ಸಂಘಪರಿವಾರ, ಎಸ್​ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು: ರಾಮಲಿಂಗಾರೆಡ್ಡಿ

|

Updated on: Aug 13, 2020 | 2:30 PM

ಕೆ ಜಿ ಹಳ್ಳಿ ಮತ್ತು ಡಿ ಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಂಗಳವಾರದಂದು ನಡೆದ ದೊಂಬಿ, ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಕೊಳ್ಳಿಯಿಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಗೃಹ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿಯವರು, ಎಸ್​ಡಿಪಿಐ ಸಂಘಟನೆಯನ್ನು ನಿಷೇಧಿಸಲು ಸರಕಾರಕ್ಕೆ ಅಭ್ಯಂತರವಾದರೂ ಏನಿದೆ ಎಂದು ಪ್ರಶ್ನಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ರೆಡ್ಡಿ, “ಎಸ್​ಡಿಪಿಐ ನಿಷೇಧಿಸಿದರೆ ಹಾನಿಯಾಗೋದು ಬಿಜೆಪಿಗೆ ಹೊರತು ಕಾಂಗ್ರೆಸ್​ಗೆ ಯಾವುದೇ ನಷ್ಟವಿಲ್ಲ, ಈ ಕಾರಣಕ್ಕಾಗೇ ಬಿಜೆಪಿ, ಎಸ್ ಡಿ ಪಿ […]

ಸಂಘಪರಿವಾರ, ಎಸ್​ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು: ರಾಮಲಿಂಗಾರೆಡ್ಡಿ
Follow us on

ಕೆ ಜಿ ಹಳ್ಳಿ ಮತ್ತು ಡಿ ಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಂಗಳವಾರದಂದು ನಡೆದ ದೊಂಬಿ, ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಕೊಳ್ಳಿಯಿಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಗೃಹ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿಯವರು, ಎಸ್​ಡಿಪಿಐ ಸಂಘಟನೆಯನ್ನು ನಿಷೇಧಿಸಲು ಸರಕಾರಕ್ಕೆ ಅಭ್ಯಂತರವಾದರೂ ಏನಿದೆ ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ರೆಡ್ಡಿ, “ಎಸ್​ಡಿಪಿಐ ನಿಷೇಧಿಸಿದರೆ ಹಾನಿಯಾಗೋದು ಬಿಜೆಪಿಗೆ ಹೊರತು ಕಾಂಗ್ರೆಸ್​ಗೆ ಯಾವುದೇ ನಷ್ಟವಿಲ್ಲ, ಈ ಕಾರಣಕ್ಕಾಗೇ ಬಿಜೆಪಿ, ಎಸ್ ಡಿ ಪಿ ಐಯನ್ನು ನಿಷೇಧಿಸುತ್ತಿಲ್ಲ,” ಎಂದರು.

ಸಂಘಪರಿವಾರ, ಎಸ್​ಡಿಪಿಐ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾನು ಗೃಹಸಚಿವನಾಗಿದ್ದಾಗ ಇವರೆಲ್ಲಾ ದಕ್ಷಿಣ ಕನ್ನಡದಲ್ಲಿ ಏನು ಮಾಡಿದರು, ಈಗ ಇಲ್ಲಿ ಏನು ಮಾಡುತ್ತಿದ್ದಾರೆ ಅಂತ ನನಗೆ ಚೆನ್ನಾಗಿ ಗೊತ್ತಿದೆ. ಎಸ್​ಡಿಪಿಐ ಮೇಲೆ ನಿಷೇಧ ಹೇರುವಂತೆ ಕಾಂಗ್ರೆಸ್ ಈಗಲೂ ಒತ್ತಾಯಿಸುತ್ತಿದೆ. ಯಾಕೆ ಮಾಡುತ್ತಿಲ್ಲ ಅಂತ ಸರಕಾರವೇ ಹೇಳಬೇಕು,” ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಹಿಂಸಾಚಾರ ಹಿಂದೆ ಯಾರ ಕೈವಾಡವಿದೆ ಎಂದು ಅರಿಯಲು ಹಿರಿಯ ನಾಯಕ ಜಿ ಪರಮೇಶ್ವರ ನೇತೃತ್ವದಲ್ಲಿ ಒಂದು ತಂಡವನ್ನು ಕೆಪಿಸಿಸಿ ರಚಿಸಿದೆ ಎಂದು ರೆಡ್ಡಿ ಹೇಳಿದರು.