AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Traffic Violation: ಟ್ರಾಫಿಕ್ ರೂಲ್ಸ್ ದಂಡ ಪಾವತಿಗೆ 50% ರಿಯಾಯಿತಿ: ದಂಡ ಪಾವತಿಸುವುದು ಹೇಗೆ? ಇಲ್ಲಿದೆ ವಿವರ

ಬೆಂಗಳೂರು ಸಂಚಾರಿ ಪೊಲೀಸ್​​ ಇಲಾಖೆ ಫೆ. 11ರ ವರೆಗೆ ಶೇ. 50 ರಷ್ಟು ರಿಯಾಯಿತಿ ನೀಡಿ ಸಹಿ ಸುದ್ದಿ ನೀಡಿದ್ದು, ದಂಡ ಪಾವತಿಸುವುದು ಮತ್ತು ವೀಕ್ಷಿಸುವುದು ಕುರಿತು ಇಲ್ಲಿದೆ ಮಾಹಿತಿ

Traffic Violation: ಟ್ರಾಫಿಕ್ ರೂಲ್ಸ್ ದಂಡ ಪಾವತಿಗೆ 50% ರಿಯಾಯಿತಿ: ದಂಡ ಪಾವತಿಸುವುದು ಹೇಗೆ? ಇಲ್ಲಿದೆ ವಿವರ
ಸಾಂಧರ್ಬಿಕ ಚಿತ್ರ (ಎಡಚಿತ್ರ) ಸಂಚಾರಿ ಇಲಾಖೆ ಪತ್ರಿಕಾ ಪ್ರಕಟಣೆ (ಬಲಚಿತ್ರ)
TV9 Web
| Edited By: |

Updated on:Feb 04, 2023 | 10:42 AM

Share

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ (Traffic Fine) ಉಳಿಸಿಕೊಂಡಿರುವ ವಾಹನ ಸವಾರರು, ದಂಡ ಪಾವತಿಸಲು ರಾಜ್ಯ ಸಂಚಾರಿ ಪೊಲೀಸ್​​ ಇಲಾಖೆ ಫೆ. 11ರ ವರೆಗೆ ಶೇ. 50 ರಷ್ಟು ರಿಯಾಯಿತಿ ನೀಡಿ ಸಹಿ ಸುದ್ದಿ ನೀಡಿದೆ. ಇನ್ನು ದಂಡ ಪಾವತಿಸುವುದು ಮತ್ತು ವೀಕ್ಷಿಸುವುದು ಹೇಗೆ ಎಂದು ಹೇಳಿದೆ.

ಬಾಕಿ ಇರುವ ದಂಡದ ವಿವರಗಳನ್ನು ವೀಕ್ಷಿಸುವ ಮತ್ತು ಪಾವತಿಸುವ ವಿಧಾನ

1. ಕರ್ನಾಟಕ ಓನ್​​ ವೆಬ್​ಸೈಟ್​​ನಲ್ಲಿ ವಿವರಗಳನ್ನು ಪಡೆದುಪಾವತಿಸಬಹುದಾಗಿದೆ.

2. ಪೇ ಟಿಎಂ ಆ್ಯಪ್​ ಮುಖಾಂತರವು ಉಲ್ಲಂಘನೆಯ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ.

3. ಹತ್ತಿರ ಸಂಚಾರ ಪೊಲೀಸ್​ ಠಾಣೆಗಳಲ್ಲಿ ನಿಮ್ಮ ವಾಹನದ ನೊಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ಪಡೆಯಬಹುದಾಗಿರುತ್ತದೆ. ದಂಡದ ಮೊತ್ತವನ್ನು ಪಾವತಿಸಿ ರಶೀದಿಯನ್ನು ಪಡೆದುಕೊಳ್ಳಬಹುದಾಗಿದೆ.

