ಚಿಕ್ಕಬಳ್ಳಾಪುರ: ಕಾಲೇಜಿಗೆ ಹೋಗ್ತೀನಿ ಎಂದು ಮನೆಯಿಂದ ಹೊರಟ ಬಿ.ಕಾಂ. ವಿದ್ಯಾರ್ಥಿನಿಯೋರ್ವಳು ಕಾಲೇಜು ಬದಲು, ಸ್ನೇಹಿತನ ಬೆನ್ನೇರಿ, ಬೈಕ್ಏರಿ ಪಿಕ್ನಿಕ್‌ಗೆ ಹೋಗಿದ್ದಳು. ಸ್ನೇಹಿತನ ಜೊತೆಗೂಡಿ ಪಿಕ್ನಿಕ್ ಮುಗಿಸಿಕೊಂಡು ವಾಪಸ್ಸು ಬರುವಾಗ ಹೆದ್ದಾರಿಯೇ ಹೆಣವಾದ ದುರ್ಘಟನೆ ನಡೆದಿದೆ.
ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ. ವಿದ್ಯಾರ್ಥಿನಿ ಚೈತ್ರಾ ಹೆದ್ದಾರಿಯಲ್ಲಿ ಸಾವಿಗೀಡಾದ ದುರ್ದೈವಿ. ಬೆಂಗಳೂರಿನ ಕೆ.ಆರ್.ಪುರಂ ನಿವಾಸಿಯಾಗಿರುವ ಚೈತ್ರಾ ಕಾಲೇಜಿಗೆ ಹೋಗ್ತಿನೆಂದು ನೀರು, ಊಟ, ಬ್ಯಾಗ್ ಸಮೇತ ಸನ್ನದ್ದಳಾಗಿ ಕಾಲೇಜಿಗೆ ಹೋಗಿದ್ದಾಳೆ. ತನ್ನ ಸ್ನೇಹಿತ ಮಲ್ಲೇಶ್ವರಂನ ಎಂ.ಸಿ.ಎಸ್.ಕಾಲೇಜಿನ ಬಿ.ಕಾಂ., ವಿದ್ಯಾರ್ಥಿ ಲಿಖಿತ್ ಜೊತೆ ಕೆಎ-05 ಎಲ್‌ಡಿ 5029 ಸ್ಕೂಟರ್ ಹತ್ತಿ ಚಿಕ್ಕಬಳ್ಳಾಪುರಕ್ಕೆ ಹೊರಟಿದ್ದರು.
ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಜಲಾಶಯಕ್ಕೆ ತೆರಳಿ ಹರಿಯುವ ನೀರಿನಲ್ಲಿ ಎಂಜಾಯ್ ಮಾಡಿಕೊಂಡು, ಬೆಂಗಳೂರಿನತ್ತ ಮುಖ ಮಾಡಿದ್ದರು. ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಪ್ಲೇಓವರ್ ಬಳಿ ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ಯೂಟರ್ನ್ ಪಡೆದಿದ್ದರು ಅಷ್ಟೇ.. ಹಿಂದಿನಿಂದ ಬಂದ ಕೆಎ-50 ಎ-4776 ಎಸ್.ಕೆ.ಬಿ ಸ್ಟೋನ್ ಕ್ರಷರ್‌ಗೆ ಸೇರಿದ ಟಿಪ್ಪರ್‌ವೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಚೈತ್ರಾ ಟಿಪ್ಪರ್ ಕೆಳಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮತ್ತೊಂದಡೆ ಆಕೆಯ ಸ್ನೇಹಿತ ಲಿಖಿತ್‌ಗೆ ಕಾಲಿಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ.
ಟಿಪ್ಪರ್ ಹಾವಳಿಗೆ ಕಡಿವಾಣ ಇಲ್ಲ
ಚಿಕ್ಕಬಳ್ಳಾಪುರ ತಾಲ್ಲೂಕಿನ ಕಣಿವೇನಾರಾಯಣಪುರ ಕ್ರಷರ್ ಕಲ್ಲುಪುಡಿ ಸುರಕ್ಷಿತ ವಲಯ ಹಾಗೂ ಚಿಕ್ಕಬಳ್ಳಾಪುರ ತಾಲ್ಲೂಕಿನ ಯಲಗಲಹಳ್ಳಿ ಕ್ರಷರ್ ಕಲ್ಲುಪುಡಿ ಸುರಕ್ಷಿತ ವಲಯದಲ್ಲಿ 60 ಕ್ಕೂ ಹೆಚ್ಚು ಕ್ರಷರ್‌ಗಳಿವೆ. ಪ್ರತಿದಿನ 400ಕ್ಕೂ ಹೆಚ್ಚು ಟಿಪ್ಪರ್‌ಗಳು ಸಾವಿರಾರು ಲೋಡ್‌ಗಳಲ್ಲಿ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಸಂಚರಿಸುತ್ತಿವೆ. ಬಹುತೇಕ ಟಿಪ್ಪರ್‌ಗಳು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿಲ್ಲ. ರ‍್ಯಾಶ್ ಡ್ರೈವಿಂಗ್, ಓವರ್‌ಸ್ಪೀಡ್, ಜಲ್ಲಿಕಲ್ಲು, ಎಂ-ಸ್ಯಾAಡ್ ಲೋಡ್‌ಗೆ ಟಾರ್‌ಪೋಲ್ ಹೊದಿಸಲ್ಲ. ರಸ್ತೆಯ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಹೆದ್ದಾರಿಗೆ ಇಳಿಯುವ ಟಿಪ್ಪರ್‌ಗಳು ಶರವೇಗದಲ್ಲಿ ಸಂಚರಿಸುತ್ತಿವೆ. ಹಿಂದೆ-ಮುಂದೆ, ಅಕ್ಕ-ಪಕ್ಕ ಯಾವುದೇ ವಾಹನಗಳು ಸೇರಿದಂತೆ ಪಾದಚಾರಿಗಳನ್ನೂ ಗಮನಿಸುವುದಿಲ್ಲ. ಬೇಕಾಬಿಟ್ಟಿ ಸಂಚರಿಸುತ್ತಿವೆ. ಇದರಿಂದ ಪ್ರತಿದಿನ ಒಂದಿಲ್ಲ ಒಂದು ಕಡೆ ಅಪಘಾತ, ಸಾವು-ನೋವುಗಳು ಸಂಭವಿಸುತ್ತಿವೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿರ್ಲಕ್ಷ
ಬೆಂಗಳೂರು-ಹೈದ್ರಬಾದ್ ರಾಷ್ಟ್ರೀಯ ಯ ಹೆದ್ದಾರಿ-44 ಯಲಗಲಹಳ್ಳಿ ಬೆಂಗಳೂರು ರಸ್ತೆ, ಕಣಿವೇನಾರಾಯಣಪುರ ಬೆಂಗಳೂರು ರಸ್ತೆಯನ್ನು ಕ್ರಷರ್ ಮಾಲೀಕರು ಹಾಗೂ ಟಿಪ್ಪರ್ ಮಾಲೀಕರು ಗುತ್ತಿಗೆ ಪಡೆದವರಂತೆ ಬೇಕಾಬಿಟ್ಟಿಯಾಗಿ ಟಿಪ್ಪರ್‌ಗಳನ್ನು ಓಡಿಸುತ್ತಿದ್ದಾರೆ. ರಸ್ತೆ ಸಾರಿಗೆ ನಿಯಮಗಳು, ರಸ್ತೆ ಸುರಕ್ಷಿತ ನಿಯಮಗಳನ್ನು ಯಾವುದೇ ಟಿಪ್ಪರ್‌ಗಳು ಕಾಪಾಡುತ್ತಿಲ್ಲ. ಪೊಲೀಸ್, ಆರ್‌ಟಿಓ, ಕಂದಾಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರವೂ ಸಹಾ ಕಣ್ಣುಮುಚ್ಚಿ ಕುಳಿತಿದೆ.
ಇದರಿಂದ ಪ್ರತಿದಿನ ಅಪಘಾತ, ಸಾವು-ನೋವುಗಳು ಸಂಭವಿಸುತ್ತಿವೆ. ಟಿಪ್ಪರ್‌ಗಳನ್ನು ನೋಡಿದರೆ ಸಾಕು, ಬೈಕ್, ಕಾರು ಸವಾರರು ಭಯಬೀಳುವಂತಾಗಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳಂತೂ ತನಗೂ, ಸಾರಿಗೆ ನಿಯಮಗಳಿಗೆ ಸಂಬಂಧವಿಲ್ಲ ಆದರೆ ತಿಂಗಳ ತಿಂಗಳ ಬರುವುದು ಮಾತ್ರ ತಮಗೆ ಬರಬೇಕೆಂದು ಇರೋ ಬರೋ ಟಿಪ್ಪರ್‌ಗಳಿಗೆ ಟೋಕನ್ ಸಿಸ್ಟಮ್ ಮಾಡಿದ್ದಾರೆಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.
ಮಕ್ಕಳ ಚಲನವಲನಗಳ ಬಗ್ಗೆ ಪೋಷಕರು ಎಚ್ಚರವಾಗಿರಬೇಕು
ಮಕ್ಕಳು ಚನ್ನಾಗಿ ವಿದ್ಯಾಭ್ಯಾಸ ಮಾಡಿ, ಶ್ರೇಯಸ್ಸು ಪಡೆಯಲೆಂದು ಅದೆಷ್ಟೋ ತಂದೆ-ತಾಯಿಗಳು ಕಷ್ಟುಪಟ್ಟು ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳುಹಿಸುತ್ತಾರೆ. ತಂದೆ-ತಾಯಿಯ ಶ್ರಮ, ಮಮತೆಯನ್ನು ಅರ್ಥಮಾಡಿಕೊಳ್ಳದ ಕೆಲವು ಯುವಕ-ಯುವತಿಯರು ಕಾಲೇಜಿಗೆ ಚಕ್ಕರ್ ಹಾಕಿ, ಪಿಕ್ನಿಕ್, ಲಾಂಗ್ ಡ್ರೈವಿಂಗ್ ಮೋಜು-ಮಸ್ತಿ ಎಂದು ಅಲೆದಾಡಲು ಹೋಗಿ ಹೆಣವಾಗುತ್ತಿರುವ ಉದಾಹರಣೆಗಳು ಇವೆ – ಭೀಮಪ್ಪ ಪಾಟೀಲ್, ಟಿವಿ-9, ಚಿಕ್ಕಬಳ್ಳಾಪುರ
Published On - 4:06 pm, Fri, 16 September 22