವರು ಯಾರಾದರೂ ದೇಶಕ್ಕಾಗಿ ಜೀವ ಕೊಟ್ಟಿದ್ದಾರಾ? ಕಾಂಗ್ರೆಸ್​ ಹಿರಿಯ ನಾಯಕರನ್ನುದ್ದೇಶಿಸಿ ಖರ್ಗೆ ಪ್ರಶ್ನೆ

ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಪಕ್ಷದಲ್ಲಿನ ಒಳಜಗಳ ಮತ್ತು ಬಿಜೆಪಿ ಅಧಿಕಾರ ದುರುಪಯೋಗ ಕಾರಣ -ಖರ್ಗೆ
ಮಲ್ಲಿಕಾರ್ಜುನ್​ ಖರ್ಗೆ
TV9 Web
| Updated By: ಸಾಧು ಶ್ರೀನಾಥ್​|

Updated on:Mar 17, 2022 | 9:38 PM

Share

ಕಲಬುರಗಿ: ಇತ್ತೀಚಿಗೆ 5 ರಾಜ್ಯಗಳ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಸೋಲಿನ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (mallikarjun kharge) ಅವರು ಕಾಂಗ್ರೆಸ್‌ (congress) ಸೋಲಿಗೆ ಪಕ್ಷದಲ್ಲಿನ ಒಳಜಗಳವೇ ಕಾರಣ ಎಂದಿದ್ದಾರೆ. ಜೊತೆಗೆ ಆಡಳಿತಾರೂಢ ಬಿಜೆಪಿ (bjp) ಅಧಿಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ಖರ್ಗೆ ತಮ್ಮ ಅಸಮಾಧಾನ ಹೊರಹಾಕಿದರು. ಯಾವ ಪ್ರಧಾನಿಯೂ ತಿಂಗಳುಗಟ್ಟಲೇ ಪ್ರಚಾರ ಮಾಡಿರಲಿಲ್ಲ. ಸಂವಿಧಾನ ಉಳಿಸಲು ಜನರು ಜಾಗೃತರಾಗಬೇಕಿದೆ ಎಂದೂ ಖರ್ಗೆ ಹೇಳಿದರು.

ನಮಗೆ ಜನ ಬೆಂಬಲ ಸಿಕ್ಕಿದ್ದ ಕಡೆಗಳಲ್ಲಿ ಅಲ್ಲಿನ ರಾಜ್ಯ ಸರ್ಕಾರವನ್ನು ಅವರು ಕೆಡವಿದ್ದಾರೆ. ಆ ಹಿಂದೆ ನಮಗೆ ಅಧಿಕಾರ‌ ಸಿಕ್ಕ ರಾಜ್ಯದಲ್ಲಿ ಸರ್ಕಾರ ಅಸ್ಥಿರ ಮಾಡಿದರು. ಬಿಜೆಪಿಯವರು ಪ್ರಜಾಪ್ರಭುತ್ವದ ಕೊಲೆ ಮಾಡಿದ್ದಾರೆ. ನಮ್ಮಲ್ಲಿನ ಕದ್ದ ಸಾಮಾನನ್ನು ಅನೇಕ ಕಡೆ ಇಟ್ಟುಕೊಂಡಿದ್ದಾರೆ. ಯಾವ ಪ್ರಧಾನಿ ಕೂಡ ತಿಂಗಳುಗಟ್ಟಲೆ ಚುನಾವಣಾ ಪ್ರಚಾರ ಮಾಡಿಲ್ಲಾ. ಆದ್ರೆ ಮೋದಿ ಅವರು ತಿಂಗಳುಗಟ್ಟಲೆ ಚುನಾವಣಾ ಪ್ರಚಾರ ಮಾಡ್ತಿದ್ದಾರೆ. ಅಧಿಕಾರ ದುರುಪಯೋಗ ಮಾಡುತ್ತಾ ಹೋದ್ರೆ ಪ್ರಜಾಪ್ರಭುತ್ವ ಉಳಿಯಲ್ಲ. ಧರ್ಮ, ಹಣ, ವ್ಯಕ್ತಿ ಪೂಜೆ ಮಾಡುವವರಿಂದ ನಿಷ್ಪಕ್ಷಪಾತ ಚುನಾವಣೆ ನೋಡಲು ಸಾಧ್ಯವಿಲ್ಲ. ಸಂವಿಧಾನ ಉಳಿಸಲು ಜನರು ಜಾಗೃತರಾಗಬೇಕಿದೆ ಎಂದು ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಒಳಜಗಳವಿಲ್ಲ: ಆದರೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಒಳಜಗಳವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ, ಪಕ್ಷ ಸರಿಯಾದ ರೀತಿಯಲ್ಲಿ ಕೆಲಸ ಮಾಡ್ತಿದೆ. ಮುಂದಿನ ದಿನದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಶಾಭಾವ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ನಾಯಕತ್ವ ಬಗ್ಗೆ ಕೆಲ ನಾಯಕರಿಂದ ಟೀಕೆ ವಿಚಾರ ಪ್ರಸ್ತಾಪಿಸಿದ ಖರ್ಗೆ ಅವರು ಮೊನ್ನೆ ಮೊನ್ನೆಯವರಗೂ ಸೋನಿಯಾ ಗಾಂಧಿ ಅವರನ್ನು ಹೊಗಳುತ್ತಿದ್ದರು. ಗೆದ್ದಾಗ ಇದೇ ನಾಯಕರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಹೊಗಳಿದ್ದರು. ಕೆಲ ಜನರಿಗೆ ಅಧಿಕಾರ ಬೇಕು. ಆದ್ರೆ ಅವರು ಅಷ್ಟು ಶಾಸಕರನ್ನೇ ಗೆಲ್ಲಿಸಿಲ್ಲಾ. ಇದೇ ನಾಯಕರೇ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ಕರೆತಂದಿದ್ದು. ಇದೀಗ ಅವರೇ ಸೋನಿಯಾರ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಗುಂಡಿಗೆ ಬಲಿಯಾದರು. ಇವರು ಯಾರಾದರೂ ದೇಶಕ್ಕಾಗಿ ಜೀವ ಕೊಟ್ಟಿದ್ದಾರಾ? ಪಕ್ಷದ ಮೇಲೆ ಅಭಿಮಾನ ಇರೋರು ಈ ರೀತಿ ಮಾತನಾಡುವುದು ಸರಿಯಲ್ಲ. ಸಿ.ಡಬ್ಲೂ.ಸಿ. ಸಭೆಯಲ್ಲಿ ಇವರಾರು ಮಾತನಾಡಲ್ಲಾ. ಹೊರಗಡೆ ಮಾತ್ರ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ. ಒಳ್ಳೆಯದಾಯ್ತು ಅಂದ್ರೆ ನಂದು, ಕೆಟ್ಟದಾಯ್ತು ಅಂದ್ರೆ ನಿಂದು ಅನ್ನೋರಿದ್ದಾರೆ ಎಂದು ಪಕ್ಷದ ವಿರೋಧಿ ಹಿರಿಯ ನಾಯಕರನ್ನು ಖರ್ಗೆ ತರಾಟೆಗೆ ತೆಗೆದುಕೊಂಡರು.

ಭಗವದ್ಗೀತೆ ಕಡ್ಡಾಯ – ಸಂಸತ್ತಿನಲ್ಲಿ ಮಾತನಾಡುವೆ ಎಂದ ಖರ್ಗೆ ಗುಜರಾತ್ ರಾಜ್ಯದಲ್ಲಿ ಭಗವದ್ಗೀತೆ ಕಡ್ಡಾಯ ಮಾಡಿರುವುದನ್ನು ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ ಅವರು ಆ ಬಗ್ಗೆ ನಾನು ಇಲ್ಲಿ ಮಾತನಾಡಲ್ಲಾ, ಆ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.

