AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

71ನೇ ಗಣರಾಜ್ಯೋತ್ಸವ ಸಂಭ್ರಮ: ರಾಜ್​ಪಥ್​ನಲ್ಲಿ ರಾರಾಜಿಸಿದ ಅನುಭವ ಮಂಟಪ ಸ್ತಬ್ಧ ಚಿತ್ರ

ದೆಹಲಿ: ಇಂದು 71 ಗಣರಾಜ್ಯೋತ್ಸವ ಸಂಭ್ರಮ. ರಾಷ್ಟ್ರ ರಾಜಧಾನಿ ದೆಹಲಿಯ ರಾಜ್​ಪಥ್​ನಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯ್ತು. ಭಾರತೀಯ ಸೇನಾ ಶಕ್ತಿ ಪ್ರದರ್ಶನ ನಡೆಯಿತು. ಇದೇ ವೇಳೆ ಬಸವಣ್ಣನ ವಚನ ಕಂಪು ಕೂಡ ರಾಜಪಥ್​ನಲ್ಲಿ ಪಸರಿತು. ರಾರಾಜಿಸಿದ ಬಸವಣ್ಣನವರ ಅನುಭವ ಮಂಟಪ ಸ್ತಬ್ಧ ಚಿತ್ರ! ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು. ಈ ವೇಳೆ ರಾಜ್ಯದಿಂದ ಬಸವಣ್ಣರ ಅನುಭವ ಮಂಟಪದ ಸ್ತಬ್ಧಚಿತ್ರ ಕಣ್ಮನ ಸೂರೆಗೊಂಡಿತು. 25 ಮಂದಿ ವಚನ ಹೇಳೋ ಮೂಲ ಬಸವಣ್ಣನ ಸಿದ್ಧಾಣತದ ಕಂಪನ್ನ […]

71ನೇ ಗಣರಾಜ್ಯೋತ್ಸವ ಸಂಭ್ರಮ: ರಾಜ್​ಪಥ್​ನಲ್ಲಿ ರಾರಾಜಿಸಿದ ಅನುಭವ ಮಂಟಪ ಸ್ತಬ್ಧ ಚಿತ್ರ
ಸಾಧು ಶ್ರೀನಾಥ್​
|

Updated on: Jan 26, 2020 | 6:49 PM

Share

ದೆಹಲಿ: ಇಂದು 71 ಗಣರಾಜ್ಯೋತ್ಸವ ಸಂಭ್ರಮ. ರಾಷ್ಟ್ರ ರಾಜಧಾನಿ ದೆಹಲಿಯ ರಾಜ್​ಪಥ್​ನಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯ್ತು. ಭಾರತೀಯ ಸೇನಾ ಶಕ್ತಿ ಪ್ರದರ್ಶನ ನಡೆಯಿತು. ಇದೇ ವೇಳೆ ಬಸವಣ್ಣನ ವಚನ ಕಂಪು ಕೂಡ ರಾಜಪಥ್​ನಲ್ಲಿ ಪಸರಿತು.

ರಾರಾಜಿಸಿದ ಬಸವಣ್ಣನವರ ಅನುಭವ ಮಂಟಪ ಸ್ತಬ್ಧ ಚಿತ್ರ! ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು. ಈ ವೇಳೆ ರಾಜ್ಯದಿಂದ ಬಸವಣ್ಣರ ಅನುಭವ ಮಂಟಪದ ಸ್ತಬ್ಧಚಿತ್ರ ಕಣ್ಮನ ಸೂರೆಗೊಂಡಿತು. 25 ಮಂದಿ ವಚನ ಹೇಳೋ ಮೂಲ ಬಸವಣ್ಣನ ಸಿದ್ಧಾಣತದ ಕಂಪನ್ನ ರಾಜಧಾನಿಯಲ್ಲಿ ಪಸರಿಸಿದ್ರು. ಇನ್ನುಳಿದಂತೆ, ಜಮ್ಮು-ಕಾಶ್ಮೀರ, ಒಡಿಶಾ ಸೇರಿ ವಿವಿಧ ರಾಜ್ಯ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು.

ಹುತಾತ್ಮ ಯೋಧರಿಗೆ ಮೋದಿ ನಮನ: ಪ್ರತಿ ವರ್ಷ ಗಣರಾಜ್ಯೋತ್ಸವದಂದು ಇಂಡಿಯಾ ಗೇಟ್ ಬಳಿಯಿರೋ ‘ಅಮರ್ ಜವಾನ್ ಜ್ಯೋತಿ’ಗೆ ಪ್ರಧಾನಿ ನಮನ ಸಲ್ಲಿಸೋದು ಸಂಪ್ರದಾಯ. ಆದ್ರೆ, ಇಂದು ಮೋದಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ರು. ಇಂಡಿಯಾ ಗೇಟ್ ಪಕ್ಕದಲ್ಲೇ ನಿರ್ಮಾಣಗೊಂಡಿರೋ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿ, ಡಿಜಿಟಲ್ ಬುಕ್​ನಲ್ಲಿ ಸಹಿ ಹಾಕಿದ್ರು.

ಈ ಬಾರಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಆಗಮಿಸಿದ್ರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜತೆಗೆ ಬ್ರೆಜಿಲ್ ಅಧ್ಯಕ್ಷರು ರಾಜ್​​ಪಥ್​ಗೆ ತೆರಳಿದ್ರು. ಪ್ರಧಾನಿ ಮೋದಿ ಇಬ್ಬರೂ ರಾಷ್ಟ್ರಪತಿಗಳನ್ನ ಸ್ವಾಗತಿಸಿದ್ರು. ನಂತರ ರಾಮನಾಥ್ ಕೋವಿಂದ್ ಧ್ವಜಾರೋಹಣ ನೆರವೇರಿಸಿದ್ರು. ಅಂತಿಮವಾಗಿ ರಾಷ್ಟ್ರಗೀತೆಯೊಂದಿಗೆ ಪರೇಡ್ ಸಂಪನ್ನಗೊಳ್ಳುತ್ತಲೇ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಬ್ರೆಜಿಲ್ ಅಧ್ಯಕ್ಷರನ್ನ ಕಳುಹಿಸಿಕೊಟ್ಟ ಪ್ರಧಾನಿ ಮೋದಿ, ಕೆಲಕಾಲ ರಾಜಪಥದಲ್ಲಿ ನಡೆದಾಡಿದ್ರು.

ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