KG ಹಳ್ಳಿ- DJ ಹಳ್ಳಿ ಗಲಾಟೆ: ತನಿಖೆ ಚುರುಕುಗೊಳಿಸಲು ಬಂತು 4 ಸ್ಪೆಷಲ್ ಖಾಕಿ squad
ಬೆಂಗಳೂರು: KG ಹಳ್ಳಿ- DJ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಾಟೆ ಕೇಸ್ಗೆ ಸಂಬಂಧಿಸಿದಂತೆ ಇಂದು ಡಿ.ಜೆ ಹಳ್ಳಿ ಠಾಣೆಗೆ FSL ತಂಡ ಭೇಟಿಕೊಟ್ಟಿದೆ. ಠಾಣೆ ಮೇಲೆ ದಾಳಿ ನಡೆಸಿದ ಗಲಭೆಕೋರರು ಘಟನೆ ವೇಳೆ ಬಳಸಿದ ವಸ್ತುಗಳು ಹಾಗೂ ಮೊನ್ನೆ ನಡೆದ ಗೋಲಿಬಾರ್ನ ಬುಲೆಟ್ ಅವಶೇಷಗಳ ಬಗ್ಗೆ ಮಾಹಿತಿ ಕಲೆಹಾಕಲು ಮುಂದಾಯಿತು. ಜೊತೆಗೆ, ಗಲಭೆ ವೇಳೆ ಪುಂಡರು ಬಳಸಿರಬಹುದಾದ ಪೆಟ್ರೋಲ್ ಬಾಂಬ್ಗಳ ಬಗ್ಗೆ ಸಹ ಮಾಹಿತಿ ಕಲೆಹಾಕಿದರು. ಗಲಭೆಯ ತನಿಖೆಗೆ ಸಜ್ಜಾಯ್ತು 4 ತಂಡ ಇನ್ನು ಪ್ರಕರಣದ ತನಿಖೆಯನ್ನ […]

ಬೆಂಗಳೂರು: KG ಹಳ್ಳಿ- DJ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಾಟೆ ಕೇಸ್ಗೆ ಸಂಬಂಧಿಸಿದಂತೆ ಇಂದು ಡಿ.ಜೆ ಹಳ್ಳಿ ಠಾಣೆಗೆ FSL ತಂಡ ಭೇಟಿಕೊಟ್ಟಿದೆ. ಠಾಣೆ ಮೇಲೆ ದಾಳಿ ನಡೆಸಿದ ಗಲಭೆಕೋರರು ಘಟನೆ ವೇಳೆ ಬಳಸಿದ ವಸ್ತುಗಳು ಹಾಗೂ ಮೊನ್ನೆ ನಡೆದ ಗೋಲಿಬಾರ್ನ ಬುಲೆಟ್ ಅವಶೇಷಗಳ ಬಗ್ಗೆ ಮಾಹಿತಿ ಕಲೆಹಾಕಲು ಮುಂದಾಯಿತು. ಜೊತೆಗೆ, ಗಲಭೆ ವೇಳೆ ಪುಂಡರು ಬಳಸಿರಬಹುದಾದ ಪೆಟ್ರೋಲ್ ಬಾಂಬ್ಗಳ ಬಗ್ಗೆ ಸಹ ಮಾಹಿತಿ ಕಲೆಹಾಕಿದರು.

ಗಲಭೆಯ ತನಿಖೆಗೆ ಸಜ್ಜಾಯ್ತು 4 ತಂಡ ಇನ್ನು ಪ್ರಕರಣದ ತನಿಖೆಯನ್ನ ಚುರುಕುಗೊಳಿಸಿರುವ ಪೊಲೀಸರು ಪ್ರತ್ಯೇಕ 4 ವಿಶೇಚ ತಂಡಗಳನ್ನ ರಚಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಮೊದಲನೇ ತಂಡ ಆರೋಪಿಗಳನ್ನ ವಶಕ್ಕೆ ಪಡೆಯುವುದು, ಶಿಫ್ಟ್ ಮಾಡುವುದು ಹಾಗೂ ವೈದ್ಯಕೀಯ ಟೆಸ್ಟ್ಗೆ ಕರೆದೊಯ್ಯುವ ಜವಾಬ್ದಾರಿ ಹೊತ್ತಿದೆ.
ಎರಡನೇ ತಂಡ ದುಷ್ಕೃತ್ಯದಿಂದ ಹಾನಿಗೀಡಾದ ಸ್ಥಳಗಳ ಭೇಟಿ ನೀಡಿ ಪಂಚನಾಮೆ ಮಾಡಿ ಮಾಹಿತಿ ಕಲೆ ಹಾಕುವುದಕ್ಕೆ ನಿಯೋಜಿಸಲಾಗಿದೆ. ಹಾನಿಗೀಡಾದ ಆಸ್ತಿ-ಪಾಸ್ತಿಗಳ ಮಾಲೀಕರಿಂದ ಮಾಹಿತಿ ಪಡೆಯಲಿದೆ.

