ನವದೆಹಲಿ: ಕೇಂದ್ರ ಬಜೆಟ್ನಲ್ಲಿ (Union Budget 2023) ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7,561 ಕೋಟಿ ನೀಡಲಾಗಿದೆ. ಇಷ್ಟು ಪ್ರಮಾಣದ ಅನುದಾನ ಕರ್ನಾಟಕಕ್ಕೆ (Karnataka Railway Projects) ಎಂದೂ ನೀಡಿಲ್ಲ. 2009ರಿಂದ 2014ರವರೆಗೂ ಪ್ರತಿ ವರ್ಷ 850 ಕೋಟಿ ನೀಡಲಾಗುತ್ತಿತ್ತು. ಆದರೆ, ನಮ್ಮ ಬಿಜೆಪಿ ಸರ್ಕಾರ ಅದನ್ನು 9 ಪಟ್ಟು ಹೆಚ್ಚಿಸಿದೆ ಎಂದು ನವದೆಹಲಿಯಲ್ಲಿ (New Delhi) ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದ್ದಾರೆ.
ಮೋದಿ ಎಲ್ಲ ಇಲಾಖೆಯಲ್ಲೂ ಬದಲಾವಣೆ ಬಯಸುತ್ತಿದ್ದಾರೆ. ಸಾರಿಗೆ ಇಲಾಖೆಯಲ್ಲೂ ಸಾಕಷ್ಟು ಬದಲಾವಣೆ ನಿರೀಕ್ಷಿಸಿದ್ದಾರೆ. ರೈಲು ಅಭಿವೃದ್ಧಿ, ಸ್ಟೇಷನ್ಗಳ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ. ಕರ್ನಾಟಕದಲ್ಲಿ 55 ಸ್ಟೇಷನ್ಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಬೆಂಗಳೂರಿನ ರೈಲ್ವೆ ನಿಲ್ದಾಣದ ಬ್ಲೂಪ್ರಿಂಟ್ ಇಡೀ ದೇಶಕ್ಕೆ ಮಾದರಿ. ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದ ಬ್ಲೂಪ್ರಿಂಟ್ ದೇಶಕ್ಕೆ ಮಾದರಿಯಾಗಿದೆ ಎಂದರು.
ಬೇರೆ ಕಡೆಗೂ ಇದೇ ಮಾದರಿಯನ್ನು ಬಳಸಿಕೊಳ್ಳುವ ಚಿಂತನೆ ಇದೆ. ಭೂಸ್ವಾಧೀನ ಸೇರಿ ಎಲ್ಲ ಹಂತದಲ್ಲೂ ರಾಜ್ಯ ಸರ್ಕಾರದಿಂದ ನೆರವು. ರೈಲುಗಳಲ್ಲಿ ಸ್ಥಳೀಯ ಆಹಾರ ನೀಡಲು ನಿರ್ಧಾರ ಮಾಡಲಾಗಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಸ್ಥಳೀಯ ಆಹಾರಕ್ಕೆ ಆದ್ಯತೆ ನೀಡಲಾಗುತ್ತೆ ಎಂದು ತಿಳಿಸಿದರು.
ರೈಲುಗಳ ಹಳೆಯ ಕೋಚ್ಗಳನ್ನು ಬದಲಾಯಿಸಲಾಗುತ್ತಿದೆ. 100 ಕಿ.ಮೀ ಅಂತರದಲ್ಲಿರುವ 2 ದೊಡ್ಡ ನಗರಗಳಿಗೆ ಸಂಪರ್ಕ. ಪ್ರಧಾನಿ ನರೇಂದ್ರ ಮೋದಿಯವರು ಈ ನಿಟ್ಟಿನಲ್ಲಿ ಚಿಂತಿಸಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಹೈಡ್ರೋಜನ್ ರೈಲು ಪರೀಕ್ಷೆ ನಡೆಸಲಾಗುತ್ತೆ ಎಂದು ಮಾಹಿತಿ ನೀಡಿದರು.