ಆರ್ಟಿಐ ಕಾರ್ಯಕರ್ತ ಶ್ರೀಧರ್ ಕೊಲೆ: 6 ಆರೋಪಿಗಳ ಬಂಧನ
ಇನ್ನೂ ಕೆಲ ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ: ಮಾಹಿತಿ ಹಕ್ಕು ಕಾಯ್ದೆ (Right To Information – RTI) ಕಾರ್ಯಕರ್ತ ಟಿ.ಶ್ರೀಧರ್ ಕೊಲೆ ಪ್ರಕರಣ ಸಂಬಂಧ ಈವರೆಗೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಕೆಲ ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಧಿತರನ್ನು ವಾಗೀಶ್, ಯಲ್ಲಪ್ಪ, ಹನುಮಂತ, ಮ್ಯಾಕಿ ಹನುಮಂತ, ರಾಯದುರ್ಗದ ಹನುಮಂತ, ಹೆಚ್.ಕೆ.ಹಾಲೇಶ್ ಎಂದು ಗುರುತಿಸಲಾಗಿದೆ. ಹೆಚ್.ಕೆ.ಹಾಲೇಶ್ ಈ ಕೊಲೆಯ ರೂವಾರಿ ಎಂದು ಹೇಳಲಾಗಿದೆ. ಆದರೆ ಮಾಧ್ಯಮ ಪ್ರಕಟಣೆಯಲ್ಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಪುತ್ರ ಭರತ್ ಹೆಸರನ್ನು ಉಲ್ಲೇಖಿಸಿಲ್ಲ.
ಹಾಲೇಶನ ಬಂಧನದ ನಂತರ ಭರತ್ ತಲೆಮರೆಸಿಕೊಂಡಿದ್ದಾನೆ. ಎಚ್.ಕೆ.ಹಾಲೇಶ್ ಭೂಕಬಳಿಕೆ ಹಾಗೂ ಅಕ್ರಮ ನಡೆಸಿರುವ ಬಗ್ಗೆ ಆರ್ಟಿಐ ಕಾರ್ಯಕರ್ತ ಟಿ.ಶ್ರೀಧರ್ ದೂರು ದಾಖಲಿಸಿದ್ದರು. ಇದೇ ದ್ವೇಷದ ಹಿನ್ನೆಲೆಯಲ್ಲಿ ಆರ್ಟಿಐ ಕಾರ್ಯಕರ್ತನ ಕೊಲೆ ನಡೆದಿತ್ತು ಎಂಬ ಸಂಗತಿ ಪ್ರಾಥಮಿಕ ತನಿಖೆಯಿಂದ ಬಯಲಾಗಿತ್ತು.
ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಜುಲೈ 15ರಂದು ಆರ್ಟಿಐ ಕಾರ್ಯಕರ್ತ ಶ್ರೀಧರ್ ಹತ್ಯೆಯಾಗಿತ್ತು. ಕೊಲೆಗೆ ಸಂಬಂಧಪಟ್ಟಂತೆ ಅವರ ಪತ್ನಿ ಶಿಲ್ಪಾ ಹಾಲೇಶ್, ಪಿ.ಟಿ.ಭರತ್ ನಾಯ್ಕ್ ವಿರುದ್ಧ ದೂರು ನೀಡಿದ್ದರು. ತನಗೂ ಜೀವ ಬೆದರಿಕೆ ಇದೆ ದೂರಿನಲ್ಲಿ ತಿಳಿಸಿದ್ದರು.
(RTI Volunteer Sridhar Murder Case 6 Accused arrested)
ಇದನ್ನೂ ಓದಿ: ಆರ್ಟಿಐ ಕಾರ್ಯಕರ್ತ ಶ್ರೀಧರ್ ಹತ್ಯೆ ಹಿಂದೆ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್: ಶ್ರೀಧರ್ ಪತ್ನಿ ಹಾಗೂ ತಾಯಿ ಆರೋಪ
Published On - 10:30 pm, Sun, 18 July 21