ಕಂಟೇನ್ಮೆಂಟ್​ ಜೋನ್ ಆಗಿದ್ರೂ ಸಲೂನ್, ಬಾರ್ ಓಪನ್: ಕಂಟಕವಾಗುತ್ವಾ ಓಲಾ, ಉಬರ್

ಬೆಂಗಳೂರು: 4ನೇ ಹಂತದ ಲಾಕ್​ಡೌನ್ ಸಡಿಲಿಕೆ ಆದಾಗಲಿಂದಲೂ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರ ಜೊತೆಗೆ ಕೊರೊನಾ ಹಾಟ್ ​ಸ್ಪಾಟ್ ಆಗಿರುವ ಪಾದರಾಯನಪುರದಲ್ಲಿ ಜನರ ದರ್ಬಾರ್ ಜೋರಾಗಿದೆ. ಕಂಟೇನ್ಮೆಂಟ್​ ಜೋನ್ ಆಗಿದ್ರೂ ಸಲೂನ್​ಗಳು, ಬಾರ್ ಓಪನ್ ಆಗಿವೆ. ಜನ ಕೊರೊನಾ ಮರೆತು ಓಡಾಡುತ್ತಿದ್ದಾರೆ. ಬೆಳಗ್ಗೆನೆ ಎಣ್ಣೆ ಖರೀದಿಸಲು ಜನ ಬರ್ತಿದ್ದಾರೆ. ಇನ್ನು ಸಲೂನ್​ಗಳು ಓಪನ್ ಆಗಿದ್ದು, ಸಲೂನ್​​ಗೆ ಹೋಗೋರು ಬರೋರಿಂದ ಕೊರೊನಾ ಹೆಚ್ಚಾಗುವ ಆತಂಕ ಶುರುವಾಗಿದೆ. ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೆ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಡೇಂಜರ್​​ ಜೋನ್​ನಲ್ಲಿ […]

ಕಂಟೇನ್ಮೆಂಟ್​ ಜೋನ್ ಆಗಿದ್ರೂ ಸಲೂನ್, ಬಾರ್ ಓಪನ್: ಕಂಟಕವಾಗುತ್ವಾ ಓಲಾ, ಉಬರ್
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: May 21, 2020 | 4:00 PM

ಬೆಂಗಳೂರು: 4ನೇ ಹಂತದ ಲಾಕ್​ಡೌನ್ ಸಡಿಲಿಕೆ ಆದಾಗಲಿಂದಲೂ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರ ಜೊತೆಗೆ ಕೊರೊನಾ ಹಾಟ್ ​ಸ್ಪಾಟ್ ಆಗಿರುವ ಪಾದರಾಯನಪುರದಲ್ಲಿ ಜನರ ದರ್ಬಾರ್ ಜೋರಾಗಿದೆ.

ಕಂಟೇನ್ಮೆಂಟ್​ ಜೋನ್ ಆಗಿದ್ರೂ ಸಲೂನ್​ಗಳು, ಬಾರ್ ಓಪನ್ ಆಗಿವೆ. ಜನ ಕೊರೊನಾ ಮರೆತು ಓಡಾಡುತ್ತಿದ್ದಾರೆ. ಬೆಳಗ್ಗೆನೆ ಎಣ್ಣೆ ಖರೀದಿಸಲು ಜನ ಬರ್ತಿದ್ದಾರೆ. ಇನ್ನು ಸಲೂನ್​ಗಳು ಓಪನ್ ಆಗಿದ್ದು, ಸಲೂನ್​​ಗೆ ಹೋಗೋರು ಬರೋರಿಂದ ಕೊರೊನಾ ಹೆಚ್ಚಾಗುವ ಆತಂಕ ಶುರುವಾಗಿದೆ. ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೆ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಡೇಂಜರ್​​ ಜೋನ್​ನಲ್ಲಿ ಸಲೂನ್ ತೆರೆದು ರಿಸ್ಕ್​ಗೆ ಆಹ್ವಾನಿಸಿದ್ದಾರೆ.

ಪಾದರಾಯನಪುರದಲ್ಲಿ ಓಲಾ, ಉಬರ್ ಓಡಾಟ:
ಮತ್ತೊಂದು ಶಾಕಿಂಗ್ ಎನ್ನುವಂತೆ ಓಲಾ, ಉಬರ್​ಗಳು ಪಾದರಾಯನಪುರದಲ್ಲಿ ಓಡಾಡುತ್ತಿವೆ. ಇದರಿಂದ ಓಲಾ, ಉಬರ್, ಟ್ಯಾಕ್ಸಿಯಲ್ಲಿ ಪ್ರಯಾಣಿಸುವವರು ಹುಷಾರಾಗಿರಬೇಕು, ಚೂರು ಯಾಮಾರಿದ್ರೂ ಜೀವಕ್ಕೇ ಕಂಟಕವಾಗಲಿದೆ. ಕಂಟೇನ್ಮೆಂಟ್ ಜೋನ್​ಗಳಲ್ಲಿ ಪಿಕಪ್ & ಡ್ರಾಪ್​ಗಾಗಿ ವಾಹನಗಳು ಓಡಾಡುತ್ತಿವೆ.

Published On - 10:05 am, Thu, 21 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us