ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾಗಲಕೋಟೆ ಯೋಧ ಸಾವು! ಇಂದು ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ

TV9 Digital Desk

| Edited By: sandhya thejappa

Updated on:Oct 13, 2021 | 12:00 PM

ಯೋಧ ಮಹಾಂತೇಶ್ ಚೌಧರಿ ರಾಜಸ್ಥಾನದ ಚಾರ್ಲಿ ಬಟಾಲಿಯನ್ 161ರಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ ತಾಯಿ, ತಮ್ಮ, ಪತ್ನಿ, ಇಬ್ಬರು ಪುತ್ರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾಗಲಕೋಟೆ ಯೋಧ ಸಾವು! ಇಂದು ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ
ಯೋಧ ಮಹಾಂತೇಶ್ ಚೌಧರಿ, ಯೋಧನ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಲಾಯಿತು.

Follow us on

ಬಾಗಲಕೋಟೆ: ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾಗಲಕೋಟೆ ಯೋಧ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಬಿಎಸ್ಎಪ್ ಯೋಧ ಮೃತಪಟ್ಟಿದ್ದಾರೆ. ಹುನಗುಂದ ತಾಲೂಕಿನ ಕೂಡಲಸಂಗಮದ ಮಹಾಂತೇಶ್ ಚೌಧರಿ ಮೃತ ಯೋಧ. ಮಹಾಂತೇಶ್ ಚೌಧರಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇಂದು (ಅ.13) ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸಿದೆ.

ಸದ್ಯ ಯೋಧ ಮಹಾಂತೇಶ್ ಚೌಧರಿ ರಾಜಸ್ಥಾನದ ಚಾರ್ಲಿ ಬಟಾಲಿಯನ್ 161ರಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ ತಾಯಿ, ತಮ್ಮ, ಪತ್ನಿ, ಇಬ್ಬರು ಪುತ್ರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಇಂದು ಯೋಧನ ಪಾರ್ಥಿವ ಶರೀರ ಹುಟ್ಟೂರಿಗೆ ಆಗಮಿಸಿದೆ. ಗ್ರಾಮದಲ್ಲಿ ಯೋಧನ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಲಾಗುತ್ತಿದೆ. ಮಧ್ಯಾಹ್ನ ಕೂಡಲಸಂಗಮದ ಯೋಧನ ಹೊಲದಲ್ಲಿ ಸರಕಾರಿ ಹಾಗೂ ಸೇನಾ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ.

ಇದನ್ನೂ ಓದಿ

Viral Video: ಸುಮಧುರ ಕಂಠದಲ್ಲಿ ಹಾಡು ಹೇಳಿ ರೋಗಿಗೆ ಧೈರ್ಯ ತುಂಬಿದ ನರ್ಸ್​; ನೆಟ್ಟಿಗರೆಲ್ಲಾ ಭಾವುಕರಾದ ವಿಡಿಯೋವಿದು

ಕನ್ನಡ ಚಿತ್ರಗಳಿಗೆ ಹೆಚ್ಚಾಯ್ತು ಪೈರಸಿ ಸಮಸ್ಯೆ; ದೂರು ನೀಡಿದ ‘ಶಾರ್ದೂಲ’ ನಿರ್ಮಾಪಕ ರೋಹಿತ್

ತಾಜಾ ಸುದ್ದಿ

Related Stories

Click on your DTH Provider to Add TV9 Kannada