4. ಸಂಚಾರ ನಿರ್ವಹಣ ಕೇಂದ್ರದ ಮೊದಲನೆ ಮಹಡಿಯಲ್ಲೂ ಸಹ ಪಾವತಿಸಬಹುದಾಗಿದೆ. ಈ ನಿಯಮ 11-02-2023 ವರಗೆ ಮಾತ್ರ ಅನ್ವಯವಾಗುತ್ತದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸ್​​ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಒಂದೇ ದಿನ ಹರಿದು ಬಂತು ಕೋಟಿ ಕೋಟಿ ಹಣ

ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ 50 ರಷ್ಟು ರಿಯಾಯಿತಿ ನೀಡಿದ ಮೇಲೆ ನಿನ್ನೆ (ಫೆ.3) ಒಂದೇ ದಿನ ಕೋಟಿ ಕೋಟಿ ಹಣ ಹರಿದು ಬಂದಿದೆ. ನಿನ್ನೆ 5 ಕೋಟಿ 61 ಲಕ್ಷದ 55 ಸಾವಿರ ದಂಡದ ಹಣ ಸಂಗ್ರಹವಾಗಿದೆ. ಒಟ್ಟು 2 ಲಕ್ಷ 1 ಸಾವಿರದ 828 ಪ್ರಕರಣಗಳ ದಂಡ ಪಾವತಿಯಾಗಿದೆ. ಪೊಲೀಸ್ ಠಾಣೆಗಳಲ್ಲಿ 89,699 ಪ್ರಕರಣಗಳಿಂದ 2,17,24,990 ಕೋಟಿ ರೂ, ಪೇ ಟಿಎಂ ಮೂಲಕ 1,04,273 ಪ್ರಕರಣದಿಂದ 3, 23,68,900 ಕೋಟಿ, ಸಂಚಾರ ನಿರ್ವಹಣಾ ಕೆಂದ್ರದಲ್ಲಿ‌ 540 ಪ್ರಕರಣ ದಂಡ ಪಾವತಿಯಾಗಿದ್ದು 89,650 ರೂ ಮತ್ತು ಬೆಂಗಳೂರು ಒನ್​ನಲ್ಲಿ 7,316 ಪ್ರಕರಣದಿಂದ 16,21,600 ರೂ‌ ದಂಡ ಸಂಗ್ರಹವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಓಡಿಸ್ತೀರಾ? ಕ್ಯಾಮೆರಾ ಇರುವ ಪ್ರತಿ ಸಿಗ್ನಲ್​​ನಲ್ಲೂ ದಂಡ ಕಟ್ಟಲು ಸಿದ್ಧರಾಗಿ !

ಯಾವೆಲ್ಲ ನಿಯಮಗಳ ಉಲ್ಲಂಘನೆಗಳಿಗೆ ವಿನಾಯಿತಿ

ಟ್ರಾಫಿಕ್ ಪೊಲೀಸರು ಸುಮಾರು 44 ತರಹದ ನಿಯಮಗಳ ಉಲ್ಲಂಘಟನೆಯ ಪಟ್ಟಿ ಬಿಡುಗಡೆ ಮಾಡಿದೆ. ಪುಟ್ ಪಾತ್ ಪಾರ್ಕಿಂಗ್​​ಗೆ 1000 ದಂಡ ಇದ್ದು, 500 ರೂ. ರಿಯಾಯಿತಿ ನೀಡಲಾಗಿದೆ. ಫೆಕ್ಟೀವ್ ನಂಬರ್ ಪ್ಲೇಟ್​​ಗೆ ಮೊದಲ ಪ್ರಕರಣಕ್ಕೆ 500 ರೂ. ದಂಡವಿದ್ದು, 250 ರಿಯಾಯಿತಿ. ಹೆಚ್ಚುವರಿ ಪ್ರಕರಣಗೆ 1,500 ರೂ. ದಂಡ ಇದ್ದು, 750 ರಿಯಾಯಿತಿ, ಸಿಗ್ನಲ್​ ಜಂಪ್​ಗೆ 500 ರೂ ದಂಡ, 250 ರೂ ರಿಯಾಯಿತಿ. ಅತಿ ವೇಗಕ್ಕೆ 1000 ರೂ ದಂಡವಿದ್ದು, 500 ರೂ. ರಿಯಾಯಿತಿ ನೀಡಲಾಗಿದೆ.

