Karnataka Assembly session: ಆರ್​ಟಿಐ ಕಾರ್ಯಕರ್ತರು ಐಷಾರಾಮಿ ಬದುಕು ನಡೆಸುತ್ತಿರುವ ಬ್ಲ್ಯಾಕ್​ಮೇಲರ್​ಗಳು: ಯತ್ನಾಳ್

Updated on: Aug 12, 2025 | 1:08 PM

Karnataka Assembly session: ಯತ್ನಾಳ್ ಅವರೊಂದಿಗೆ ಧ್ವನಿಗೂಡಿಸಿದ ಹಿರಿಯ ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಮಾಹಿತಿ ಹಕ್ಕು ಕಾಯ್ದೆ ಒಂದು ಶಕ್ತಿಶಾಲಿ ಆಯುಧ, ಆರ್​ಟಿಐ ಕಾರ್ಯಕರ್ತರೆಂದು ಹೇಳಿಕೊಳ್ಳುವವರು ಸರ್ಕಾರೀ ಕಾಮಗಾರಿ, ಸರ್ಕಾರೀ ಕಟ್ಟಡಗಳ ಬಗ್ಗೆ ಮಾಹಿತಿ ಕೇಳಲಿ, ಆದರೆ ವ್ಯಕ್ತಿಯೊಬ್ಬ ಮನೆ ಕಟ್ಟುತ್ತಿದ್ದರೆ ಅದರ ಮಾಹಿತಿಯನ್ನು ಕೇಳುವುದು ಕಾಯ್ದೆಯ ವ್ಯಾಪ್ತಿಯಡಿ ಬರೋದಿಲ್ಲ ಎಂದು ಹೇಳಿದರು.

ಬೆಂಗಳೂರು, ಆಗಸ್ಟ್ 12: ವಿಧಾನಸಭಾ ಅಧಿವೇಶನದಲ್ಲಿ (Karnataka Assembly Session) ಇಂದು ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗ ಮಾಡಿಕೊಡು ಐಷಾರಾಮಿ ಬದುಕು ನಡೆಸುತ್ತಿರುವ ಆರ್​ಟಿಐ ಕಾರ್ಯಕರ್ತರ ಬಗ್ಗೆ ಚರ್ಚೆ ನಡೆಯಿತು. ಸದನದಲ್ಲಿ ಮಾತಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಅರ್​ಟಿಐ ಕಾರ್ಯಕರ್ತರು ಭವ್ಯ ಬಂಗಲೆಗಳನ್ನು ಕಟ್ಟಿಕೊಂಡು ಮನೆಮುಂದೆ ಕಾರುಗಳನ್ನು ನಿಲ್ಲಿಸಿಕೊಂಡು ವೈಭೋಗದ ಬಾಳ್ವೆ ನಡೆಸುತ್ತಿದ್ದಾರೆ. ಇವರಿಗೆ ಹಣ ಎಲ್ಲಿಂದ ಬರುತ್ತದೆ? ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಬ್ಲ್ಯಾಕ್​ಮೇಲ್ ಮಾಡುವುದೇ ಇವರ ಕಸುಬಾಗಿದೆ, ಭ್ರಷ್ಟಾಚಾರವನ್ನು ತಡೆಯಲು ಕಾಯ್ದೆಯನ್ನು ರೂಪಿಸಲಾಗಿದೆ, ಅದರೆ ಆರ್​ಟಿಐ ಕಾರ್ಯಕರ್ತರು ಭ್ರಷ್ಟಾಚಾರಿಗಳನ್ನು ಶೋಷಿಸಿ ಅವರಿಗಿಂತ ದೊಡ್ಡ ಭ್ರಷ್ಟಾಚಾರವೆಸಗುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಬೇಕು ಎನ್ನುತ್ತಾರೆ.

ಇದನ್ನೂ ಓದಿ:   Karnataka Assembly session: ರಾಜಣ್ಣರನ್ನು ಸಂಪುಟದಿಂದ ವಜಾ ಮಾಡಿರುವುದಕ್ಕೆ ವಿವರಣೆ ಕೇಳಿದ ವಿಪಕ್ಷ ನಾಯಕರು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