ಚುನಾವಣೆ ಮೇಲೆ ಕಣ್ಣು.. ವೀಸಾ ನಿರ್ಬಂಧ ಸಡಿಲುಗೊಳಿಸಿದ ದೊಡ್ಡಣ್ಣ ಟ್ರಂಪ್!
ವಾಷಿಂಗ್‌ಟನ್: ವಿದೇಶಿ ಪ್ರಜೆಗಳು ಅಮೆರಿಕದಲ್ಲಿ ಉದ್ಯೋಗ ಮಾಡಲು ನಿರ್ಬಂಧ ವಿಧಿಸಿದ್ದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಈಗ ಉಲ್ಟಾ ಹೊಡೆದಿದ್ದಾರೆ. ಹೆಚ್-1ಬಿ, ಎಲ್-1 ವೀಸಾ ಮೇಲೆ ವಿಧಿಸಿದ್ದ ಬ್ಯಾನ್ ಅನ್ನು ಈಗ ಹಿಂಪಡೆದಿದ್ದಾರೆ. ಈ ಸಂಬಂಧ ಅಧಿಸೂಚನೆ ಹೊರಡಿಸಿರುವ ಟ್ರಂಪ್ ಆಡಳಿತ, ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ರಾಷ್ಟ್ರೀಯ ತುರ್ತು ಅವಶ್ಯಕತೆ ಅಡಿ ವೀಸಾ ಮೇಲೆ ವಿಧಿಸಿದ್ದ ಬ್ಯಾನ್ ಅನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದೆ. ಈ ಹೊಸ ವಿನಾಯಿತಿ ಪ್ರಕಾರ ಅಮೆರಿಕದಲ್ಲಿ ಉದ್ಯೋಗ ಬಯಸುವವರು ಈ […]
ವಾಷಿಂಗ್‌ಟನ್: ವಿದೇಶಿ ಪ್ರಜೆಗಳು ಅಮೆರಿಕದಲ್ಲಿ ಉದ್ಯೋಗ ಮಾಡಲು ನಿರ್ಬಂಧ ವಿಧಿಸಿದ್ದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಈಗ ಉಲ್ಟಾ ಹೊಡೆದಿದ್ದಾರೆ. ಹೆಚ್-1ಬಿ, ಎಲ್-1 ವೀಸಾ ಮೇಲೆ ವಿಧಿಸಿದ್ದ ಬ್ಯಾನ್ ಅನ್ನು ಈಗ ಹಿಂಪಡೆದಿದ್ದಾರೆ.
ಈ ಸಂಬಂಧ ಅಧಿಸೂಚನೆ ಹೊರಡಿಸಿರುವ ಟ್ರಂಪ್ ಆಡಳಿತ, ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ರಾಷ್ಟ್ರೀಯ ತುರ್ತು ಅವಶ್ಯಕತೆ ಅಡಿ ವೀಸಾ ಮೇಲೆ ವಿಧಿಸಿದ್ದ ಬ್ಯಾನ್ ಅನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದೆ.
ಈ ಹೊಸ ವಿನಾಯಿತಿ ಪ್ರಕಾರ ಅಮೆರಿಕದಲ್ಲಿ ಉದ್ಯೋಗ ಬಯಸುವವರು ಈ ಮೊದಲೇ ಕೆಲಸ ಮಾಡುತ್ತಿದ್ದರೆ ಅಂಥವರು ಈ ಮೊದಲಿನ ಕಂಪನಿಯಲ್ಲಿ, ಈ ಮೊದಲು ಮಾಡುತ್ತಿದ್ದ ಕೆಲಸಕ್ಕೆ ಮತ್ತು ಅದೇ ಸಂಬಳಕ್ಕೆ ಮತ್ತೇ ಅಪ್ಲೈ ಮಾಡಿದ್ದರೆ ಮಾತ್ರ ವೀಸಾ ನೀಡಲಾಗುತ್ತೆ ಎಂದಿದೆ.
ಇದರ ಜೊತೆಗೆ ಕೆಲಸ ಕೊಡುವ ಅಮೆರಿಕದ ಕಂಪನಿಗಳು ಕೂಡಾ, ಹೀಗೆ ಅಮೆರಿಕದ ಹೊರಗಿನವರಿಗೆ ಉದ್ಯೋಗ ಕೊಡುವುದಾದರೇ ಅವರು ವಿಶೇಷ ವೃತ್ತಿ ಪರಿಣಿತರಾಗಿರಬೇಕು. ಅವರಿಂದ ಅಮೆರಿಕಕ್ಕೆ ಮಹತ್ವದ ಕೊಡುಗೆ ಸಿಗುವಂತಿರಬೇಕು. ಅಂದರೆ ಮಾತ್ರ ಅಂಥ ವೃತ್ತಿ ಪರಿಣಿತರಿಗೆ ಕೆಲಸ ಕೊಡಬೇಕು ಎಂದಿದೆ.
ವೋಟ್ ಬ್ಯಾಂಕ್ ತಂತ್ರಗಾರಿಕೆ! ಆದ್ರೆ ಟ್ರಂಪ್ ಅವರ ಈ ವಿನಾಯಿತಿ ಹಿಂದೆ ಭಾರತ ಮೂಲತ ಇಂಡಿಯನ್-ಆಫ್ರಿಕನ್ ಅಮೆರಿಕನ್ ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರೆಟಿಕ್ ಪಕ್ಷ ಉಪಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡುವ ಸುಳಿವು ಮೊದಲೇ ಗೊತ್ತಾಗಿ, ಅಲ್ಲಿನ ಏಷ್ಯನ್ ಮತ್ತು ಆಫ್ರಿಕನ್ ಸಮುದಾಯದ ವೋಟ್ ಬ್ಯಾಂಕ್ ಸೆಳೆಯಲು ಈ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನುವ ಮಾತು ಕೂಡಾ ಕೇಳಿಬರುತ್ತಿವೆ.