ಮೂರನೇ ತಂಡ ಪ್ರಕರಣ ಸಂಬಂಧ ಬಂಧಿಸಲಾಗಿರುವ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವುದು ಮತ್ತು ಅವರ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಲಿದೆ. ಈ ತಂಡ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆಹಾಕಲಿದೆ.
ನಾಲ್ಕನೇ ತಂಡ ತಾಂತ್ರಿಕ ಅಂಶವನ್ನ ನೋಡಿಕೊಳ್ಳಲಿದ್ದು ಕಿಡಿಗೇಡಿಗಳ ಕೃತ್ಯದ ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ವಿಡಿಯೋಗಳು ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾದ ದೃಶ್ಯಾವಳಿಗಳ ವಿಶ್ಲೇಷಣೆ ಮಾಡಲಿದೆ.
ಗಲಾಟೆ ಸಂಬಂಧಿಸಿ ಮತ್ತೆರಡು FIR ದಾಖಲು
ಇನ್ನು ಘಟನೆಗೆ ಸಂಬಂಧಿಸಿ ಮತ್ತೆರಡು FIR ದಾಖಲಾಗಿದೆ. KSRP ಸಿಬ್ಬಂದಿಯಿಂದ ಡಿ.ಜೆ.ಹಳ್ಳಿ ಠಾಣೆಗೆ ದೂರು ದಾಖಲಿಸಲಾಗಿದೆ. ಗಲಭೆಯು ವಿಕೋಪಕ್ಕೆ ತೆರಳಿದ ವೇಳೆ ಸಿಬ್ಬಂದಿ ಗಾಳಿಯಲ್ಲಿ 2 ರಬ್ಬರ್ ಬುಲೆಟ್ ಹಾರಿಸಿ ಪರಿಸ್ಥಿತಿಯನ್ನ ಹತೋಟಿಗೆ ತರಲು ಯತ್ನಿಸಿದ್ದರು.

ಈ ವೇಳೆ ಕಿಡಿಗೇಡಿಗಳ ಕಲ್ಲು ತೂರಾಟದಿಂದ ತಮ್ಮ ಸಿಬ್ಬಂದಿಗೆ ಗಾಯಗಳಾಗಿತ್ತು. ಹಾಗಾಗಿ, ಇದರ ಕುರಿತು ಮತ್ತು KSRPವೊಂದು ಗಲಭೆಯಲ್ಲಿ ಸುಟ್ಟುಕರಕಲಾಗಿದ್ದರ ಕುರಿತು ದೂರು ದಾಖಲಿಸಲಾಗಿದೆ.
9 ಕೇಸ್ಗಳ ಪೈಕಿ 2 ಕೇಸ್ಗಳು ಸಿಸಿಬಿಗೆ
ಇದೀಗ, 9 ಕೇಸ್ಗಳ ಪೈಕಿ 2 ಕೇಸ್ಗಳು ಸಿಸಿಬಿಗೆ ಹಸ್ತಾಂತರವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಕಾಡುಗೊಂಡನಹಳ್ಳಿ ಠಾಣೆಗೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಆಗಮಿಸಿದರು. ಪಾಟೀಲ್ ಜೊತೆ ಡಿಸಿಪಿ ಅನುಚೇತ್ ಸಹ ಭೇಟಿಕೊಟ್ಟರು. ಭೇಟಿ ಬಳಿಕ ಅಧಿಕಾರಿಗಳ ಜೊತೆ ಸಂದೀಪ್ ಪಾಟೀಲ್ ಸುದೀರ್ಘ ಚರ್ಚೆ ನಡೆಸಿದರು.

Published On - 3:55 pm, Thu, 13 August 20



