ಆಸ್ಟ್ರೇಲಿಯಾಗೆ KIALನಿಂದ ಮದುವೆ ಪತ್ರಿಕೆಯಲ್ಲಿ ಮಾದಕವಸ್ತು ಪಾರ್ಸೆಲ್!
ಬೆಂಗಳೂರು: ನಗರದ ಕೆಐಎಎಲ್ನಲ್ಲಿ ಭಾರಿ ಪ್ರಮಾಣದ ಮಾದಕ ವಸ್ತು ಜಪ್ತಿ ಮಾಡಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೆನ್ನೈ ಮೂಲದ ವ್ಯಕ್ತಿಯ ಬ್ಯಾಗ್ನಿಂದ ಕಸ್ಟಮ್ಸ್ ಅಧಿಕಾರಿಗಳು 5.5 ಕೋಟಿ ರೂಪಾಯಿ ಮೌಲ್ಯದ 5.049 ಕೆಜಿ ಎಫಿಡ್ರಿನ್ ಮಾದಕವಸ್ತು ಜಪ್ತಿ ಮಾಡಿದ್ದಾರೆ. ಚೆನ್ನೈ ಮೂಲದ ವ್ಯಕ್ತಿ ಮಧುರೈನಿಂದ ಆಸ್ಟ್ರೇಲಿಯಾಗೆ ಮದುವೆ ಆಮಂತ್ರಣ ಪತ್ರಿಕೆಗಳಲ್ಲಿ ಮಾದಕವಸ್ತು ಪಾರ್ಸೆಲ್ ಮಾಡಿ ಸಾಗಣೆ ಮಾಡಲು ಯತ್ನಿಸಿದ್ದಾನೆ. ಕೆಐಎಎಲ್‌ನ ಕೊರಿಯರ್ ಟರ್ಮಿನಲ್‌ನಲ್ಲಿ ತಪಾಸಣೆ ವೇಳೆ 43 ಮದುವೆ ಆಮಂತ್ರಣ ಪತ್ರಿಕೆ ಲಭ್ಯವಾಗಿದೆ. ನಂತರ ಅನುಮಾನ […]
ಬೆಂಗಳೂರು: ನಗರದ ಕೆಐಎಎಲ್ನಲ್ಲಿ ಭಾರಿ ಪ್ರಮಾಣದ ಮಾದಕ ವಸ್ತು ಜಪ್ತಿ ಮಾಡಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೆನ್ನೈ ಮೂಲದ ವ್ಯಕ್ತಿಯ ಬ್ಯಾಗ್ನಿಂದ ಕಸ್ಟಮ್ಸ್ ಅಧಿಕಾರಿಗಳು 5.5 ಕೋಟಿ ರೂಪಾಯಿ ಮೌಲ್ಯದ 5.049 ಕೆಜಿ ಎಫಿಡ್ರಿನ್ ಮಾದಕವಸ್ತು ಜಪ್ತಿ ಮಾಡಿದ್ದಾರೆ.
ಚೆನ್ನೈ ಮೂಲದ ವ್ಯಕ್ತಿ ಮಧುರೈನಿಂದ ಆಸ್ಟ್ರೇಲಿಯಾಗೆ ಮದುವೆ ಆಮಂತ್ರಣ ಪತ್ರಿಕೆಗಳಲ್ಲಿ ಮಾದಕವಸ್ತು ಪಾರ್ಸೆಲ್ ಮಾಡಿ ಸಾಗಣೆ ಮಾಡಲು ಯತ್ನಿಸಿದ್ದಾನೆ. ಕೆಐಎಎಲ್‌ನ ಕೊರಿಯರ್ ಟರ್ಮಿನಲ್‌ನಲ್ಲಿ ತಪಾಸಣೆ ವೇಳೆ 43 ಮದುವೆ ಆಮಂತ್ರಣ ಪತ್ರಿಕೆ ಲಭ್ಯವಾಗಿದೆ.
ನಂತರ ಅನುಮಾನ ಬಂದು ಪರಿಶೀಲಿಸಿದಾಗ ಬಿಳಿ ಪೌಡರ್ ಪತ್ತೆಯಾಗಿದೆ. ನಂತರ ಅಧಿಕಾರಿಗಳು ಬಿಳಿ ಪೌಡರ್ ಪರೀಕ್ಷಿಸಿದಾಗ ಅದು ಮಾದಕವಸ್ತು ಎಂಬುದು ದೃಢಪಟ್ಟಿದೆ ಎಂದು ಕಸ್ಟಮ್ಸ್ ಜಂಟಿ ಆಯುಕ್ತ ಎಂ.ಜೆ.ಚೇತನ್ ಮಾಹಿತಿ ನೀಡಿದ್ದಾರೆ.
Published On - 12:05 pm, Sat, 22 February 20