ಬೆಂಗಳೂರು: ಸಾಮಾನ್ಯವಾಗಿ ನಿಗದಿತ ವಲಯದಲ್ಲಿ ಕೆಲಸ ಮಾಡುವ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಬಹು ಅಪರೂಪ ಎಂಬಂತೆ ಸಾರ್ವಜನಿಕ ಆಮಂತ್ರಣ ನೀಡಿ ಸಭೆ ನಡೆಸುವ ಬಗ್ಗೆ ಮಾಹಿತಿ ನೀಡಿದೆ. ನಾಳೆ (ಜುಲೈ 18 ರಂದು) ಬೆಂಗಳೂರು, ಜಯನಗರ 4ನೇ ಬ್ಲಾಕ್ನ ರಾಷ್ಟ್ರೋತ್ಥಾನ ಶಾರೀರಿಕ ಶಿಕ್ಷಣ ಕೇಂದ್ರದಲ್ಲಿ ಆರ್ಎಸ್ಎಸ್ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಕಾರ್ಪೊರೇಟ್ ವಲಯದಿಂದ ಸೇವಾ ವಲಯಕ್ಕೆ ಹೋಗಲು ಆಸಕ್ತಿ ಇದೆಯೇ ಎಂಬ ಪ್ರಶ್ನೆ ಮತ್ತು ವಿಷಯದೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರಿನ ಸೇವಾ ಸಂಘ- ಸಂಸ್ಥೆಗಳ ಬಗ್ಗೆ ಮಾಹಿತಿ, ಕಾರ್ಪೊರೇಟ್ ಮ್ಯಾನೇಜ್ಮೆಂಟ್ ಅನುಭವದೊಂದಿಗಿನ ಕಾರ್ಯಕರ್ತರ ಅಗತ್ಯತೆ ಬಗ್ಗೆ ಚರ್ಚೆ ನಡೆಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಈ ಸಮಾರಂಭ ನಡೆಯಲಿದ್ದು, 1 ಗಂಟೆಯಿಂದ 2 ಗಂಟೆ ವರೆಗೆ ಊಟದ ಸಮಯ ಆಗಿರಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರ್ ಕಾರ್ಯವಾಹ್ ಮುಕುಂದ ಜೀ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಭಾಗವಹಿಸಲು ಆಸಕ್ತಿ ಇರುವವರು www.bit.ly/crossoverworkshop ಮೂಲಕ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: RSS ಮೋಹನ್ ಭಾಗವತ್ ತುಮಕೂರಿನ ನೂತನ ಕಚೇರಿ ‘ಸಾಧನಾ’ಗೆ ಭೇಟಿ!
RSS ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿನಂದನೆ