ಲೋಕ ಅದಾಲತ್​​ನಲ್ಲಿ 3.88 ಲಕ್ಷ ಪ್ರಕರಣಗಳು ಇತ್ಯರ್ಥ; ಸರ್ಕಾರದ ಬೊಕ್ಕಸಕ್ಕೆ 152.19 ಕೋಟಿ ಉಳಿತಾಯ

ದಂಡ ವಸೂಲಿ ಮಾಡಿ ಸರ್ಕಾರಕ್ಕೆ 25.75 ಕೋಟಿ ಸಂದಾಯ ಮಾಡಲಾಗಿದೆ. ಸರ್ಕಾರದ ಬೊಕ್ಕಸಕ್ಕೆ 152.19 ಕೋಟಿ ಉಳಿತಾಯ ಆಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ‌ ಕುಮಾರ್ ತಿಳಿಸಿದ್ದಾರೆ.

ಲೋಕ ಅದಾಲತ್​​ನಲ್ಲಿ 3.88 ಲಕ್ಷ ಪ್ರಕರಣಗಳು ಇತ್ಯರ್ಥ; ಸರ್ಕಾರದ ಬೊಕ್ಕಸಕ್ಕೆ 152.19 ಕೋಟಿ ಉಳಿತಾಯ
ಪ್ರಾತಿನಿಧಿಕ ಚಿತ್ರ
Edited By:

Updated on: Aug 17, 2021 | 6:39 PM

ಬೆಂಗಳೂರು: ಲೋಕ ಅದಾಲತ್‌ನಲ್ಲಿ ದಾಖಲೆಯ 3.88 ಲಕ್ಷ ಪ್ರಕರಣಗಳು ಇತ್ಯರ್ಥ ಆಗಿದೆ. ರಾಜಿ ಸಂಧಾನದ ಮೂಲಕ ಕೇಸ್‌ಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಅರವಿಂದ‌ ಕುಮಾರ್ ಇಂದು (ಆಗಸ್ಟ್ 17) ಹೇಳಿಕೆ ನೀಡಿದ್ಧಾರೆ. ಪ್ರಕರಣಗಳಿಗೆ ಸಂಬಂಧಿಸಿ 907.50 ಕೋಟಿ ರೂಪಾಯಿಯಷ್ಟು ಪರಿಹಾರ ಕೊಡಿಸಲಾಗಿದೆ. 1,166 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ರಾಜಿ ಸಂಧಾನದಿಂದ 74 ದಂಪತಿ ಒಂದಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಆಸ್ತಿ ವಿಭಾಗದ 2,884 ಕೇಸ್‌ಗಳನ್ನು ಇತ್ಯರ್ಥಪಡಿಸಲಾಗಿದೆ. ಮೈಸೂರಲ್ಲಿ ವಿಚ್ಛೇದನವಾಗಿದ್ದ ಜೋಡಿ ಮರುಮದುವೆ ಆಗಿದೆ. ಅಪಘಾತ ಪ್ರಕರಣ ಒಂದರಲ್ಲೇ 72 ಲಕ್ಷ ಪಾವತಿಸಲಾಗಿದೆ. ದಂಡ ವಸೂಲಿ ಮಾಡಿ ಸರ್ಕಾರಕ್ಕೆ 25.75 ಕೋಟಿ ಸಂದಾಯ ಮಾಡಲಾಗಿದೆ. ಸರ್ಕಾರದ ಬೊಕ್ಕಸಕ್ಕೆ 152.19 ಕೋಟಿ ಉಳಿತಾಯ ಆಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ‌ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಯಾವುದೇ ವಿಷಯವನ್ನು ಸರ್ಕಾರ ಬಹಿರಂಗಪಡಿಸಬೇಕಿಲ್ಲ: ಸುಪ್ರೀಂಕೋರ್ಟ್​

ಕೋರ್ಟ್ 33 ಬಾರಿ ವಾರೆಂಟ್ ಜಾರಿ ಮಾಡಿದ್ದರೂ ಪತ್ತೆಯಿಲ್ಲ; ಮೆಕ್ಕೆಜೋಳ ಖರೀದಿಸಿ ಹಣ ನೀಡದೇ ತಲೆಮರೆಸಿಕೊಂಡಿದ್ದವ ಬಂಧನ