ಬಿಜೆಪಿ ಯವರು ಕಾಶ್ಮೀರಿ ಫೈಲ್ಸ್ ಪ್ರಮೋಟ್ ಮಾಡ್ತಿದ್ದಾರೆ: ಕಾಶ್ಮೀರಿ ಫೈಲ್ಸ್ ಸಿನಿಮಾದ ವಿಚಾರ ಪ್ರಸ್ತಾಪಿಸಿದ ಖರ್ಗೆ, ಚಿತ್ರ ಚೆನ್ನಾಗಿದ್ದರೆ ಜನ ನೋಡ್ತಾರೆ, ಆದ್ರೆ ಪ್ರಧಾನಿ ಪ್ರಮೋಟ್ ಮಾಡೋದನ್ನು ನೋಡಿದ್ದೀರಾ? ಬಿಜೆಪಿ ಪಕ್ಷಕ್ಕೆ ಅನಕೂಲವಾಗೋ ರೀತಿಯಲ್ಲಿ ಚಿತ್ರ ತಗೆದಿದ್ದಾರೆ. ಜನ ತಾವಾಗಿಯೇ ನೋಡಿದ್ರೆ ಯಾರ ಅಭ್ಯಂತರವಿಲ್ಲ. ಆದ್ರೆ ಬಿಜೆಪಿ ಯವರು ತಮ್ಮ ಪಕ್ಷದ ಮೀಟಿಂಗ್ ನಲ್ಲಿ ಪ್ರಮೋಟ್ ಮಾಡ್ತಿದ್ದಾರೆ. ಆ ಮೂಲಕ ದೇಶದಲ್ಲಿ ಬೆಂಕಿ ಹಚ್ಚುವುದು, ದೇಶ ವಿಭಜನೆ ಮಾಡೋ ಕೆಲಸ ಮಾಡುತ್ತಿದ್ದಾರೆ. ದೇಶಕ್ಕಾಗಿ ಬಲಿದಾನ ಮಾಡಿದವರ ಚಿತ್ರ ತಗೆದು ತೋರಿಸಲಿ. ಬಿಜೆಪಿಯವರು ಯಾರೂ ಸ್ವಾತಂತ್ಯ್ರಕ್ಕಾಗಿ ಬಲಿದಾನ ಮಾಡಿಲ್ಲಾ. ದೇಶಕ್ಕೆ ಸ್ವತಂತ್ರ ತಂದುಕೊಟ್ಟವರಿಗೆ ಮಸಿ ಬಳೆಯುವ ಕೆಲಸ ಮಾಡುತ್ತಿದ್ದಾರೆ. ಕಾಶ್ಮೀರಿ ಪಂಡಿತರಿಗೆ ಅನ್ಯಾಯವಾದ್ರೆ ಅವರಿಗೆ ನ್ಯಾಯ ಒದಗಿಸಿ. ಇದೀಗ ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಚುನಾವಣೆವರಗೆ ಮತ್ತೆ ಈ ರೀತಿಯ ಚಿತ್ರಗಳು ಬರುತ್ತವೆ. ಮೋದಿ ಅವರು ನನಗೆ ಚಿತ್ರ ತೋರಿಸಿಲ್ಲಾ, ನನಗೆ ನೋಡು ಅಂತಲೂ ಹೇಳಿಲ್ಲ ಎಂದು ಅವರು ಹೇಳಿದರು.

Published On - 7:15 pm, Thu, 17 March 22

ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ
2014ರಿಂದ ಕರ್ನಾಟಕ ರೈಲ್ವೆ ಬಜೆಟ್​ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿ
2014ರಿಂದ ಕರ್ನಾಟಕ ರೈಲ್ವೆ ಬಜೆಟ್​ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿ
ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ವಿಡಿಯೋ ನೋಡಿ
ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ವಿಡಿಯೋ ನೋಡಿ
ಈ ಭಾಗದ ಕನಸು ಸಾಕಾರಗೊಳಿಸಿದ ಮೋದಿ: ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ
ಈ ಭಾಗದ ಕನಸು ಸಾಕಾರಗೊಳಿಸಿದ ಮೋದಿ: ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ
ವಿಲ್ ಜ್ಯಾಕ್ಸ್ ಬಿರುಗಾಳಿ ಬ್ಯಾಟಿಂಗ್: 57 ಎಸೆತಗಳಲ್ಲಿ ಮುಗಿದ ಪಂದ್ಯ
ವಿಲ್ ಜ್ಯಾಕ್ಸ್ ಬಿರುಗಾಳಿ ಬ್ಯಾಟಿಂಗ್: 57 ಎಸೆತಗಳಲ್ಲಿ ಮುಗಿದ ಪಂದ್ಯ
ಕಾಲೇಜಿನಲ್ಲಿ ರ‍್ಯಾಗಿಂಗ್, ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ ಕೊಟ್ರು
ಕಾಲೇಜಿನಲ್ಲಿ ರ‍್ಯಾಗಿಂಗ್, ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ ಕೊಟ್ರು