ಮಂಡ್ಯದಲ್ಲಿ ರಾತ್ರೋರಾತ್ರಿ ಬಾಲ್ಯ ವಿವಾಹಕ್ಕೆ ಯತ್ನ; ಹಲವರನ್ನು ಬಂಧಿಸಿದ ಪೊಲೀಸರು

| Updated By: sandhya thejappa

Updated on: Jun 17, 2021 | 11:50 AM

ಲಾಕ್​ಡೌನ್​ ನಡುವೆ ಬಾಲ್ಯ ವಿವಾಹಗಳು ಎಗ್ಗಿಲ್ಲದೆ ನಡೆಯುತ್ತಿವೆ. ಅದೇ ರೀತಿ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಕೊರಟೀಕೆರೆ ಬಳಿಯ ಕನ್ನೇಶ್ವರ ದೇವಾಲಯದಲ್ಲಿ ರಾತ್ರೋರಾತ್ರಿ ಅಪ್ತಾಪ್ತ ಬಾಲಕಿಯ ವಿವಾಹಕ್ಕೆ ಯತ್ನಿಸಿದ್ದಾರೆ. ಆದರೆ ಬಾಲಕಿಯ ತಂದೆ ಸಹಾಯದಿಂದ ಪೊಲೀಸರು ಮತ್ತು ಅಧಿಕಾರಿಗಳು ಮದುವೆಯನ್ನು ತಡೆದಿದ್ದಾರೆ.

ಮಂಡ್ಯದಲ್ಲಿ ರಾತ್ರೋರಾತ್ರಿ ಬಾಲ್ಯ ವಿವಾಹಕ್ಕೆ ಯತ್ನ; ಹಲವರನ್ನು ಬಂಧಿಸಿದ ಪೊಲೀಸರು
ಸಾಂದರ್ಭಿಕ ಚಿತ್ರ
Follow us on

ಮಂಡ್ಯ: ಬಾಲ್ಯ ವಿವಾಹ ಎಂಬ ಕೆಟ್ಟ ಪದ್ಧತಿ ರಾಜ್ಯದಲ್ಲಿ ಇನ್ನೂ ಇದೆ. ಜನರಿಗೆ ಬಾಲ್ಯ ವಿವಾಹದ ಕೆಟ್ಟ ಪರಿಣಾಮದ ಬಗ್ಗೆ ಅರಿವು ಮೂಡಿಸುತ್ತಿದ್ದರು, ಯಾವುದೇ ಪ್ರಯೋಜನವಾಗುತ್ತಿಲ್ಲ. ಪ್ರತಿದಿನ ರಾಜ್ಯದಲ್ಲಿ ಒಂದಲ್ಲ ಒಂದು ಕಡೆ ಬಾಲ್ಯ ವಿವಾಹ ನಡೆಯುತ್ತಲೇ ಇದೆ. ಬಾಲ್ಯ ವಿವಾಹದ ಬಗ್ಗೆ ಮಾಹಿತಿ ಸಿಕ್ಕಾಗ ಅಧಿಕಾರಿಗಳು ಸ್ಥಳಕ್ಕೆ ಹೋಗಿ ನಿಲ್ಲಿಸುತ್ತಿದ್ದಾರೆ. ಮದುವೆಯನ್ನು ತಡೆಯುವ ಜೊತೆಗೆ ಅಧಿಕಾರಿಗಳು ಪೋಷಕರಿಗೆ ಬುದ್ಧಿ ಮಾತುಗಳನ್ನು ಹೇಳುತ್ತಿದ್ದಾರೆ. ಅದರೆ ಅಧಿಕಾರಿಗಳ ಗಮನಕ್ಕೆ ಬಾರದೆ ಅದೆಷ್ಟೋ ವಿವಾಹಗಳು ಈಗಾಗಲೇ ನಡೆದು ಹೋಗಿವೆ.

