ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ(Belagavi Winter Session) ಇಂದು(ಡಿಸೆಂಬರ್ 26) ವಿಧಾನಸಭೆಯಲ್ಲಿ ಪೂರಕ ಅಂದಾಜು ಮಂಡನೆ ಮಾಡಲಾಯಿತು. ವಿವಿಧ ಅಭಿವೃದ್ಧಿ ಕಾಮಗಾರಿಗಳು, ಮೈಸೂರು ದಸರಾ, ವಿವಿಧ ಮಠಗಳಿಗೆ ಅನುದಾನ, ಸಿಎಂ ಹಾಗೂ ಸಚಿವರ ಪ್ರವಾಸ, ಪಶುಗಳ ಚರ್ಮಗಂಟು ರೋಗ ನಿಯಂತ್ರಣ ಸೇರಿ ಒಟ್ಟು 8,001.13 ಕೋಟಿ ರೂಪಾಯಿಗಳ ಪೂರಕ ಅಂದಾಜು ಮಂಡನೆ ಮಾಡಲಾಗಿದೆ. ಹಾಗಾದ್ರೆ, ಯಾವುದಕ್ಕೆ ಎಷ್ಟು ಹಣ ಎನ್ನುವ ಮಾಹಿತಿ ಈ ಕೆಳಗಿಂತಿದೆ.
8001.13 ಕೋಟಿ ರೂ. ಗಳ ಪೂರಕ ಅಂದಾಜು ಮಂಡನೆಯಲ್ಲಿ ಚರ್ಮಗಂಟು ರೋಗದಿಂದ ಸಾವನ್ನಪ್ಪಿದ ಹಸುಗಳಿಗೆ ಪರಿಹಾರ ನೀಡಲು 30 ಕೋಟಿ ರೂ ನಿಗದಿ ಮಾಡಲಾಗಿದೆ. ಹಾಗೇ ವಿಧಾನಸಭಾ ಚುನಾವಣೆ ಪೂರ್ವ ಸಿದ್ಧತೆಗಾಗಿ 300 ಕೋಟಿ ರೂ. ಮೀಸಲು ಇಡಲಾಗಿದೆ. ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರ ಹೆಲಿಕಾಪ್ಟರ್ ಬಿಲ್ ಪಾವತಿಗಾಗಿ 6 ಕೋಟಿ ರೂ. ಒದಗಿಸಲಾಗಿದೆ.
ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಪೀಠಾಧಿಪತಿಯಾಗಿರುವ ವಿಶ್ವ ಗಾಣಿಗರ ಸಮುದಾಯ ಚಾರಿಟೆಬಲ್ ಟ್ರಸ್ಟ್ ಗೆ 3.5 ಕೋಟಿ ರೂ ಅನುದಾನ ನೀಡಲಾಗಿದೆ.
Published On - 7:06 pm, Mon, 26 December 22