ಇದು ಇಡೀ ಪ್ರಪಂಚದಲ್ಲೇ ಅತ್ಯಂತ ದುಬಾರಿ mask..ಬೆಲೆ ಎಷ್ಟು ಗೊತ್ತಾ?
ಇಸ್ರೇಲ್ನ ಪ್ರತಿಷ್ಠಿತ ಒಡವೆ ತಯಾರಿಕಾ ಕಂಪನಿ ಇವೆಲ್ (Yvel) 1.5 ಮಿಲಿಯನ್ ಡಾಲರ್ (11 ಕೋಟಿ ರೂ.) ಮೌಲ್ಯದ ಜಗತ್ತಿನ ಅತ್ಯಂತ ದುಬಾರಿ COVID-19 ಫೇಸ್ ಮಾಸ್ಕ್ನ ತಯಾರು ಮಾಡುತ್ತಿದೆ ಎಂದು ತಿಳಿದುಬಂದಿದೆ. 18 ಕ್ಯಾರಟ್ ಬಿಳಿ ಬಂಗಾರದಿಂದ ತಯಾರಿಸಲಾದ ಈ ವಜ್ರ ಖಚಿತ ಫೇಸ್ ಮಾಸ್ಕ್ನಲ್ಲಿ 3,600 ಬಿಳಿ ಮತ್ತು ಕಪ್ಪು ವಜ್ರಗಳನ್ನು ಬಳಸಲಾಗಿದೆ. ಇದಲ್ಲದೆ, ಈ ಮಾಸ್ಕ್ನಲ್ಲಿ ಉನ್ನತ ದರ್ಜೆಯ N99 ಫಿಲ್ಟರ್‌ಗಳನ್ನೂ ಸಹ ಅಳವಡಿಸಬಹುದಾಗಿದೆ ಎಂದು ಇದರ ವಿನ್ಯಾಸಕ ಮತ್ತು ಕಂಪನಿ ಮಾಲೀಕ […]
ಇಸ್ರೇಲ್ನ ಪ್ರತಿಷ್ಠಿತ ಒಡವೆ ತಯಾರಿಕಾ ಕಂಪನಿ ಇವೆಲ್ (Yvel) 1.5 ಮಿಲಿಯನ್ ಡಾಲರ್ (11 ಕೋಟಿ ರೂ.) ಮೌಲ್ಯದ ಜಗತ್ತಿನ ಅತ್ಯಂತ ದುಬಾರಿ COVID-19 ಫೇಸ್ ಮಾಸ್ಕ್ನ ತಯಾರು ಮಾಡುತ್ತಿದೆ ಎಂದು ತಿಳಿದುಬಂದಿದೆ.
18 ಕ್ಯಾರಟ್ ಬಿಳಿ ಬಂಗಾರದಿಂದ ತಯಾರಿಸಲಾದ ಈ ವಜ್ರ ಖಚಿತ ಫೇಸ್ ಮಾಸ್ಕ್ನಲ್ಲಿ 3,600 ಬಿಳಿ ಮತ್ತು ಕಪ್ಪು ವಜ್ರಗಳನ್ನು ಬಳಸಲಾಗಿದೆ. ಇದಲ್ಲದೆ, ಈ ಮಾಸ್ಕ್ನಲ್ಲಿ ಉನ್ನತ ದರ್ಜೆಯ N99 ಫಿಲ್ಟರ್‌ಗಳನ್ನೂ ಸಹ ಅಳವಡಿಸಬಹುದಾಗಿದೆ ಎಂದು ಇದರ ವಿನ್ಯಾಸಕ ಮತ್ತು ಕಂಪನಿ ಮಾಲೀಕ ಐಸಾಕ್ ಲೆವಿ ಹೇಳಿದ್ದಾರೆ.
ಅಂದ ಹಾಗೆ, ಈ ಮಾಸ್ಕ್ನ ಅಮೇರಿಕಾದಲ್ಲಿ ನೆಲೆಸಿರುವ ಚೀನಾ ಮೂಲದ ಉದ್ಯಮಿಯೊಬ್ಬರು ತಯಾರಿಸಲು ಆರ್ಡರ್ ಮಾಡಿದ್ದಾರಂತೆ. ಇದರ ತೂಕ 270 ಗ್ರಾಂ ಇದ್ದು 2020ರ ಅಂತ್ಯದ ವೇಳೆಗೆ ಇದನ್ನು ಪೂರ್ಣಗೊಳಿಸಲಾಗುವುದು ಎಂದು ಐಸಾಕ್ ಲೆವಿ ತಿಳಿಸಿದ್ದಾರೆ.
Published On - 4:52 pm, Wed, 12 August 20