ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ವಿ.ಎಸ್. ಉಗ್ರಪ್ಪ ಮತ್ತು ಸಲೀಂ ನಡುವಣ ಸ್ಫೋಟಕ ಮಾತುಗಳು ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಭಾರೀ ಸದ್ದು ಮಾಡತೊಡಗಿದೆ. ಡಿ.ಕೆ.ಶಿವಕುಮಾರ್ ಕಲೆಕ್ಷನ್ ಗಿರಾಕಿ. ಶಿವಕುಮಾರ್‌ರದ್ದು ದೊಡ್ಡ ಸ್ಕ್ಯಾಮ್. ಪಟ್ಟು ಹಿಡಿದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿಸಿದ್ದು ಎಂದು ಸಲೀಂ- ಉಗ್ರಪ್ಪ ನಡುವಣ ಮಾತುಗಳು ಬಹಿರಂಗವಾಗಿವೆ.
ಕರ್ನಾಟಕ ರಾಜಕೀಯದಲ್ಲಿ ಭ್ರಷ್ಟಾಚಾರ ಎಂಬುದು ಅವ್ಯಾಹತವಾಗಿ ನಡೆದು ಬಂದಿದೆ. ಇದು ಆಡಳಿತಾರೂಢ ಮತ್ತು ವಿಪಕ್ಷಗಳು ಎಂಬ ಬೇಧ ಭಾವ ಇಲ್ಲದೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಸಲೀಂ-ಉಗ್ರಪ್ಪ ನಡುವಣ ಮಾತುಗಳು ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಇದಕ್ಕೆ ಆಡಳಿತಾರೂಢ ಬಿಜೆಪಿ ಪಕ್ಷ ಉಗ್ರವಾಗಿ ಟ್ವೀಟ್ ಮಾಡಿ, ಕೆಣಕಿದೆ.
ಕರ್ನಾಟಕ ಬಿಜೆಪಿ ಟ್ವೀಟ್ ಸಂದೇಶದ ಸಾರಾಂಶ ಹೀಗಿದೆ:
ಕೆಪಿಸಿಸಿ ಕಚೇರಿಯಲ್ಲೇ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರ ಬಗ್ಗೆ ಸ್ವಪಕ್ಷೀಯರ ಗುಣಗಾನ… #ಭ್ರಷ್ಟಾಧ್ಯಕ್ಷ
ಕೆಪಿಸಿಸಿ ಕಚೇರಿಯಲ್ಲೇ ಕೆಪಿಸಿಸಿ ಅಧ್ಯಕ್ಷ @DKShivakumar ಭ್ರಷ್ಟಾಚಾರವನ್ನು @INCKarnataka ಪಕ್ಷದ ರಾಜ್ಯ ಪದಾಧಿಕಾರಿಗಳು ತೆರೆದಿಟ್ಟಿದ್ದಾರೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಪಕ್ಷ ತವರು ಮನೆಯಾಗಿದೆ. #ಭ್ರಷ್ಟಾಧ್ಯಕ್ಷ
ಮಾನ್ಯ @DKShivakumar ಅವರೇ, ಸೀಸರ್‌ನ ಪತ್ನಿ ಅನುಮಾನಕ್ಕೆ ಅತೀತವಾಗಿರಬೇಕೆಂಬ ಮಾತಿದೆ. ಆದರೆ ಕೆಪಿಸಿಸಿ ಪಕ್ಷದ ವೇದಿಕೆಯಲ್ಲೇ ನಿಮ್ಮವರೇ ನಿಮ್ಮ ಬಗ್ಗೆ ಆಡಿರುವ ಅಧಿಕೃತ ಮಾತುಗಳ ಬಗ್ಗೆ ನೀವು ಸ್ಪಷ್ಟನೆ ನೀಡಲೇಬೇಕಲ್ಲವೇ? #ಭ್ರಷ್ಟಾಧ್ಯಕ್ಷ
ಇದನ್ನೂ ಓದಿ:
ಪಟ್ಟು ಹಿಡಿದು ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ; ಡಿಕೆ ಶಿವಕುಮಾರ್ ಬಗ್ಗೆ ಕಾಂಗ್ರೆಸ್ ನಾಯಕರ ಸ್ಫೋಟಕ ಮಾತು!
ಡಿಕೆಶಿ ಹುಡುಗರ ಬಳಿ ₹50-100 ಕೋಟಿ ಇದೆ ಎಂದ ಸಲೀಂ |Ugrappa|Tv9kannada
(saleem alleges corruption by kpcc president dk shivakumar karnataka bjp tweets)
Published On - 11:41 am, Wed, 13 October 21