ಇಂಡೋನೇಷ್ಯಾ, ಏಪ್ರಿಲ್.20: ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಸದ್ಗುರು(Sadhguru) ಅವರು ಮೆದುಳಿನ ಶಸ್ತ್ರಚಿಕಿತ್ಸೆ ಆದ ಒಂದು ತಿಂಗಳ ನಂತರ ಮತ್ತೆ ಕಾರ್ಯಪ್ರವೃತ್ತರಾಗಿದ್ದಾರೆ. ನಿನ್ನೆ(ಏ.19) ನಡೆದ ಲೋಕಸಭೆ ಚುನಾವಣೆ ಮತದಾನದಲ್ಲಿ ಮತ ಚಲಾಯಿಸಿದ ನಂತರ, ಭಾರತ ಮತ್ತು ಆಗ್ನೇಯ ಏಷ್ಯಾದ ನಡುವಿನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಕುರಿತು ಅನ್ವೇಷಿಸಲು ಹತ್ತು ದಿನಗಳ ಪ್ರವಾಸ ಕೈಗೊಂಡಿದ್ದು, ಇಂದು ಇಂಡೋನೇಷ್ಯಾ(Indonesia)ದ ಬಾಲಿಗೆ ತಲುಪಿದರು. ಈ ವೇಳೆ ಇಂಡೋನೇಷ್ಯಾದ ಪ್ರವಾಸೋದ್ಯಮ ಸಚಿವರಾದ ಶ್ರೀ ಸ್ಯಾಂಡಿಯಾಗ ಯುನೊ ಮತ್ತು ಬಾಲಿಯಲ್ಲಿರುವ ಭಾರತದ ಕಾನ್ಸುಲ್ ಜನರಲ್ ಡಾ. ಶಶಾಂಕ್ ವಿಕ್ರಮ್ ಸ್ವಾಗತಿಸಿದರು.
ಇನ್ನು ಸಚಿವರೊಂದಿಗೆ ಮಾತನಾಡುತ್ತಾ, ಸದ್ಗುರುಗಳು ಎರಡು ದೇಶಗಳ ನಡುವಿನ ಐತಿಹಾಸಿಕ ಸಂಬಂಧವನ್ನು ವಿವರಿಸಿದರು. “ಬಲಿ ಜಾತ್ರೆ” ಕುರಿತು ಹೇಳುತ್ತಾ ಇದು ಒಡಿಶಾದ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು, ಬಾಲಿಯೊಂದಿಗೆ ಒಡಿಶಾದ ಜನರ ಹಿಂದಿನ ಒಡನಾಟವನ್ನು ತಿಳಿಸಿದರು. ಈ ಸಂದರ್ಭದಲ್ಲಿ, ಒಡಿಶಾದ ಜನರು ತಮ್ಮ ಪೂರ್ವಜರು ಬಾಲಿಗೆ ತೆರಳಿದ ಸ್ಮರಣಾರ್ಥವಾಗಿ ಪ್ರಯಾಣದ ಸಾಂಕೇತಿಕ ಸೂಚಕವಾಗಿ ಬಣ್ಣದ ಕಾಗದ, ಒಣಗಿದ ಬಾಳೆ ಮರದ ತೊಗಟೆಗಳು ಮತ್ತು ಕಾರ್ಕ್‌ಗಳಿಂದ ಮಾಡಿದ ಚಿಕಣಿ ಆಟಿಕೆ ದೋಣಿಗಳನ್ನು ತಯಾರಿಸಿದ ಕುರಿತು ಪ್ರಸ್ತಾಪಿಸಿದರು. ಇದೇ ವೇಳೆ ಇಂಡೋನೇಷ್ಯಾದ ವಿವಿಧ ಆಧ್ಯಾತ್ಮಿಕ ಸ್ಥಳಗಳನ್ನು ನಿರ್ವಹಿಸುವ ವಿಧಾನವನ್ನು ಶ್ಲಾಘಿಸಿದರು.
Back in Action!@SadhguruJV Arrives for Mystic Musings- A 10 day exploration of culture and Spirituality in South East Asia – Bali, Indonesia. pic.twitter.com/PO1jovM3xo
— Isha Foundation (@ishafoundation) April 19, 2024
Landing in Bali for Mystic Musings – a 10-day exploration of culture and spirituality in Southeast Asia – @SadhguruJV was warmly welcomed by Mr. Sandiaga Uno, Minister of Tourism and Creative Economy of the Republic of Indonesia along with his team, and Dr. Shashank Vikram,… pic.twitter.com/8LmPD9Wwhx
— Isha Foundation (@ishafoundation) April 19, 2024
ಇಂಡೋನೇಷ್ಯಾಕ್ಕೆ 10 ದಿನಗಳ ಪ್ರವಾಸ ಕೈಗೊಂಡಿರುವ ಸಮಯದಲ್ಲಿ, ಸದ್ಗುರುಗಳು ಬೆಸಾಕಿ, ತೀರ್ಥ ಎಂಪುಲ್ ದೇವಾಲಯ ಮತ್ತು ಇತರ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ದೇವಾಲಯದ ಸಂಸ್ಕೃತಿ ಮತ್ತು ದೇವಾಲಯಗಳ ಹಿಂದಿನ ವಿಜ್ಞಾನವನ್ನು ಅನ್ವೇಷಿಸಲಿದ್ದಾರೆ. ಬಳಿಕ ಕಾಂಬೋಡಿಯಾಕ್ಕೆ ತೆರಳಲಿದ್ದಾರೆ. ಇನ್ನು ಸಾಮಾಜಿಕ ಮಾಧ್ಯಮದಲ್ಲಿ ಅತೀ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