ಟ್ರಾಫಿಕ್ ರೂಲ್ಸ್ ಉಲ್ಲಂಘನೆ ದಂಡ ರಿಯಾಯಿತಿ: 50% ಆಫರ್ ಸಿಕ್ಕಿದ್ದೇ ತಡ ದಂಡ ಪಾವತಿಗೆ ಮುಗಿಬಿದ್ದ ವಾಹನ ಸವಾರರು

ದಂಡ ಪಾವತಿಗೆ ಶೇ. 50 ರಿಯಾಯಿತಿ ಹಿನ್ನೆಲೆ ಬೆಂಗಳೂರಿನ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಸವಾರರು ಆಗಮಿಸಿ ದಂಡ ಪಾವತಿಸುತ್ತಿದ್ದಾರೆ. ಇದುವರೆಗೂ ಪೇಟಿಎಂ ಮೂಲಕ 5 ಲಕ್ಷ ರೂ. ದಂಡ ಪಾವತಿ ಮಾಡಲಾಗಿದೆ. 

ಟ್ರಾಫಿಕ್ ರೂಲ್ಸ್ ಉಲ್ಲಂಘನೆ ದಂಡ ರಿಯಾಯಿತಿ: 50% ಆಫರ್ ಸಿಕ್ಕಿದ್ದೇ ತಡ ದಂಡ ಪಾವತಿಗೆ ಮುಗಿಬಿದ್ದ ವಾಹನ ಸವಾರರು
ಪ್ರಾತಿನಿಧಿಕ ಚಿತ್ರImage Credit source: thehindu.com
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Feb 03, 2023 | 3:19 PM

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ (Traffic Fine) ಉಳಿಸಿಕೊಂಡಿರುವ ವಾಹನ ಸವಾರರಿಗೆ ಖುಷಿ ಸುದ್ದಿ ಸಿಕ್ಕಿದೆ. ರಾಜ್ಯ ಪೊಲೀಸ್​ ಇಲಾಖೆಯ ಸಂಚಾರ ಪೊಲೀಸರು ವಿಧಿಸಿರುವ ದಂಡ ಪಾವತಿಗೆ ಶೇ. 50 ರಿಯಾಯಿತಿ ನೀಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಹೀಗೆ ರಿಯಾಯಿತಿ ನೀಡಿದ್ದೆ ತಡ ದಂಡ ಪಾವತಿ ಮಾಡಲು ಸಿಟಿ ಮಂದಿ ಮುಂದಾಗಿದ್ದಾರೆ. ಬೆಂಗಳೂರಿನ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಸವಾರರು ಆಗಮಿಸಿ ದಂಡ ಪಾವತಿಸುತ್ತಿದ್ದಾರೆ. ಇದುವರೆಗೂ ಪೇಟಿಎಂ ಮೂಲಕ 5 ಲಕ್ಷ ರೂ. ದಂಡ ಪಾವತಿ ಮಾಡಲಾಗಿದೆ.

3 ಗಂಟೆಗಳಲ್ಲಿ 53 ಲಕ್ಷ ದಂಡ ಪಾವತಿ

ವಾಹನ ಸವಾರರಿಂದ ನೀರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬರುತ್ತಿದ್ದು, ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಕೇವಲ 3 ಗಂಟೆಗಳಲ್ಲಿ 17 ಸಾವಿರ ಕೇಸ್​ಗಳ ದಂಡ ಪಾವತಿಯಾಗಿದ್ದು, ಕೇವಲ ಪೇಟಿಎಂ ಮೂಲಕವಷ್ಟೇ 53 ಲಕ್ಷ ದಂಡ ಪಾವತಿ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರಿಂದ ಮಾಹಿತಿ ನೀಡಿದ್ದಾರೆ. ಫೆಬ್ರವರಿ 11 ರವರೆಗೆ ರಿಯಾಯಿತಿಗೊಳಿಸಿರುವ ಸರ್ಕಾರ, 44 ಬಗೆಯ ಎಲ್ಲಾ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರುವ ಪೈನ್​ಗಳಿಗೂ ರಿಯಾಯಿತಿ ನೀಡಿದೆ. ಬಾಕಿ ಇರುವ ದಂಡದ ವಿವರಗಳನ್ನ ವೀಕ್ಷಿಸುವ ಮತ್ತು ಪಾವತಿ ವಿಧಾನವನ್ನು ಕರ್ನಾಟಕ ಒನ್ ವೆಬ್ ಸೈಟ್​ನಲ್ಲಿ ವಿವರಗಳನ್ನ ಪಡೆದು ಪಾವತಿಸಬಹುದು. ಪೇಟಿಎಂ ಆ್ಯಪ್​ ಮುಖಾಂತರ ಉಲ್ಲಂಘನೆಗಳ ವಿವರ ಪಡೆದು ಹತ್ತಿರದ ಟ್ರಾಫಿಕ್ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಸಬಹುದು. ಸಾರ್ವಜನಿಕರು ರಿಯಾಯಿತಿ ಅವಕಾಶ ಸದುಪಯೋಗಪಡಿಸಿಕೊಳ್ಳುವಂತೆ ಸಂಚಾರ ಪೊಲೀಸರು ಮನವಿ ಮಾಡಿದರು.