ಲಾಕ್​ಡೌನ್​ ನಡುವೆ ಬಾಲ್ಯ ವಿವಾಹಗಳು ಎಗ್ಗಿಲ್ಲದೆ ನಡೆಯುತ್ತಿವೆ. ಅದೇ ರೀತಿ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಕೊರಟೀಕೆರೆ ಬಳಿಯ ಕನ್ನೇಶ್ವರ ದೇವಾಲಯದಲ್ಲಿ ರಾತ್ರೋರಾತ್ರಿ ಅಪ್ತಾಪ್ತ ಬಾಲಕಿಯ ವಿವಾಹಕ್ಕೆ ಯತ್ನಿಸಿದ್ದಾರೆ. ಆದರೆ ಬಾಲಕಿಯ ತಂದೆ ಸಹಾಯದಿಂದ ಪೊಲೀಸರು ಮತ್ತು ಅಧಿಕಾರಿಗಳು ಮದುವೆಯನ್ನು ತಡೆದಿದ್ದಾರೆ. ಕೋಣನ ಕೊಪ್ಪಲು ಗ್ರಾಮದ 16 ವರ್ಷದ ಅಪ್ರಾಪ್ತೆಗೆ 36 ವರ್ಷ ವಯಸ್ಸಿನವನ ಜೊತೆಗೆ ಮದುವೆಗೆ ಸಿದ್ಧತೆ ನಡೆದಿತ್ತು.

ಕೊಪ್ಪಲು ಗ್ರಾಮದ ಅಪ್ರಾಪ್ತೆಯನ್ನು ಗೋವಿಂದೇಗೌಡನ ಕೊಪ್ಪಲು ಗ್ರಾಮದ ಮಹೇಶ್ ಜೊತೆಗೆ ಮದುವೆಗೆ ಯತ್ನಿಸಿದ್ದರು. ಬೆಳಿಗ್ಗೆ 3 ಗಂಟೆಗೆ ವಿವಾಹ ಮಾಡಲು ಸಕಲ ಸಿದ್ಧತೆಯೂ ನಡೆದಿತ್ತು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಅಲ್ಲಿಂದ ವಧು,ವರನ ಕಡೆಯವರು ಕಾಲ್ಕಿತ್ತಿದ್ದರು. ನಂತರ ಚಿಕ್ಕೋಸಹಳ್ಳಿಯ ದೊಡ್ಡಕೇರಮ್ಮ ದೇವಸ್ಥಾನದಲ್ಲಿ ವಿವಾಹ ಮಾಡಲು ಮುಂದಾಗಿದ್ದರು. ಪೊಲೀಸರು ಬರುವ ವಿಚಾರ ತಿಳಿದು ಸಂಬಂಧಿಕರು ಅಲ್ಲಿಂದಲೂ ಎಸ್ಕೇಪ್ ಆಗಿದ್ದರು.

ಕೆಆರ್ ಪೇಟೆ ಪಟ್ಟಣ ಠಾಣೆ ಪೊಲೀಸರು ಅಜ್ಞಾತ ಸ್ಥಳದಲ್ಲಿದ್ದ ಬಾಲಕಿಯನ್ನ ರಕ್ಷಿಸಿ, ಹಲವರನ್ನು ಬಂಧಿಸಿದ್ದಾರೆ. ಪರಾರಿಯಾಗಿರುವ ಆ ವರನಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ

ಮೈಸೂರಿನಲ್ಲಿ ಎಸ್ಎಸ್ಎಲ್​ಸಿ ವಿದ್ಯಾರ್ಥಿನಿ ಮದುವೆಗೆ ಸಿದ್ಧತೆ; ಸ್ನೇಹಿತೆಯಿಂದ ನಿಂತ ಬಾಲ್ಯ ವಿವಾಹ

ಬಾಲ್ಯ ವಿವಾಹ ತಡೆಗೆ ಸುರಕ್ಷಿಣಿ ವೆಬ್​ಸೈಟ್ ಆರಂಭ; ಮೌಢ್ಯ ಪದ್ಧತಿ ನಿವಾರಣೆಗೆ ಬಾಗಲಕೋಟೆ ಜಿಲ್ಲಾಡಳಿತದಿಂದ ನೂತನ ಪ್ರಯೋಗ

(relatives had tried to marry an Minor girl In Mandya)