ನಿಯಮ ಉಲ್ಲಂಘಿಸಿದರೆ ಪ್ರತಿ ಸಿಗ್ನಲ್​ನಲ್ಲೂ ದಂಡ ಕಟ್ಟಬೇಕಾದೀತು ಹುಷಾರ್​..!

ನಗರದಲ್ಲಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಹೋಗುವವರ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲೂ ದ್ವಿಚಕ್ರ ವಾಹನ ಸವಾರರು, ಆಕಡೆ ಈಕಡೆ ನೋಡಿ ಪೊಲೀಸರು ಇಲ್ಲಾ ಎಂದು ಖಚಿತವಾಗುತ್ತಿದ್ದಂತೆ ಹೆಲ್ಮೆಟ್ ಇಲ್ಲದೆ ನೇರವಾಗಿ ಹೋಗುತ್ತಾರೆ. ಆದರೆ ಇನ್ನು ಮುಂದೆ ನೀವು ಹೀಗೆ ಹೋದರೆ ಒಂದೇ ದಿನ ಅನೇಕ ಬಾರಿ ದಂಡ ಕಟ್ಟಬೇಕಾಗಬಹುದು. ನೀವು ಬೆಂಗಳೂರಿನಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಓಡಿಸುತ್ತಿದ್ದೀರಿ ಎಂದಾದರೆ ಕ್ಯಾಮೆರಾ ಇರುವ ಪ್ರತಿ ಸಿಗ್ನಲ್​ನಲ್ಲೂ ದಂಡ ಕಟ್ಟಲು ಸಿದ್ಧರಾಗಿ.

ಇದನ್ನೂ ಓದಿ:  ಟ್ರಾಫಿಕ್ ರೂಲ್ಸ್ ಉಲ್ಲಂಘನೆ ದಂಡ ರಿಯಾಯಿತಿ: 50% ಆಫರ್ ಸಿಕ್ಕಿದ್ದೇ ತಡ ದಂಡ ಪಾವತಿಗೆ ಮುಗಿಬಿದ್ದ ವಾಹನ ಸವಾರರು

ಇದನ್ನು ಸರಳವಾಗಿ ಹೇಳುವುದಾದರೆ, ನೀವು ಹೆಲ್ಮೆಟ್ ಇಲ್ಲದೆ ಕ್ಯಾಮೆರಾ ಇರುವ ಮೂರು ಸಿಗ್ನಲ್​ಗಳನ್ನು ಕ್ರಾಸ್ ಮಾಡಿದರೆ ಮೂರು ಬಾರಿ ಪ್ರತ್ಯೇಕ ದಂಡ ಕಟ್ಟಬೇಕು. ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಒಟ್ಟು 50 ಜಂಕ್ಷನ್​ಗಳಲ್ಲಿ 280 ಎಎನ್​ಪಿಆರ್​ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನೆನಪಿರಲಿ, ಹೆಲ್ಮೆಟ್ ರಹಿತ ಚಾಲನೆಯ ದಂಡದ ಮೊತ್ತ 500 ರೂಪಾಯಿ. ಒಂದು ದಿನದಲ್ಲಿ ನೀವು ಮೂರು ಬಾರಿ ಸಿಗ್ನಲ್ ಕ್ರಾಸ್ ಆದರೆ ಒಂದೂವರೆ ಸಾವಿರ ರೂಪಾಯಿ ದಂಡ ಪಾವತಿಸಬೇಕು.

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ

Published On - 8:13 am, Sat, 4 February 23

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