ಬೆಂಗಳೂರು: ಕರ್ನಾಟಕದಲ್ಲಿ ಮಳೆ, ಪ್ರವಾಹದಿಂದಾಗಿ ಅಪಾರ ಹಾನಿಯಾಗಿರುವುದರಿಂದ 45,586 ರೈತರಿಗೆ 38.64 ಕೋಟಿ ಬೆಳೆ ಪರಿಹಾರ ನೀಡುತ್ತೇವೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಘೋಷಿಸಿದರು. ನೆರೆಯಿಂದ ಹಾನಿಯಾದ ಪ್ರದೇಶಗಳಿಗೆ ಕೇಂದ್ರ ಸರ್ಕಾರದ ಪರವಾಗಿ ಆಗಮಿಸಿದ ತಂಡ ಭೇಟಿ ನೀಡಲಿದೆ. ರಾಜ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಪರಿಹಾರ ನೀಡುವ ವಿಶ್ವಾಸವಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಪ್ರವಾಹದಿಂದ ಅತ್ಯಂತ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಿಗೆ ಕೇಂದ್ರದ ತಂಡ ಭೇಟಿ ನೀಡಿ ಪರಿಸ್ಥಿತಿಯನ್ನು ಪರಾಮರ್ಶಿಸಲಿದೆ. ಕಳೆದ ಬಾರಿ ತೌಕ್ತೆ ಚಂಡಮಾರುತದಿಂದ ನಷ್ಟ ಉಂಟಾದಾಗಲೂ ಇದೇ ತಂಡ ಆಗಮಿಸಿ ಪರಿಹಾರ ಒದಗಿಸಿತ್ತು. ಈಬಾರಿಯೂ ಸಹ ಕೇಂದ್ರ ಸರ್ಕಾರದಿಂದ ಉತ್ತಮ ಪರಿಹಾರ ದೊರೆಯುವ ಭರವಸೆ ಇದೆ. ಈಬಾರಿ ಪ್ರವಾಹದಿಂದ 5,619 ಕೋಟಿ ನಷ್ಟವಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಂದುವರೆದು ಮಾತನಾಡಿದ ಅವರು, ಹಿಂದಿನ ವರ್ಷಕ್ಕಿಂತ ಈವರ್ಷ ಗಣೇಶೋತ್ಸವ ಆಚರಿಸಲು ನಿಯಮ ಸ್ವಲ್ಪ ಮಟ್ಟಿಗೆ ಸಡಿಲವಾಗುವ ಸಾಧ್ಯತೆಯಿದೆ. ಆದರೆ ಕೊವಿಡ್ ತಡೆಗಟ್ಟುವ ಎಲ್ಲ ನಿಯಮಗಳ ಪಾಲನೆಯೂ ಕಡ್ಡಾಯವಾಗಬೇಕು. ನಾನೂ ಸಹ ಇದೇ ನಿಟ್ಟಿನಲ್ಲಿ ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ:
ಕೊರೊನಾ ಪ್ರಕರಣ ಹೆಚ್ಚಿರುವ ಜಿಲ್ಲಾಡಳಿತಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ
ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ರಥೋತ್ಸವ; ಧಾರ್ಮಿಕ ಆಚರಣೆಗಳಿಗೆ ಮಾತ್ರ ಅವಕಾಶ, ಸ್ಥಳೀಯರು ಭಾಗಿ
(Revenue Minister R Ashok announces Rs 38.64 crore crop relief for 45586 farmers)
Published On - 5:31 pm, Sat, 4 September 21