ನಿಯಮ ಉಲ್ಲಂಘಿಸಿದ ವಾಹನ ಮಾಲೀಕರಿಗೆ ನೋಟಿಸ್: ಪೊಲೀಸ್ ಆಯುಕ್ತ ಸಲೀಂ 

ಸಂಚಾರ ವಿಭಾಗ ವಿಶೇಷ ಪೊಲೀಸ್ ಆಯುಕ್ತ ಸಲೀಂ ಪ್ರತಿಕ್ರಿಯಿಸಿದ್ದು, ಶೇಕಡಾ 90ರಷ್ಟು ಆನ್​ಲೈನ್ ಮೂಲಕವೇ ದಂಡ ಹಾಕುತ್ತಿದ್ದೇವೆ. ನಿಯಮ ಉಲ್ಲಂಘಿಸಿದ ವಾಹನ ಮಾಲೀಕರಿಗೆ ನೋಟಿಸ್ ಹೋಗ್ತಿದೆ. ಆದರೆ ಬಹಳಷ್ಟು ವಾಹನ ಸವಾರರು ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಅದನ್ನು ವಿಲೇವಾರಿ ಮಾಡುವುದು ನಮಗೆ ಸವಾಲಾಗಿತ್ತು. ಈ ಬಗ್ಗೆ ಸರ್ಕಾರಕ್ಕೆ ಸಾರಿಗೆ ಇಲಾಖೆಯು ಮನವಿ ಮಾಡಿಕೊಂಡಿತ್ತು. ದಂಡ ಪಾವತಿಗೆ ರಿಯಾಯ್ತಿ ನೀಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ನಿಯಮ ಉಲ್ಲಂಘಿಸಿದವರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಟ್ರಾಫಿಕ್ ಠಾಣೆ ಹಾಗೂ ಆನ್​​ಲೈನ್​ ಮೂಲಕ ದಂಡ ಪಾವತಿಸಬಹುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಓಡಿಸ್ತೀರಾ? ಕ್ಯಾಮೆರಾ ಇರುವ ಪ್ರತಿ ಸಿಗ್ನಲ್​​ನಲ್ಲೂ ದಂಡ ಕಟ್ಟಲು ಸಿದ್ಧರಾಗಿ !

ನಿಯಮ ಉಲ್ಲಂಘಿಸಿದರೆ ಪ್ರತಿ ಸಿಗ್ನಲ್​ನಲ್ಲೂ ದಂಡ ಕಟ್ಟಬೇಕಾದೀತು ಹುಷಾರ್​..! 

ನಗರದಲ್ಲಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಹೋಗುವವರ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲೂ ದ್ವಿಚಕ್ರ ವಾಹನ ಸವಾರರು, ಆಕಡೆ ಈಕಡೆ ನೋಡಿ ಪೊಲೀಸರು ಇಲ್ಲಾ ಎಂದು ಖಚಿತವಾಗುತ್ತಿದ್ದಂತೆ ಹೆಲ್ಮೆಟ್ ಇಲ್ಲದೆ ನೇರವಾಗಿ ಹೋಗುತ್ತಾರೆ. ಆದರೆ ಇನ್ನು ಮುಂದೆ ನೀವು ಹೀಗೆ ಹೋದರೆ ಒಂದೇ ದಿನ ಅನೇಕ ಬಾರಿ ದಂಡ ಕಟ್ಟಬೇಕಾಗಬಹುದು. ನೀವು ಬೆಂಗಳೂರಿನಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಓಡಿಸುತ್ತಿದ್ದೀರಿ ಎಂದಾದರೆ ಕ್ಯಾಮೆರಾ ಇರುವ ಪ್ರತಿ ಸಿಗ್ನಲ್​ನಲ್ಲೂ ದಂಡ ಕಟ್ಟಲು ಸಿದ್ಧರಾಗಿ.

ಇದನ್ನೂ ಓದಿ: Discount Offer: ಟ್ರಾಫಿಕ್ ಫೈನ್ ಕಟ್ಟುವವರಿಗೆ ಶೇಕಡಾ 50ರಷ್ಟು ರಿಯಾಯಿತಿ, ಅಂತಿಮ ದಿನಾಂಕ ಇಲ್ಲಿದೆ

ಇದನ್ನು ಸರಳವಾಗಿ ಹೇಳುವುದಾದರೆ, ನೀವು ಹೆಲ್ಮೆಟ್ ಇಲ್ಲದೆ ಕ್ಯಾಮೆರಾ ಇರುವ ಮೂರು ಸಿಗ್ನಲ್​ಗಳನ್ನು ಕ್ರಾಸ್ ಮಾಡಿದರೆ ಮೂರು ಬಾರಿ ಪ್ರತ್ಯೇಕ ದಂಡ ಕಟ್ಟಬೇಕು. ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಒಟ್ಟು 50 ಜಂಕ್ಷನ್​ಗಳಲ್ಲಿ 280 ಎಎನ್​ಪಿಆರ್​ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನೆನಪಿರಲಿ, ಹೆಲ್ಮೆಟ್ ರಹಿತ ಚಾಲನೆಯ ದಂಡದ ಮೊತ್ತ 500 ರೂಪಾಯಿ. ಒಂದು ದಿನದಲ್ಲಿ ನೀವು ಮೂರು ಬಾರಿ ಸಿಗ್ನಲ್ ಕ್ರಾಸ್ ಆದರೆ ಒಂದೂವರೆ ಸಾವಿರ ರೂಪಾಯಿ ದಂಡ ಪಾವತಿಸಬೇಕು.

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:09 pm, Fri, 3 February 23