ಕಲಬುರ್ಗಿ-ಕೊಲ್ಹಾಪುರ ನೇರ ರೈಲು ಸಂಚಾರ ಆರಂಭ: ಈಡೇರಿತು ಬಹುದಿನಗಳ ಬೇಡಿಕೆ
ಕಲಬುರ್ಗಿಯಿಂದ ಪ್ರತಿದಿನ ಬೆಳಿಗ್ಗೆ 6.40ಕ್ಕೆ ಹೊರಡಲಿರುವ ರೈಲು ಮಧ್ಯಾಹ್ನ 2.15ಕ್ಕೆ ಕೊಲ್ಹಾಪುರ ತಲುಪಲಿದೆ.
ಕಲಬುರ್ಗಿ: ನಗರದಿಂದ ಕೊಲ್ಹಾಪುರಕ್ಕೆ ನೇರ ರೈಲು ಸಂಪರ್ಕ ಬೇಕು ಎನ್ನುವ ಜಿಲ್ಲೆಯ ನಿವಾಸಿಗಳ ಬಹುದಿನಗಳ ಬೇಡಿಕೆ ಇದೀಗ ಈಡೇರಿದೆ. ನಗರದ ರೈಲು ನಿಲ್ದಾಣದಲ್ಲಿ ಸಂಸದ ಉಮೇಶ್ ಜಾಧವ್ ರೈಲಿಗೆ ಹಸಿರು ನಿಶಾನೆ ತೋರಿದರು. ನಗರದಿಂದ ಪ್ರತಿದಿನ ಮುಂಜಾನೆ 6.40ಕ್ಕೆ ಹೊರಡಲಿರುವ ರೈಲು ಮಧ್ಯಾಹ್ನ 2.15ಕ್ಕೆ ಕೊಲ್ಹಾಪುರ ತಲುಪಲಿದೆ. ಕೊಲ್ಹಾಪುರದಿಂದ ಮತ್ತೆ ಮಧ್ಯಾಹ್ನ 3ಕ್ಕೆ ಹೊರಟು ರಾತ್ರಿ 10.45ಕ್ಕೆ ಕಲಬುರಗಿ ತಲುಪಲಿದೆ.
ಪ್ರಸಿದ್ಧ ಯಾತ್ರಾಸ್ಥಳಗಳಾದ ಗಾಣಗಾಪುರದ ದತ್ತಾತ್ರೇಯ, ಪಂಢರಾಪುರದ ವಿಠ್ಠಲ, ಕೊಲ್ಹಾಪುರದ ಮಹಾಲಕ್ಷ್ಮಿ ಮಂದಿರಗಳನ್ನು ಸಂದರ್ಶಿಸುವ ಯಾತ್ರಿಗಳ ಆಸೆಯನ್ನು ಈ ರೈಲು ಸುಲಭವಾಗಿ ಈಡೇರಿಸುತ್ತದೆ. ಧಾರ್ಮಿಕ ನಗರಗಳ ನಡುವೆ ನೇರ ರೈಲು ಸಂಪರ್ಕ ಕಲ್ಪಿಸಲು ಜಿಲ್ಲೆಯ ಜನರು ಹಲವು ದಿನಗಳಿಂದ ಕೋರುತ್ತಿದ್ದರು. ಇಷ್ಟು ದಿನ ಸೊಲ್ಲಾಪುರ-ಮೀರಜ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲನ್ನೇ ಇದೀಗ ಕಲಬುರಗಿ ಹಾಗೂ ಕೊಲ್ಹಾಪುರದವರೆಗೆ ಎರಡೂ ಮಾರ್ಗಗಳಲ್ಲಿ ವಿಸ್ತರಿಸಲಾಗಿದೆ.
ಕಲಬುರಗಿಯಿಂದ ಬೆಳಗ್ಗೆ 6.40ಕ್ಕೆ ಹೊರಡಲಿರುವ ರೈಲು 7.05ಕ್ಕೆ ಗಾಣಗಾಪುರ, 7.46ಕ್ಕೆ ಅಕ್ಕಲಕೋಟ, 8.25ಕ್ಕೆ ಸೋಲಾಪುರ, 9.30ಕ್ಕೆ ಕುರುಡ್ವಾಡಿ, 10.20ಕ್ಕೆ ಪಂಡರಾಪುರ, 12.45 ಮಿರಜ್, 1.10ಕ್ಕೆ ಜೈಸಿಂಗ್‌ಪುರ, 1.25ಕ್ಕೆ ಹತ್ಕಣಂಗಲೆ, 2.15ಕ್ಕೆ ಕೊಲ್ಹಾಪುರ ತಲುಪಲಿದೆ.
ಮಧ್ಯಾಹ್ನ 3 ಗಂಟೆಗೆ ಕೊಲ್ಹಾಪುರದಿಂದ ಹೊರಡುವ ರೈಲು 3.25ಕ್ಕೆ ಹತ್ಕಣಂಗಲೆ, 3.40ಕ್ಕೆ ಜೈಸಿಂಗ್‌ಪುರ, 4.35ಕ್ಕೆ ಮೀರಜ್, 6.45ಕ್ಕೆ ಪಂಡರಪುರ, 7.40ಕ್ಕೆ ಕುರುಡ್ವಾಡಿ, 8.55ಕ್ಕೆ ಸೋಲಾಪುರ, 9.32ಕ್ಕೆ ಅಕ್ಕಲಕೋಟ, 10.10ಕ್ಕೆ ಗಾಣಗಾಪುರ, ರಾತ್ರಿ 10.45ಕ್ಕೆ ಕಲಬುರಗಿಗೆ ಬರಲಿದೆ.
Published On - 3:20 pm, Fri, 16 September 22