ಕೋರ್ಟ್ನಿಂದ ಹಿಂದಿರುಗುವಾಗ ಅಡ್ಡಗಟ್ಟಿ ಮಾಲೂರು ರೌಡಿಯ ಕೊಲೆ
ಕೋಲಾರದ ಮಾಲೂರು ಮುಖ್ಯರಸ್ತೆ ಗಂಗಾಪುರ ಗೇಟ್ ಬಳಿ ಬರ್ಬರ ಹತ್ಯೆ ನಡೆದಿದೆ. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಅರಳೇರಿ ಗ್ರಾಮದ ಗಿರೀಶ್ (30) ಕೊಲೆಯಾದ ವ್ಯಕ್ತಿ.
ಕೋಲಾರ: ಹಳೇ ದ್ವೇಷದ ಹಿನ್ನೆಲೆ ಹಾಡಹಗಲೇ ಯುವಕನನ್ನು ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರದ ಮಾಲೂರು ಮುಖ್ಯರಸ್ತೆ ಗಂಗಾಪುರ ಗೇಟ್ ಬಳಿ ಬರ್ಬರ ಹತ್ಯೆ ನಡೆದಿದೆ. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಅರಳೇರಿ ಗ್ರಾಮದ ಗಿರೀಶ್ (30) ಕೊಲೆಯಾದ ವ್ಯಕ್ತಿ.
ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಆಗಿದ್ದ ಗಿರೀಶ್ ಗುರುವಾರ (ಮಾರ್ಚ್ 18) ಸಹ ಕೋಲಾರದ ನ್ಯಾಯಾಲಯಕ್ಕೆ ಹಾಜರಾಗಿ ಮಾಲೂರಿಗೆ ವಾಪಸ್ಸಾಗುವ ವೇಳೆ ಕಾರ್ನಲ್ಲಿ ಬಂದು ಅಡ್ಡಗಟ್ಟಿದ ಯುವಕರ ತಂಡ ಕಣ್ಣಿಗೆ ಕಾರದ ಪುಡಿ ಎರಚಿ, ಮಚ್ಚು ಹಾಗೂ ಲಾಂಗ್ಗಳಿಂದ ಹಲ್ಲೆಮಾಡಿದೆ. ಮುಖ ಗುರುತೇ ಸಿಗದ ಹಾಗೆ ಹಲ್ಲೆ ಮಾಡಿರುವ ದುಷ್ಕರ್ಮಿಗಳ ತಂಡ ಗಿರೀಶ್ ನೆಲಕ್ಕೆ ಬೀಳುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಮಾಲೂರು ಪೊಲೀಸರು ಅರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇನ್ನು ಹಾಡಹಗಲೇ ನೆತ್ತರು ಹರಿದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಎಸ್ಪಿ ಜಾಹ್ನವಿ ಸೇರಿದಂತೆ ಬರಳಚ್ಚು ತಜ್ನರು, ಶ್ವಾನದಳ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಹಳೇ ದ್ವೇಷದ ಹಿನ್ನೆಲೆ ಈ ಘಟನೆ ನಡೆದಿರಬಹುದೆಂಬ ಅನುಮಾನದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಪತ್ನಿಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಅಪರಾಧಿಗೆ 8 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ
Published On - 11:00 pm, Thu, 18 March 21